ವೈದ್ಯರೂ ನಂಬುವ ಏಳು ಮಿಥ್ಯೆಗಳು
 •    •  
arshad.jpg

ಕಟ್ಟುಕಥೆಗಳನ್ನು ನಂಬದಿರಿ ಎಂದು ಹೇಳುವ ವೈದ್ಯರೇ ನಂಬುವ ಏಳು ಪ್ರಮುಖ ಮಿಥ್ಯೆಗಳನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ಪಟ್ಟಿಮಾಡಿದೆ.
ಮಿಥ್ಯೆ ೧) ನಾವು ನಮ್ಮ ಮೆದುಳಿನ ಸಾಮರ್ಥ್ಯದ ಶೇಖಡಾ ೧೦ನ್ನು ಮಾತ್ರ ಉಪಯೋಗಿಸುತ್ತೇವೆ:
ವಾಸ್ತವಾಂಶ: ವೈದ್ಯರೂ ವಿದೂಶಕರೂ ಸಮಾನವಾಗಿ ಬಳಸುವ ವಾಕ್ಯ ಇದು. ಆದರೆ ಎಮ್.ಆರ್. ಐ ಸ್ಕ್ಯಾನ್, ಪಿ.ಇ.ಟ್ ಸ್ಕ್ಯಾನ್ ಮತ್ತು ಇತರ ಇಮೇಜಿಂಗ್ ವಿವರಗಳು ಮೆದುಳಿನ ಯಾವುದೇ ಜೀವಕೋಶವೂ ಕೆಲಸವಿಲ್ಲದೆ ಇರುವುದಿಲ್ಲವೆಂದು ಸಾಬೀತುಪಡಿಸಿವೆ. ಮೆಟಾಬಾಲಿಕ್ ಅಧ್ಯಯನಗಳೂ ಸಹಾ ಮೆದುಳಿನ ಒಂದೊಂದೂ ನ್ಯೂರಾನ್ ಸದಾಕಾಲ ತನ್ನ ಕಾರ್ಯನಿರ್ವಹಿಸುತ್ತಲೇ ಇರುತ್ತದೆ ಎಂದು ವಿಷದಪಡಿಸಿವೆ. ಪ್ರಾಯಶಃ ಇಪ್ಪತ್ತನೆ ಶತಮಾನದ ಆದಿಯಲ್ಲಿ ಯಶಸ್ಸು ಕಂಡ ವ್ಯಕ್ತಿಗಳು ಇತರರನ್ನು ಅವಹೇಳನ ಮಾಡಲು ತಮ್ಮ ಮೆದುಳಿನ ಸಮರ್ಪಕ ಬಳಕೆ ಮಾಡಲಿಲ್ಲವೆಂದು ಈ ತರಹದ ವ್ಯಾಖ್ಯಾನ ಬಳಕೆಗೆ ಬಂದಿರಬಹುದು. ಹಾಗೂ ಈ ಹೇಳಿಕೆ ಬೇರೆ ಅಂಗಗಳು ೧೦೦% ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತವೆ ಎಂದೂ ಹೇಳಿಲ್ಲ ಆದರೂ ಕೆಲವು ಅಂಗಗಳು ಉದಾಹರಣೆಗೆ ಮಾಂಸಖಂಡಗಳು ಇಚ್ಛೆಯಾಧಾರಿತವಾಗಿದ್ದು ಪ್ರಕ್ರಿಯೆ ಏರುಪೇರಾಗಿರುತ್ತದೆ ಎಂದು ಇಂಡಿಯಾನಾ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಡಾ. ಆರೋನ್ ಕ್ಯಾರೋಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಿಥ್ಯೆ ೨)ನೀವು ಪ್ರತಿದಿನ ಕನಿಷ್ಟ ಎಂಟು ಲೋಟಗಳಷ್ಟು ನೀರು ಕುಡಿಯಲೇಬೇಕು
ವಾಸ್ತವಾಂಶ: ಮನುಷ್ಯನಿಗೆ ಇಂತಿಷ್ಟೇ ನೀರಿನ ಅಗತ್ಯ ಇದೆ ಎಂದು ಯಾವುದೇ ವೈದ್ಯಕೀಯ ಧೃಢೀಕರಣದ ಪುರಾವೆ ಸಿಗುವುದಿಲ್ಲ. ೧೯೪೫ರಲ್ಲಿ ಅಮೇರಿಕದ ನ್ಯೂಟ್ರಿಶನ್ ಕೌನ್ಸಿಲ್ ನಿಗದಿಪಡಿಸಿದ ೮ ಲೋಟಗಳಷ್ಟು ದ್ರವದ ಅವಶ್ಯಕತೆಯೇ ಎಂಟು ಲೋಟಗಳಷ್ಟು ನೀರು ಕುಡಿಯಲು ಬಂದುದಾಗಿದೆ. ಆದರೆ ಈ ದ್ರವಗಳು ಹಣ್ಣುಗಳ, ಲಘುಪಾನೀಯಗಳ ಮುಖಾಂತರ ಲಭಿಸುತ್ತಿರಬಹುದು. ದೈನಂದಿನ ಚಟುವಟಿಕೆಗಳ ಪ್ರಮಾಣವೂ ನೀರಿನ ಅಥವಾ ದ್ರವದ ಅಗತ್ಯತೆಯನ್ನು ಮೇಲೆ ಕೆಳಗಾಗಿಸುತ್ತದೆ. ಹಾಗಾಗಿ ದಿನಕ್ಕೆ ಏಂಟು ಲೋಟ ಮಾತ್ರ ನೀರು ಕುಡಿಯಲೇಬೇಕೆಂಬುದು ಸತ್ಯಕ್ಕೆ ದೂರವಾಗಿದೆ ಎಂದು ಇಂಡಿಯಾನಾ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿರುವ ಡಾ. ರಾಶೆಲ್ ವ್ರೀಮಾನ್ ಅಭಿಪ್ರಾಯಪಟ್ಟಿದ್ದಾರೆ.
