ನಾನು..............
 •    •  
ಗುರು ಬಬ್ಬಿಗದ್ದೆ

ನಾನು...
                       -ಗುರು ಬಬ್ಬಿಗದ್ದೆ

ನಾನು ಎಂಬ ನನ್ನ ಒಳಗೆ ನಾನೇ ತುಂಬಿರುವೆ
ನನ್ನಾಸೆ ನನ್ನೆದೆಯ ನನ್ನೊಳಗೆ ಬೆರೆತಿರುವೆ            ೧

ನಾನಿಂದು ನನಗಾಗಿ, ನನ್ನವರ ಜೊತೆಯಾಗಿ
ನನಸಾಗಿ, ಕನಸಾಗಿ, ಮನಸಲು ನನಗಾಗಿ
ನಾನಿರುವೆ ನನ್ನೊಳಗೆ, ನನ ಮನಸಿನ ಕಣ್ಣೊಳಗೆ
ನನಗಾಗಿ ನನ್ನನ್ನು ಹುಡುಕುವ ಎದೆಯೊಳಗೆ          ೨

 ಜಗವೆಲ್ಲ ನನ್ನೊಳಗೆ, ಹಾರಿವೆ ಮನಸುಗಳು
ಮೈಯೆಲ್ಲ ಮರೆತೋಗಿ, ನನ್ನದೇ ಕನಸುಗಳು
ನನ್ನ ಹೊರಗೆ, ನನ್ನ ಒಳಗೆ, ನನ್ನ ಗುರುತುಗಳು
ನನ್ನನ್ನು ನನಗಾಗಿ, ತೆರೆದಿಟ್ಟ ಹ್ರದಯಗಳು           ೩

ನಿನ್ನೆ ನಾನು, ನಾಳೆ ನಾನು, ಎಂದಿಗೂ ನಾನು
ಭಾವದಲಿ ಬರೆದಿರುವ ಕವನಗಳೇ ನಾನು
ನಾನು ಎಂಬ ಲೋಕದಲ್ಲಿ ಒಬ್ಬನೇ ನಾನಿರುವೆ
ನನ್ನೆದೆಯ ಮನದೊಳಗೆ ನನ್ನಾಸೆಗೆ ಒಲಿದಿರುವೆ      ೪

ನಾನು ಎಂಬ ನನ್ನ ಒಳಗೆ ನಾನೇ ತುಂಬಿರುವೆ
ನನ್ನ ಜೀವ ನನ್ನ ಭಾವ ನಾನೇ ಆಗಿರುವೆ            ೫

Syndicate

Syndicate content