ಅರಳುತಿದೆ ಮಲ್ಲಿಗೆಯು
-ಅರುಣ್ ಕುಮಾರ್ ಹೆಚ್ ಎಸ್.
ನಿನ್ನ ಮುಗುಳುನಗೆಯಲ್ಲಿ
ಹರಡುತಿದೆ ಸ೦ತಸವು
ಸುಳಿಗಾಳಿಯಲ್ಲಿ
ನಿನ್ನೊಲವು ಸವಿಜೇನು
ನಿನ್ನೊಡನೆ ಸವಿನುಡಿಯು
ಮದುರತೆಯು ಮೂಡುತಿದೆ
ಈ ಬಾಳಿನಲ್ಲಿ.
ನಾಚುತಿಹೆ ನೀ ಗೊತ್ತು ನಗಲಿ ಜಗವೆಲ್ಲ
ನಮಗಿಲ್ಲ ಯಾರದೊ ಗೊಡವೆ
ಜಾರುತಿದೆ ಹೊತ್ತು ಬಾ ನನ್ನೊಲವೆ
ನೀಡುವೆನು ಮುತ್ತಿನಾ ಒಡವೆ.
ಜೀವ-ಜೀವದ ಬೆಸುಗೆ
ಜೀವ-ಬಾವದ ಒಸಗೆ
ಜೀವನದಿಗಳ ಮಿಲನ
ಒಲವಿನಾ ಕಡಲಲ್ಲಿ
ರಾಗ ರಾಗಿಣಿಯರ ಸಮ್ಮಿಲನ
ಅನುರಾಗದಲ್ಲಿ.








