ಸಂಚಿಕೆ ೧
shekhar shetty


ಭಾರತದ ಅತ್ಯಂತ ವೈವಿಧ್ಯಮಯ ಪ್ರವಾಸಿ ತಾಣ, ಬೇರೆಲ್ಲೂ ಕಂಡು ಬಾರದ ಸೌಂದರ್ಯವಿರುವುದು ಕರ್ನಾಟಕದಲ್ಲಿ. ಇಂತಹ ನಮ್ಮ ತಾಯಿನಾಡಿನ ಪ್ರಕೃತಿ ಸೌಂದರ್ಯ, ಶಿಲ್ಪ ವೈಭವ, ಕಡಲ ಕಿನಾರೆ, ವನ - ವನ್ಯ ಸಂಪತ್ತು, ಜಲಧಾರೆಗಳು, ಜನಪದ ಆಚರಣೆ, ಸಾಂಪ್ರದಾಯಿಕ ಉತ್ಸವ ಇಂತಹ ಸ್ವರ್ಗರೂಪಿ ವೈಭವದ ನಮ್ಮೂರನ್ನು ಬಿಟ್ಟು ಗಲ್ಫ್ ನಾಡಿಗೆ ಬರುವಾಗ ಬರಿ ಮರಳುಗಾಡು ಎಂಬ ಭಾವನೆ. ಉದ್ಯೋಗವನ್ನು ಹರಸಿ ಬರುವ ಲಕ್ಷೋಪಲಕ್ಷ ಜನರಿಗೆ ಬಂದ ನಂತರ ಜಗತ್ತಿನಾದ್ಯಂತ ವೈವಿಧ್ಯಮಯ ಉದ್ಯಮಗಳ ಬೃಹತ್ ಸಂಕೀರ್ಣಗಳು, ಸ್ವಚ್ಛವಾದ ದಾರಿಗಳು, ರಾತ್ರಿಯಾದರೆ ನೂತನ ವರ್ಣಮಯ ಲೋಕವನ್ನು ಸೃಷ್ಟಿ ಮಾಡುವ ದಾರಿ ದೀಪಗಳು, ಭೂಮಿಯ ಮೇಲೆ ಸ್ವರ್ಗಲೋಕದ ಸೃಷ್ಟಿ, ರಸ್ತೆ ಮೇಲೆ ಶಿಸ್ತು ಬದ್ಧವಾಗಿ ಚಲಿಸುವ ವಾಹನಗಳು, ಇಕ್ಕೆಲಗಳಲ್ಲಿ ಹಸಿರು ಹುಲ್ಲಿನ ಹಾಸು, ವಿವಿಧ ಆಕರ್ಷಕ ಹೂರಾಶಿ, ಉದ್ಯಾನವನಗಳು, ಸಮಯ ನಿಷ್ಠ ಶಿಸ್ತಿನ ಕೆಲಸದಲ್ಲಿ ತೊಡಗಿರುವವರ ಮುಖದರ್ಶನ ಪ್ರತಿನಿತ್ಯದ ನೋಟ. ಪ್ರತಿಯೊಬ್ಬರು ಸುರಕ್ಷಿತರು, ಕಳ್ಳರ ಭಯವಿಲ್ಲ, ದರೋಡೆ ಕೊಲೆಯ ಅಂಜಿಕೆಯಿಲ್ಲ, ಬಂದ್-ಹರತಾಳದ, ಕಲ್ಲುತೂರಾಟದ ದೃಶ್ಯ ಇಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗುವುದಿಲ್ಲ. ಇಂತಹ ಈ ಗಲ್ಫ್ ನಾಡಿನಲ್ಲಿ ಭಾರತದ ವಿವಿಧ ಪ್ರದೇಶದವರಂತೆ ಕನ್ನಡಿಗರು ದಶಕಗಳಿಂದ ಗೌರವಯುತವಾಗಿ ಇಲ್ಲಿ ನೆಲೆಸಿದ್ದಾರೆ. ಈ ನಾಡಿನ ಶ್ರೀಮಂತಿಕೆಯಲ್ಲಿ ಭಾರತೀಯರ ಕೊಡುಗೆ ಅತ್ಯಮೂಲ್ಯವಾದದ್ದು. ಅದರಲ್ಲಿಯೂ ಕನ್ನಡಿಗರು ಬೃಹತ್ ಉದ್ಯಮ, ವ್ಯಾಪಾರ - ವಹಿವಾಟು ಮಾಡಿ ರಾಷ್ಟ್ರದ ವಿತ್ತ ಸಂಪತ್ತಿನಲ್ಲಿ ತಮ್ಮ ಪಾಲು ಸಿಂಹ ಪಾಲು ಎಂಬುದನ್ನು ಸಾಕ್ಷೀಕರಿಸಿದ್ದಾರೆ. ಇಂತವರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ಬರುವವರು ನಮ್ಮ ಶೇಖರ ಬಾಬು ಶೆಟ್ಟಿಯವರು.   ಪೂರ್ತಿ ಓದಿ... »

