.....ನಳಿನಿ ಸೋಮಯಾಜಿ
ಭಯೋತ್ಪಾದನೆ
ಎಲ್ಲಿ ನೋಡಿದರೂ ಹೊಡೆದಾಟ
ಎಲ್ಲೆಂದರಲ್ಲಿ ಬಾಂಬುಗಳ ಸ್ಪೋಟ
ಸಾರ್ವಜನಿಕರಿರುವ ಸ್ಥಳವೇ ಇವರ ಗುರಿ
ಸಾಮಾನ್ಯರ ಸಾವುನೋವೇ ಭಯೋತ್ಪಾದನೆಯ ಪರಿ
ಹವ್ಯಾಸ
ಎಲ್ಲರಲ್ಲೂ ಒಂದೊಂದು ಬಗೆಯ ಒಲವು
ಬಾಳಲ್ಲಿರೂಡಿಸಲು ಅದಕ್ಕೆ ಬೇಕು ಛಲವು
ಸಮಯ ಸಿಕ್ಕಾಗ ಮಾಡುತ್ತಿರಲು ಅಭ್ಯಾಸ
ಬಿಡುವಿನ ವೇಳೆ ಕಳೆಯಲು ಬೆಳೆಸಿ ಹವ್ಯಾಸ
ಅಮೃತ
ಬಾಯಾರಿಕೆಯಾದರೆ ಕುಡಿಯಲು ಬೇಕು ನೀರು
ಮದ್ಯಪಾನದಲ್ಲಿ ಬಾರ್ಲಿ ನೀರೆ ಬೀಯರು
ಓಯಸೀಸ್ ಹುಟ್ಟುವುದು ಭೂಮಿಯ ಚಿಲುಮೆಯಿಂದ
ಮರಭೂಮಿ ಜನರ ದಾಹ ನೀಗುವುದು ಈ ಅಮೃತದಿಂದ
ಚಟ
ಸಿಗದಿರಲು ಊರಲ್ಲಿ ಸಾರಾಯಿ ಹೆಂಡ
ಸಿಕ್ಕಿದ್ದನ್ನು ಕುಡಿವ ಚಟಕ್ಕೆ ಬಲಿಬಿದ್ದ ಭಂಡ
ತಿಳಿದರೂ ಕಳ್ಳಭಟ್ಟಿ ಮಿಥೇನ್ ವಿಷದ ಬುತ್ತಿ
ಕುಡಿಕುಡಿದು ಸಾಯುವ ಕುಡುಕರ ಪ್ರವೃತ್ತಿ