ಮಿಥ್ಯೆ ೩)ಕೂದಲು ಮತ್ತು ಉಗುರು ಸಾವಿನ ನಂತರವೂ ಬೆಳೆಯುತ್ತವೆ.
ವಾಸ್ತವಾಂಶ: ಹೆಚ್ಚಿನ ವೈದ್ಯರು ಇದು ಸತ್ಯವೆಂದು ನಂಬಿದ್ದರು. ಆದರೆ ಸಾವಿನ ಬಳಿಕೆ ಇವುಗಳ ಬೆಳವಣಿಗೆ ಅಸಾಧ್ಯವೆಂದು ಅಧ್ಯಯನಗಳು ಸಾಬೀತುಪಡಿಸಿವೆ. ಸಾವಿನ ನಂತರ ಚರ್ಮ ಒಣಗುತ್ತಾ ಬಂದು ಸಂಕುಚಿತಗೊಳ್ಳುತ್ತದೆ. ಆಗ ಉಗುರು ದೇಹ ಜೀವಂತವಿದ್ದಾಗ ಇರುವುದಕ್ಕಿಂತ ಸ್ವಲ್ಪ ಬೆಳೆದಂತೆ ಅನ್ನಿಸುತ್ತದೆ. ಇದು ಹೋಲಿಕೆಯಲ್ಲಿ ದೊಡ್ಡದಾದಂತೆ ಕಂಡುಬಂದಿದ್ದೇ ವಿನಃ ಬೆಳೆದ್ದದ್ದಲ್ಲ ಎಂದು ಡಾ. ರಾಶೆಲ್ ವ್ರೀಮಾನ್ ವಿವರಿಸುತ್ತಾರೆ.
ಮಿಥ್ಯೆ ೪)ಶೇವ್ ಮಾಡಿದ ಬಳಿಕ ಕೂದಲು ಅತಿ ವೇಗವಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ.
ವಾಸ್ತವಾಂಶ: ಶೇವ್ ಮಾಡಿದ ನಂತರ ಬರುವ ಕೂದಲು ವೇಗವಾಗಿ ಬೆಳೆಯುವುದಾಗಲಿ ದಟ್ಟವಾಗುವುದಾಗಲೀ ಸಾಧ್ಯವಿಲ್ಲ. ಇದನ್ನು ೧೯೨೮ರಲ್ಲಿ ನಡೆಸಿದ ಅಧ್ಯಯನಗಳು ಸಾಬೀತುಪಡಿಸಿವೆ. ಶೇವ್ ಮಾಡಿದ ಬಳಿಕ ಬರುವ ಕೂದಲು ಮೊಂಡಾಗಿದ್ದು ದಿನಕಳೆದಂತೆ ತುದಿ ಮೊನಚಾಗುವುದರಿಂದ ಹಿಂದಿನ ದಿನಕ್ಕಿಂತಲೂ ಹೆಚ್ಚು ದಟ್ಟವಾಗಿ ಇರುವಂತೆ ಕಂಡುಬರುತ್ತದೆ. ಅಷ್ಟೇ ಅಲ್ಲದೆ ಶೇವ್ ಮಾಡಿದ ಬಳಿಕ ಬಂದ ಕೂದಲು ಬಿಸಿಲಿನ ಪ್ರಭಾವಕ್ಕೊಳಗಾಗದಿರುವುದರಿಂದ ಕೊಂಚ ದಟ್ಟವಾಗಿ ಕಂಡುಬರಲು ಸಾಧ್ಯವಿದೆ ಎಂದು ವ್ರೀಮಾನ್ ಅವರು ಅಭಿಪ್ರಾಯಪಡುತ್ತಾರೆ.

