-ಅರ್ಶದ್ ಹುಸೇನ್ ಎಂ.ಹೆಚ್
1985ರಲ್ಲಿ ಸ್ಕಾಟ್ಲೆಂಡಿನ ಆರ್ಕೆನೀಯ ಡಿಯರ್ನೆಸ್ ಎಂಬ ಸಮುದ್ರತೀರದಲ್ಲಿ ವೈಲೀ ಡೋನಾಲ್ಡ್ ಎಂಬ ಹನ್ನೊಂದು ವರ್ಷದ ಹುಡುಗನೊಬ್ಬ ಒಂದು ಬಾಟಲಿಯಲ್ಲಿ ಸಂದೇಶನ್ನು ಬರೆದ ಚೀಟಿಯನ್ನಿಟ್ಟು ಸಮುದ್ರಕ್ಕೆಸೆದಿದ್ದ. ಹೀಗೆ ಸಮುದ್ರಕ್ಕೆಸೆದ ಬಾಟಲಿಗಳು ನೀರಿನಲ್ಲಿ ತೇಲುತ್ತಾ ಎಲ್ಲೆಲ್ಲೋ ಹೋಗಿ ತಲುತ್ತವಂತೆ ಎಂದು ತನ್ನ ತಾಯಿ ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಬಾಲಕ ಇದೇ ಮಾದರಿಯಲ್ಲಿ ಹಲವಾರ್ ಬಾಟಲಿಗಳನ್ನು ನೀರಿಗೆಸೆದಿದ್ದ. ಸುಮಾರು ಇಪ್ಪತ್ತಮೂರು ವರ್ಷಗಳ ಕಾಲದ ಬಳಿಕ ಇಂತಹದ್ದೊಂದು ಬಾಟಲಿ ಸ್ಕಾಟ್ಲೆಂಡಿನ ಪಶ್ಚಿಮ ತೀರದಲ್ಲಿ ಎಷ್ಟೋ ಸಾವಿರ ಮೈಲುಗಳಾಚೆ ಸೆಂಟ್ ಆಂಡ್ರ್ಯೂಸ್ ಎಂಬ ಸಮುದ್ರತೀರವನ್ನು ಸ್ವಚ್ಛಗೊಳಿಸುತ್ತಿದ್ದ ಮೇರಿ ಸ್ಟೀವನ್ಸ್ ಎಂಬಾಕೆಗೆ ಸಿಕ್ಕಿತ್ತು. ಅದರಲ್ಲಿದ್ದ ಚೀಟಿಯನ್ನು ಓದಿದ ಆಕೆ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಗೂ ಸಮುದ್ರತೀರ ಸ್ವಚ್ಛತಾ ಆಂದೋಲನ ಅಧಿಕಾರಿಗಳಿಗೆ ಒಪ್ಪಿಸಿದ್ದಳು. ಆ ಬಳಿಕ ವಿಳಾಸದಾರರನ್ನು ಪತ್ತೆ ಮಾಡಿ ವೈಲೀಯ ಕೈಗೆ ಆ ಸಂದೇಶವನ್ನು ಒಪ್ಪಿಸಲಾಯಿತು.
ತಾನು ಇಪ್ಪತ್ತಮೂರು ವರ್ಷಗಳ ಹಿಂದೆ ಎಸೆದಿದ್ದ ಪತ್ರವನ್ನು ಮರಳಿ ಪಡೆದ ವೈಲೀ ಆಶ್ಚರ್ಯಚಕಿತನಾದ. ಈ ಹಿಂದೆ ನಾರ್ವೆ ಹಾಗೂ ಡೆನ್ಮಾರ್ಕ್ ದೇಶಗಳಿಂದಲೂ ತಾನೆಸೆದ ಸಂದೇಶಗಳಿಗೆ ಮಾರುತ್ತರ ದೊರಕಿದೆ ಎಂದು ಈಗ ಮೂವತ್ತಮೂರು ವರ್ಷದವನಾಗಿರುವ ಡೋನಾಲ್ಡ್ ತಿಳಿಸಿದ್ದಾರೆ. ಹೀಗೆ ಹಿಂದೆಪಡೆದ ಸಂದೇಶಗಳನ್ನು ಅವರು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ.
ಕೃಪೆ: ಬಿಬಿಸಿ.