ಡುಂಡಿರಾಜ್

- ಗೋಪೀನಾಥ ರಾವ್

"ಪಾಡ್ಯ ಬಿದಿಗೆ ತದಿಗೆ" ಓದಿದ ದಿನದಿಂದಲೂ ಡುಂಡಿರಾಜ್ ಅವರನ್ನು ಕಂಡು ಮಾತಾಡಿಸಬೇಕು ಎನ್ನುವ ನನ್ನೊಳಗಿನ ತುಡಿತ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಕಾರಣಗಳು ಹಲವಾರು. ಸಿಗುವ ಇಪ್ಪತ್ತೋ ಇಪ್ಪತ್ತೆರಡೋ ದಿನದ ರಜೆಗಳಲ್ಲಿ ನಾನೆಣಿಸಿದಂತೆ ವ್ಯವಹಾರಗಳು ನಡೆದದ್ದೇ ಕಡಿಮೆ. ಎದುರಿಗೆ ಸಿಕ್ಕಿದವನೇ ಆತ್ಮೀಯ, ಮಾಡಿ ಮುಗಿಸಿದ್ದೇ ಆಗಬೇಕಾಗಿದ್ದ ಕೆಲಸ ಎಂದು ಕೊಂಡು ಹೋದ ದಾರಿಗೇ ದನ ಹೊಡೆಯುತ್ತಾ ರಜೆ ಪೂರೈಸಿ ಬರುತ್ತಿದ್ದ ವರ್ಷಗಳಲ್ಲಿ ನಡುವೆ ಒಮ್ಮೆ ಸಿಕ್ಕಿದ ಸಮಯದಲ್ಲಿ ಡುಂಡಿರಾಜರ ಬಗೆಗೆ ವಿಚಾರಿಸಿದಾಗ "ಅವರೀಗ ಬೆಳಗಾವಿಯೋ ಬಿಜಾಪುರವೋ ಅಂತ ಕಾಣುತ್ತೆ" ಎಂಬ ಉತ್ತರ ಸಿಕ್ಕಿತ್ತು. ಈ ಬಾರಿ ರಜೆಯ ಸಿದ್ಧತೆಯಾಗುತ್ತಿದ್ದಂತೆ ಅವರು ಮಂಗಳೂರಿನಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಶ್ರೀವತ್ಸ ಜೋಶಿಯವರನ್ನು ಕೇಳಿ ತಿಳಿದುಕೊಂಡಿದ್ದೆ. ಮಂಗಳೂರಲ್ಲಿ ಅವರ ಸದ್ಯದ ಟೆಲಿಫೋನ್ ನಂಬ್ರ ನಾ ದಾ ಶೆಟ್ಟಿಯವರಲ್ಲಿ ಸಿಕ್ಕಿತು. ನಾಳೆ ಬನ್ನಿ ಎಂದರೆ ಪರವಾ ಇಲ್ಲ, ನಾಳದು ಬನ್ನಿ ಎಂದರೆ ಆಗುವುದಿಲ್ಲ, ಬರುವ ವಾರ ಬೆಂಗಳೂರಿಗೆ ಹೋಗಬೇಕು ಎಂಬಿತ್ಯಾದಿ ಕಟ್ಟುಪಾಡುಗಳ ನಡುವೆ ಅವರಿಗೆ ಫೋನ್ ಮಾಡಿದೆ. ಯಾವಾಗ ಬೇಕಿದ್ದರೂ ಬನ್ನಿ ಎನ್ನುವ ಡುಂಡಿರಾಜರ ಉತ್ತರ ಬಹಳಷ್ಟು ನೆಮ್ಮದಿ ನೀಡಿತ್ತು.   ಪೂರ್ತಿ ಓದಿ... »

ಗೋಪಿನಾಥ್ ರಾವ್

- ಗೋಪೀನಾಥ ರಾವ್

(ಶ್ರೀ ಮಹಾಬಲ ಮೂರ್ತಿ ಕೊಡ್ಲೆಕೆರೆಯವರ ಸಂಪಾದಕತ್ವದ "ಒಂದಲ್ಲ ಒಂದೂರಿನಲ್ಲಿ" ಪತ್ರಿಕೆಯ ಪ್ರಥಮ ಸಂಚಿಕೆಯಲ್ಲಿ ಪ್ರಕಟವಾದ ಕಥೆ)

