- ಆರ್ ಶ್ರೀನಾಗೇಶ್
ಹದಿ ಹರೆಯದ ಮಕ್ಕಳನ್ನು ಸಾಕುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದುವರೆಗೆ ಹೇಳಿದಂತೆ ಕೇಳುತ್ತಿದ್ದ ಮಕ್ಕಳು ಎದುರುತ್ತರ ಕೊಡಲು ಪ್ರಾರಂಭಿಸುತ್ತಾರೆ. ತಮ್ಮತನವನ್ನು ಪ್ರತಿಪಾದಿಸಲು ಹೊರಡುತ್ತಾರೆ. ಸಿಡುಕುತ್ತಾರೆ. ವ್ಯಸನಗಳನ್ನು ಕಲಿಯುತಾರೆ. ಅಳುತ್ತ ಕೂರುತ್ತಾರೆ. ನಿದ್ದೆ ಮಾಡುತ್ತಾರೆ. ಊಟ ಮಾಡುವುದಿಲ್ಲ.
ಹೀಗೆ ಹಲವು ಹತ್ತು ಸಮಸ್ಯೆಗಳು ಎದುರಾಗುತ್ತವೆ. ಅದರಿಂದ ಮನೆಯಲ್ಲಿ ಕಿರಿ ಕಿರಿ. ಸದಾ ಮನೆಯಲ್ಲಿ ಅಶಾಂತಿ.ಇತ್ತ ಮಕ್ಕಳಿಗೆ ಸಲಿಗೆ ಕೊಟ್ಟು ಹಾಳು ಮಾಡಿದ್ದೀಯ ಎಂದು ಗಂದ ಬೈದರೆ ಮಕ್ಕಳ ಮತ್ತು ಗಂಡನ ನಡುವೆ ಸಮತೋಲನ ಕಾಯ್ದುಕೊಂಡು ಮನೆಯನ್ನು ನಿಭಾಯಿಸಿಕೊಂಡು ಹೋಗಬೇಕಾದ ಪಾಡು ಗೃಹಿಣಿದು ಅನೇಕ ಮನೆಗಳಲ್ಲಿ. ಕೆಲವು ಮನೆಗಳಲ್ಲಿ ಸಿಡುಕುವ ಕಾಡುವ ಗೃಹಿಣಿಯ ನಡುವೆ ತಮ್ಮ ಶಾಂತಿ ಕಂಡುಕೊಂಡು ಜೀವನ ಸಾಗಿಸಬೇಕಾದ ಪ್ರಸಂಗಗಳೂ ಇವೆ!
ಇದಕ್ಕೆ ಪರಿಹಾರ ಇದೆಯಾ?
ಕಳೆದ ೧೪ ವರ್ಷಗಳಿಂದ ಯುವ ಜನತೆಗೆ ಮಾರ್ಗದರ್ಶನ ನೀಡುತ್ತ ಬಂದಿರುವ ನನ್ನ ಅನುಭವದಲ್ಲಿ ಅನೇಕ ಸಲ ಕೇಳಿಬರುವ ಪ್ರಶ್ನೆ ಇದು.
ಪರಿಹಾರ ಖಂಡಿತ ಇದೆ. ಮನೆಯಲ್ಲಿ ಸೌಹಾರ್ದ ಮೂಡಿಸುವುದು ಮುಖ್ಯ. ಮನೆ ಜನರೊಟ್ಟಿಗೆ ಮಧುರ ಬಾಂಧವ್ಯ ಬೆಳೆಸಿಕೊಂಡು ಹೋಗಬೇಕಾದ ನಿಯಮ ವನ್ನು ಕುಟುಂಬಗಳು ಪಾಲಿಸಬೇಕು. ಜಗಳ ಆಡುವುದು ಹೇಗೆ ಎಂಬುದನ್ನು ಕಲಿಯಬೇಕು. ಸಮಸ್ಯೆಳಿಗೆ ಪರಿಹಾರ ಹುಡುಕುವ ಮಾರ್ಗ ಅನುಸರಿಸಬೇಕು, ಸಮಸ್ಯೆಗಳಿಗೆ ದೂಷಿಸುವ ಮಾರ್ಗ ಅಲ್ಲ.
ಮುಂದಿನ ಲೇಖನಗಳಲ್ಲಿ ಇವುಗಳ ಬಗ್ಗೆ ಪ್ರಸ್ತಾಪಿಸುವ ಉದ್ದೇಶ ನನ್ನದು. ಈ ಕಾಣಿಕೆಯನ್ನು ಒಂದು ಮುನ್ನುಡಿ ಎಂದು ಭಾವಿಸಬಹುದು!









Nice topic.Writing on these
Nice topic.Writing on these sort of topics from expirience is really appreciable. The present topic needs more practical senarios demostrated rather than just DOs and DONTs.
--:)--
waiting to get more details
waiting to get more details of this article