ಆಸೆ ..............................
 •    •  
ranjita.jpg

         -ರಂಜಿತಾ ಹೆಗಡೆ 

ಇನಿಯಾ , ...
ನೀ ಬರುವ  ದಾರಿಯಲಿ
ಹೂಮಳೆಯ ಚೆಲ್ಲಿ ,
ಮುತ್ತಿನ ರತ್ನಗಂಬಳಿ
ಹಾಕುವ ಬಯಕೆ ....!
       ನಕ್ಕು ನಲಿಯುತಾ
     ನೋವ ಮರೆಯುತಾ
    ಕೈಯೊಳಗೆ ಕೈ ಇಟ್ಟು
    ನಿನ್ನೊಡನೆ ಬರುವಾಸೆ ......
      ಗೆಳೆಯಾ ,
ನೀನೊಮ್ಮೆ  ನಕ್ಕು ಬಿಡು
ನಾನೊಮ್ಮೆ  ನಗಿಸುವೆ
ಆಹಾ !
ಅದು ಸ್ವರ್ಗವೇ
ಧರೆಗಿಳಿದ ಸಮಯಾ
         ಮುಂಜಾನೆಯ ಮಂಜಿನಲಿ
         ಮುತ್ತು ಮಾಲೆಯ ಹೊತ್ತು
         ನಿನ್ನಂತರಂಗದಲಿ
         ನನ್ನೀ ಮನಸ ಬೆರೆಸಿ
          ಅಮೃತದ ಸಿಂಚನ
          ಮಾಡುವಾಸೆ  ನಲ್ಲಾ ,
ಒಮ್ಮೆ ಮುದ್ಡಿಸಿ
ಇನ್ನೊಮ್ಮೆ ಮುತ್ತಿಕ್ಕಿ
ಸುರಿಸು ಪ್ರತಿ ಮಾತಿನಲೂ
ಪ್ರೀತಿಯ  ಮಳೆಯ .........
ನಿನ್ನೀ ಸವಿ ಮಾತ ಸವಿಯುತ
ನಿನ್ನೆದೆಯ ಮೇಲೆ
ಕೊನೆ ಉಸಿರೆಳೆವಾಸೆ
ಇನಿಯಾ ,.......................

Syndicate

Syndicate content