ಆಗಲೇ ರಾತ್ರಿ ಹತ್ತುಗಂಟೆಯಾಗಿತ್ತು. ಶ್ರೀಧರ್ ಬಂದವರೇ ಕೈತೊಳೆದು ಬಂದು ಊಟಕ್ಕೆ ಕೂತರು. ತಟ್ಟೆ ತಂದಿಟ್ಟ ಸೀಮಾ ಅಲ್ಲೆ ನಿಂತಳು. ಏನೋ ಹೇಳಲಿಕ್ಕಿದೆ, ಒಂದೆರಡು ತುತ್ತು ಊಟ ಮಾಡಿ ಸುಧಾರಿಸಿಕೊಳ್ಳಲಿ ಎಂದು ಕಾಯುತ್ತಿರುವಂತೆ ನಿಂತಿದ್ದ ಹೆಂಡತಿಯನ್ನು ಗಮನಿಸಿಯೂ ಗಮನಿಸದಂತೆ ಊಟ ಮುಂದುವರೆಸಿದರು ಶ್ರೀಧರ್.

"ಶ್ವೇತಾ ಗರ್ಭಿಣಿಯಂತೆ" ಮೆಲ್ಲನೆ ಹೇಳಿದಳು ಸೀಮಾ.

"ಯಾವ ಶ್ವೇತಾ?" ಊಟ ಮುಂದುವರೆಸುತ್ತಲೇ ಕೇಳಿದರು ಶ್ರೀಧರ್.

"ರೇಣುಕಪ್ಪನೋರ ಮಗಳು"

"ಚಿಕ್ಕ ಹುಡುಗಿ ಅಂದ್ಕೊಂಡಿದ್ದೆ. ರೇಣುಕಪ್ಪ ಮಗಳ ಮದುವೆ ನಮಗೆ ಆಮಂತ್ರಣ ಕೊಟ್ಟಿದ್ನಾ? ನಾವು ಹೋಗಿದ್ದೆವಾ? ನನಗೊಂದೂ ನೆನಪಿಲ್ಲ" ಕಮ್ಯೂನಿಟಿಯವರ ಬಗೆಗೆ ಇದೇ ರೀತಿ ವರದಿ ಒಪ್ಪಿಸುತ್ತಿದ್ದ ಮಡದಿಯ ಮಾಮೂಲು ಮಾತಿದು ಅನ್ನುವಂತೆ ಅದಕ್ಕೊಪ್ಪುವ ಉತ್ತರವಿತ್ತರು ಶ್ರೀಧರ್.   ಪೂರ್ತಿ ಓದಿ... »

- ಮೃಣಾಲಿನಿ ಉದಯ್ ಕುಮಾರ್, ನ್ಯೂಜಿಲೇಂಡ್

ವರ್ಷವಿಡೀ ಸಭೆಯೊಳಗೆ ಬೆತ್ತಲಾದವಳಿಗೆ
ಇಂದು ಜರತಾರಿಯುಡಿಸಿ ಮೆರವಣಿಗೆ
ನಿತ್ಯ ಕಣ್ಣೀರಲೆ ಕೈತೊಳೆಯುವವಳಿಗೆ
ಬೇಕೆ ಈ ದಿನ ಹುಟ್ಟುಹಬ್ಬದ ಕೊಡುಗೆ?

ಕರ್ನಾಟಕ ಹೆಸರಾಗಿತ್ತು ಗಂಡೆದೆಯ ಕಲಿಗಳಿಗೆ
ಇಂದು ಕುತಂತ್ರವೆ ಆಯುಧ ರಾಜಕಾರಣಿಗಳಿಗೆ
ದಿನನಿತ್ಯ ಕುರುಕ್ಷೇತ್ರ ಕದನ ನಡೆದಿದೆ ಕುರ್ಚಿಗೆ
ಮನೆಯೆ ಮಸಣವಾಗಿರಲು ಹಬ್ಬ ಬೇಕೆ ತಾಯಿಗೆ?   ಪೂರ್ತಿ ಓದಿ... »

