ಖ್ಯಾತ ವಾರ್ತಾತಾಣವಾದ ಮ್ಯಾಂಗಲೋರಿಯನ್ ಡಾಟ್ ಕಾಮ್ ತನ್ನ ಮಕ್ಕಳ ಅಂಕಣದಲ್ಲಿ ಭಾಗವಹಿಸುವ ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡಲು ವಿಶೇಷ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ. ಕಿಡ್ಝ್ ಕಾರ್ನರ್ ಎಂಬ ಅಂಕಣಕ್ಕೆ ಕಳೆದ ಐದು ವರ್ಷಗಳಿಂದ ಹಲವಾರು ಮಕ್ಕಳು ತಮ್ಮ ಲೇಖನ, ಚಿತ್ರ ಹಾಗೂ ಕವನಗಳನ್ನು ಕಳುಹಿಸುತ್ತಿದ್ದು ಮಕ್ಕಳ ಅಚ್ಚುಮೆಚ್ಚಿನ ಅಂಕಣವಾಗಿದೆ. ಈ ಉತ್ಸಾಹಕ್ಕೆ ಇನ್ನಷ್ಟು ಪ್ರೋತ್ಸಾಹವನ್ನೀಯಲು ಮುಂದಿನ ತಿಂಗಳು ನಡೆಯಲಿರುವ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆಂದೇ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿದೆ.
ಹಲವಾರು ಆಕರ್ಷಕ ಬಹುಮಾನಗಳನ್ನೂ ಪ್ರಕಟಿಸಲಾಗಿದೆ. ಸ್ಪರ್ಧೆಗಳ ವಿವರಗಳು ಈ ಕೆಳಗಿನಂತಿವೆ:
ಕ್ಯೂಟ್ ಕಿಡ್ಜ ಫೋಟೋ ಸ್ಪರ್ಧೆ:
ಒಟ್ಟು ಮೂರು ವಿಭಾಗಗಳು
೧): (ಶಿಶು - ೨ ವರ್ಷ ವಯಸ್ಸಿನ ಮಕ್ಕಳ ಚಿತ್ರಗಳು)(ಮೇ ೧೦ ರವರೆಗೆ ೨ ವರ್ಷ ಮೀರಿರಬಾರದು)
೨): ೩ ರಿಂದ ೬ ವರ್ಷ ವಯಸ್ಸಿನ ಮಕ್ಕಳ ಚಿತ್ರಗಳು)(ಮೇ ೧೦ ರವರೆಗೆ ೬ ವರ್ಷ ಮೀರಿರಬಾರದು)
೩) ೭ ರಿಂದ ೧೨ವರ್ಷ ವಯಸ್ಸಿನ ಮಕ್ಕಳ ಚಿತ್ರಗಳು)(ಮೇ ೧೦ ರವರೆಗೆ ೧೨ ವರ್ಷ ಮೀರಿರಬಾರದು)
೭ರಿಂದ ೧೨ ವರ್ಷ ವಯಸ್ಸಿನವರಿಗೆ ಹ್ಯಾಂಡ್ ಸಮ್ ಪ್ರಿನ್ಸ್ ಹಾಗೂ ಪ್ರೆಟ್ಟಿ ಪ್ರಿನ್ಸೆಸ್ ಸ್ಪರ್ಧೆ:
((ಮೇ ೧೦ ರವರೆಗೆ ೧೨ ವರ್ಷ ಮೀರಿರಬಾರದು)
ಬಹುಮಾನಗಳ ವಿವರಗಳು:
ಪ್ರತಿ ವಿಭಾಗದಲ್ಲಿ ಈ ಕೆಳಕಂಡಂತೆ ಬಹುಮಾನಗಳನ್ನು ವಿತರಿಸಲಾಗುವುದು
ಕ್ಯೂಟ್ ಬೇಬೀಸ್ (೨ ವರ್ಷದವರೆಗೆ)
ಪ್ರಥಮ ಬಹುಮಾನ -ರೂ. ೨೦, ೦೦೦/-
ಎರಡನೆಯ ಬಹುಮಾನ - - ರೂ. ೧೦,೦೦೦/-
ಕ್ಯೂಟ್ ಕಿಡ್ಝ್ (೨- ೬ ವರ್ಷ)
ಪ್ರಥಮ ಬಹುಮಾನ -ರೂ. ೨೦,೦೦೦/-
ಎರಡನೆಯ ಬಹುಮಾನ - - ರೂ. ೧೦,೦೦೦/-
ಹ್ಯಾಂಡ್ ಸಮ್ ಪ್ರಿನ್ಸ್ ಹಾಗೂ ಪ್ರೆಟ್ಟಿ ಪ್ರಿನ್ಸೆಸ್
ಹ್ಯಾಂಡ್ ಸಮ್ ಪ್ರಿನ್ಸ್ -ರೂ. ೨೦,೦೦೦/-
ಪ್ರೆಟ್ಟಿ ಪ್ರಿನ್ಸೆಸ್ : ರೂ. ೨೦,೦೦೦/-
ವಿಜೇತರ ಫೋಟೋಗಳನ್ನು ಮ್ಯಾಂಗಲೋರಿಯನ್ ಡಾಟ್ ಕಾಂ ತಾಣದಲ್ಲಿ ಪ್ರಕಟಿಸಲಾಗುವುದು
ಇಂಪ್ರೆಶನ್ಸ್ - ಚಿತ್ರಸ್ಪರ್ಧೆ:
ವಿಷಯಗಳು
೧)ಮಂಗಳೂರಿನ ಸಮುದ್ರತೀರದ ಚಿತ್ರಣ
೨)ನಿಮ್ಮ ಸ್ವಂತ ಊರಿನ ಬಳಿಯಿರುವ ಹಳ್ಳಿಯ ಚಿತ್ರಣ
೩)ಆಟದ ಮೈದಾನ ಅಥವಾ ಉದ್ಯಾನವನ
ಪ್ರಥಮ ಬಹುಮಾನ ರೂ. ೨೦, ೦೦೦/-
ಎರಡನೆಯ ಬಹುಮಾನ ಬಹುಮಾನ ರೂ. ೧೦,೦೦೦/-
ಸ್ಪರ್ಧೆಯ ವಿವರಗಳು ಹಾಗೂ ನಿಬಂಧನೆಗಳನ್ನು
ಮ್ಯಾಗಲೋರಿಯನ್ ಡಾಟ್ ಕಾಂ ತಾಣದಿಂದ ಪಡೆಯಬಹುದು.








