ಸಂಚಿಕೆ ೬
vedike.jpg

- ರಂಜನಿ ಸುರೇಶ್

ಡಿಸೆಂಬರ್ ೩ ಕರ್ನಾಟಕ ಸಂಘ ದುಬೈಗೆ ಅವಿಸ್ಮರಣೀಯ ದಿನವಾಗಿತ್ತು. ಹಿರಿಯರೂ ಗೌರವಾನ್ವಿತರೂ ಖ್ಯಾತ ಕವಿಗಳೂ ರಾಷ್ಟ್ರ ಕವಿ ಬಿರುದಾಂಕಿತರೂ ಆಗಿರುವ ಡಾ ಜಿ ಎಸ್ ಶಿವರುದ್ರಪ್ಪ ಮತ್ತು ಅವರ ಸಹಧರ್ಮಿಣಿ ರುದ್ರಾಣಿ ದಂಪತಿಗಳನ್ನು ಅಭಿನಂದಿಸುವ ಅವಕಾಶ ಲಭಿಸಿದ್ದು ಸಂಘಕ್ಕೆ ಒಂದು ಅಪೂರ್ವವಾದ ಗೌರವವಾಗಿತ್ತು.   ಪೂರ್ತಿ ಓದಿ... »

710_1.jpg


ಯು ಎ ಇ ಯಲ್ಲಿ ಕರ್ನಾಟಕದ ವಿವಿಧ ಸಂಘ ಸಂಸ್ಥೆಗಳು ಚಾಲನೆಯಲ್ಲಿದ್ದರೂ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ವೇದಿಕೆಯೊಂದು ಕಾಣಿಸಿಕೊಂಡದ್ದೇ ಅಪರೂಪ. ಈ ಕೊರತೆ ನಿವಾರಿಸಲು ಅನೇಕ ಮಂದಿ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ.   ಪೂರ್ತಿ ಓದಿ... »

kwt prakash.jpg

 

ಕುವೈತ್ ಕನ್ನಡ ಕೂಟವು ಹೃದಯವಾಹಿನಿ ಸಹಯೋಗದೊಂದಿಗೆ ಕುವೈತ್ ನಲ್ಲಿಆಯೋಜಿಸಿದ್ದ ವಿಶ್ವ ಕನ್ನಡ ಸಾಂಸ್ಕ್ರತಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ದುಬೈಯ ಪ್ರಕಾಶ್ ರಾವ್ ಪಯ್ಯಾರ್ ಅವರನ್ನು ಹೊರನಾಡಿನಲ್ಲಿ ಕನ್ನಡ ಬಾಷೆ ಮತ್ತು ಸಂಸ್ಕ್ರತಿಗೆ ಸಲ್ಲಿಸುತ್ತಿರುವ ಸೇವೆಗಾಗಿ ಸಮ್ಮೇಳನಾಧ್ಯಕ್ಷ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.   ಪೂರ್ತಿ ಓದಿ... »

srinath.jpg

- ಶ್ರೀನಾಥ್ ಭಲ್ಲೆ 

ಹಿಂದಿನ ರಾತ್ರಿ ಬಹಳ ಯಾತನೆಯಾಗಿ ಆಸ್ಪತ್ರೆಗೆ ಸೇರಿದ್ದೆ. ಹೊರಗೆ ಏನು ನೆಡೆದಿದೆ ಎಂದಾಗಲಿ, ನನಗಾಗಿ ಯಾರು ಕಾದಿದ್ದರೆ ಎಂದಾಗಲಿ ಒಂದೂ ಅರಿಯೆ. ಬೆಳಿಗ್ಗೆಯೂ ಹಾಗೇ ನೋವು ಇದ್ದೇ ಇತ್ತು. ಕಣ್ತೆರೆಯ ಹೊರಟರೆ ರೆಪ್ಪೆಗಳು ಅನುಮತಿ ನೀಡಲಿಲ್ಲ. ಮನವೂ ಒಪ್ಪಲಿಲ್ಲ.   ಪೂರ್ತಿ ಓದಿ... »

- ಆರ್ ಶ್ರೀನಾಗೇಶ್ 

ಹದಿ ಹರೆಯದ ಮಕ್ಕಳನ್ನು ಸಾಕುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದುವರೆಗೆ ಹೇಳಿದಂತೆ ಕೇಳುತ್ತಿದ್ದ ಮಕ್ಕಳು ಎದುರುತ್ತರ ಕೊಡಲು ಪ್ರಾರಂಭಿಸುತ್ತಾರೆ. ತಮ್ಮತನವನ್ನು ಪ್ರತಿಪಾದಿಸಲು ಹೊರಡುತ್ತಾರೆ. ಸಿಡುಕುತ್ತಾರೆ. ವ್ಯಸನಗಳನ್ನು ಕಲಿಯುತಾರೆ. ಅಳುತ್ತ ಕೂರುತ್ತಾರೆ. ನಿದ್ದೆ ಮಾಡುತ್ತಾರೆ. ಊಟ ಮಾಡುವುದಿಲ್ಲ.   ಪೂರ್ತಿ ಓದಿ... »

tvsnew.JPG

- ತಳಕು ಶ್ರೀನಿವಾಸ, ಮುಂಬೈ


ನಾನೊಂದು ಸೊಳ್ಳೆ
ಎಲ್ಲರ ರಕ್ತವ ಹೀರಿ ಬದುಕುವ
ಹಿಡಿಮುಷ್ಟಿಗಳ ಏಟಿಗೆ ತತ್ತರಿಸಿ ಬೀಳುವ
ಸೊಳ್ಳೆ - ಕೆಲವರ ಮಾತಲಿ ತೊಳ್ಳೆ
ನನ್ನದು ರಕ್ತಾಬೀಜಾಸುರನ ಸಂತತಿ
ನನ್ನ ಕೊಂದರೇನು ...   ಪೂರ್ತಿ ಓದಿ... »

Syndicate

Syndicate content
Syndicate content