- ತಳಕು ಶ್ರೀನಿವಾಸ, ಮುಂಬೈ

ವಸ್ತುಗಳನ್ನು ಮಾರಾಟ ಮಾಡಲು ಹಲವು ಬಗೆಯ ತಂತ್ರಗಳನ್ನು ಮಾಡುವುದನ್ನು ನಾವುಗಳು ಪ್ರತಿದಿನವೂ ಪ್ರತಿಹಂತದಲ್ಲೂ ಕಾಣಬರುತ್ತೇವೆ. ೩೦-೩೫ ವರ್ಷಗಳ ಹಿಂದೆ ರೇಡಿಯೋ, ಪತ್ರಿಕೆ ಅಥವಾ ಟಿವಿ ಮಾಧ್ಯಮದಲ್ಲಿ ವಸ್ತುವಿನ ಬಗ್ಗೆ ಜಾಹೀರಾತು ಬಂದರೆ ಸಾಕು, ಅದನ್ನೇ ಹೆಚ್ಚಿನ ಜನಗಳು ಕೊಳ್ಳುತ್ತಿದ್ದರು. ಅದಾದ ಹತ್ತು ವರ್ಷಗಳ ತರುವಾಯ ಪುರುಷರು ಸುಲಭವಾಗಿ ಜಾಹೀರಾತುಗಳ ತಂತ್ರಕ್ಕೆ ಮಣಿಯದ್ದನ್ನು ಕಂಡು, ಸ್ತ್ರೀಯರ ಮೂಲಕ ಜಾಹೀರಾತು ಮಾಡುವುದು, ಮನೆ ಮನೆಗಳಿಗೆ ಹೋಗಿ ವಸ್ತುಗಳ ಬಗ್ಗೆ ತಿಳಿಸಿ ಕೊಳ್ಳುವಿಕೆಗೆ ಒತ್ತಾಯಿಸುವುದು ಕಂಡುಬಂದಿತು. ಈಗೊಂದು ಐದಾರು ವರುಷಗಳಿಂದ ಮಕ್ಕಳನ್ನು ಪುಸಲಾಯಿಸಿ ವಸ್ತುಗಳ ಮಾರಾಟದ ಬಗ್ಗೆ ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಇದೇನು ಹೊಸ ವಿಷಯವೇನಲ್ಲ. ಬಹಳ ಹಿಂದಿನಿಂದಲೂ ಇದ್ದದ್ದೇ. ಈಗೀಗ ನಾನು ಕಾಣುತ್ತಿರುವ ಒಂದು ವಿಧವನ್ನು ಬರಹ ರೂಪಕ್ಕೆ ಇಳಿಸುತ್ತಿರುವೆನಷ್ಟೆ. ಇದು ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು.   ಪೂರ್ತಿ ಓದಿ... »


-- ಮೋಹನ್ ಕೃಷ್ಣ ಟಿ.ಕೆ

ಸುವರ್ಣಾಕ್ಷರಗಳಲ್ಲಿ ಲಿಖಿತ ಇತಿಹಾಸವೀಗ ಗತಕಾಲದ ಗೊಡ್ಡು ಪುರಾಣ
ಸರ್ವತಂತ್ರ ಸ್ವತಂತ್ರ ಗಣತಂತ್ರವೀ ಭಾರತ
ಭ್ರಷ್ಟರನ್ನೇ ಆಯ್ಕೆಗೊಳಿಸುವ ದುರ್ಬಲ ಚುನಾವಣಾಪದ್ಧತಿ
ಓಟಿಗಾಗಿ ಪ್ರಜೆಗಳಿಗೆ ಕುಡಿಸಿದ್ದು ಧರ್ಮದ ಅಫೀಮು !   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

-ಗುರು ಬಬ್ಬಿಗದ್ದೆ

ಮರೆಯಬೇಡ ಮರೆಯಬೇಡ ಮರೆಯಬೇಡ ಎನ್ನ
ಮರೆತರೆ ಮರೆಯಾಗುವೆ ಮನದಿಂದ ಚಿನ್ನ
ಮದನನ ಮದವೇರಿದ ಮನಸಿದು ಮಾಗುವ ಮುನ್ನ
ಮಾಮರದ ಮಾರ್ದನಿಗೆ ಮಾಲೆಯ ಹಾಕುವ ಮುನ್ನ ೧

ಮಸುಕಾಗಿದೆ ಮಬ್ಬಿನಲಿ ಮಿಸುಕಾಡಿದೆ ಮುಖವು
ಮನಗಾಣಿಸು ಮಮತೆಯಲಿ ಮರಳಿದೆ ಸುಖವು
ಮಹನೀಯಳೆ ಮಾಣಿಕ್ಯವೆ ಮೆಚ್ಚಿದೆ ನಿನ್ನನ್ನ
ಮಾಂತ್ರಿಕ ಮೃದು ಸ್ಪರ್ಶಕೆ ಮಾಗಿದೆ ಮೈ ಬಣ್ಣ ೨   ಪೂರ್ತಿ ಓದಿ... »

Syndicate

Syndicate content
Syndicate content