ಮಿಥ್ಯೆ ೫)ಮಂದ ಬೆಳಕಿನಲ್ಲಿ ಓದುವುದರಿಂದ ದೃಷ್ಟಿ ಮಂದವಾಗುತ್ತದೆ:
ವಾಸ್ತವಾಂಶ: ಮಂದಬೆಳಕಿನಲ್ಲಿ ಓದುವುದರಿಂದ ದೃಷ್ಟಿದೋಶವಾಗಲೀ ಕಣ್ಣಿಗೆ ಶಾಶ್ವತ ಹಾನಿಯುಂಟುಮಾಡುವ ಯಾವುದೇ ಪರಿಣಾವ ಇದುವರೆಗೂ ಯಾವುದೇ ಅಧ್ಯಯನಗಳಿಂದ ಕಂಡುಬಂದಿಲ್ಲ. ಆದರೆ ಕಣ್ಣಿಗೆ ಆಯಾಸ ಮತ್ತು ತಾತ್ಕಾಲಿಕ ಕಣ್ಣು ಮಂಜಾಗುವುದು ಸಾಧ್ಯವಿದ್ದು ಕೊಂಚಕಾಲದ ವಿಶ್ರಾಮದ ಬಳಿಕ ದೃಷ್ಟಿ ಎಂದಿನಂತೆ ಕಾಣಲಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ಮಿಥ್ಯೆ ೬) ಟರ್ಕಿ ಕೋಳಿ ತಿನ್ನುವುದರಿಂದ ನಿದ್ದೆ ಬರುತ್ತದೆ.
ವಾಸ್ತವಾಂಶ: ಇದುವರೆಗೂ ಇದೇ ಸತ್ಯವೆಂದು ಡಾ. ಕ್ಯಾರೋಲ್ ಹಾಗೂ ವ್ರೀಮಾನ್ ಇಬ್ಬರೂ ನಂಬಿದ್ದರು. ಟರ್ಕಿಕೋಳಿಯಲ್ಲಿರುವ ಟ್ರಿಪ್ಟೋಫಾನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣವೆನ್ನು ಮೊದಲು ನಂಬಲಾಗಿತ್ತು. ಆದರೆ ಅಧ್ಯಯನಗಳಿಂದ ಇತರ ಕೋಳಿಗಳಲ್ಲಿರುವ ಅಥವಾ ದನದ ಮಾಂಸಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲವೆಂದು ಸಾಬೀತಾಗಿದೆ. ಸಾಮಾನ್ಯವಾಗಿ ಕೋಲೋಸ್ಸಲ್ ಹಬ್ಬದ ಭರ್ಜರಿ ಊಟಕ್ಕೆ ಟರ್ಕಿ ಕೋಳಿಯೇ ಬೇಕಾಗಿದ್ದು ಊಟದ ಬಳಿಕ ಸೇವಿಸುವ ಮದ್ಯಪಾನ ಎರೆಡೂ ಒಟ್ಟಿಗೆ ಸೇರಿ ನಿದ್ದೆ ಬರಿಸಿರುವುದೇ ಈ ಮಿಥ್ಯೆಗೆ ಮುಖ್ಯ ಕಾರಣವಾಗಿದೆ ಎಂದು ಇಬ್ಬರೂ ವೈದ್ಯರು ಅಭಿಪ್ರಾಯಪಡುತ್ತಾರೆ.
ಮಿಥ್ಯೆ ೭) ಆಸ್ಪತ್ರೆಗಳಲ್ಲಿ ಮೊಬೈಲ್ ಫೋನುಗಳು ಅಪಾಯಕಾರಿ
ವಾಸ್ತವಾಂಶ: ಆಸ್ಪತ್ರೆಗಳಲ್ಲಿ ಮೊಬೈಲು ಉಪಯೋಗಿಸುವುದರಿಂದ ಸಾವುಗಳಾಗಿರುವ ಇದುವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ ಆಸ್ಪತ್ರೆಯಲ್ಲಿ ಬಳಸಲ್ಪಡುವ ಆಧುನಿಕ ಉಪಕರಣಗಳು ಸೂಕ್ಷ್ಮ ತರಂಗಗಳಾಧಾರಿತವಾಗಿದ್ದು ಮೊಬೈಲ್ ತರಂಗಗಳು ಇವುಗಳ ಕಾರ್ಯವಿಧಾನಕ್ಕೆ ಅಡ್ಡಿಯುಂಟುಮಾಡಬಹುದೆಂಬ ಆಶಂಕೆಯ ಮೇಲೆ ಮೊಬೈಲುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ವಾಸ್ತವದಲ್ಲಿ ಇಂತಹ ಉಪಕರಣಗಳು ಶೇಖಡಾ ೪ ಮಾತ್ರ ಇದ್ದು ಅದೂ ಮೊಬೈಲ್ ೩ ಅಡಿಗಳಿಗೂ ಕಡಿಮೆ ಅಂತರದಲ್ಲಿದ್ದರೆ ಮಾತ್ರ ಪರಿಣಾಮ ಬೀರುತ್ತದೆ. ಇತ್ತೀಚೆಗೆ ನಡೆಸಿದ ೩೦೦ ಉಪಕರಣಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಗಣನೀಯ ಪರಿಣಾಮ ಬೀರುದೇ ಇರುವುದು ಸಾಬೀತಾಗಿದೆ. ಪರೋಕ್ಷವಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಮೊಬೈಲು ಬಳಸಿದಾಗ ಅವರ ಕಾರ್ಯಕ್ಷಮತೆ ಹೆಚ್ಚಿದ್ದು ಅಧ್ಯಯನದಿಂದ ಸಾಬೀತಾಗಿದೆ.

Syndicate

Syndicate content