ತೇಜಸ್ವಿಯವರ ವೈಚಾರಿಕತೆ (ಭಾಗ ೪)
ತೇಜಸ್ವಿ

 - ಸತ್ಯನಾರಾಯಣ ಬಿ.ಆರ್.

ಪ್ರವೃತ್ತಿಪ್ರಿಯ ಶಿಕ್ಷಕ ಸಮುದಾಯ

ಒಬ್ಬ ಮಾರ್ಗಾನ್ವೇಷಕನ ಕ್ಷೇತ್ರ ಬಹುಮುಖವಾಗಿರುತ್ತದೆ. ಅದಕ್ಕೆ ತೇಜಸ್ವಿಯವರು ಉತ್ತಮ ಉದಾಹರಣೆ. ಮೊದಲಿನಿಂದಲೂ ನಮ್ಮ ಶಿಕ್ಷಣ ಕ್ಷೇತ್ರ, ಮಾಧ್ಯಮ, ವಿದ್ಯಾಭ್ಯಾಸ ಪದ್ಧತಿ, ಗಡಿದಾಟದ ಶಿಕ್ಷಕ ವರ್ಗ ಇದೆಲ್ಲದರ ಬಗ್ಗೆಯೂ ಯಾವ ಮುಲಾಜು ಇಲ್ಲದೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮೊದಲ ಕಥೆ 'ಲಿಂಗ ಬಂದ'ದಲ್ಲಿಯೇ ಒಂದು ವಾಕ್ಯ ಯಾವ ಪೂರ್ವಾಗ್ರಹ ಉದ್ದೇಶವೂ ಇಲ್ಲದೆ ಸಹಜವಾಗಿ ಬಂದಿದೆ. 'ಓದೋದಿಕ್ಕಿಂತ ತೊಟ್ಲು ತೂಗೋದೆ ಎಷ್ಟೋ ವಾಸಿ' ಅಂತ. ಅಲ್ಲಿಂದ ಮುಂದೆ 'ಅಬಚೂರಿನ ಪೋಸ್ಟಾಫೀಸು' ಕೃತಿಯ ಮುನ್ನುಡಿಯಲ್ಲಿ ಶಿಕ್ಷಕವರ್ಗದ ಆಶಾಡಭೂತಿತನವನ್ನು ವಿವೇಚಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಸಂದರ್ಶನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇಂದಿನ ಶಿಕ್ಷಣ ಕ್ಷೇತ್ರದ ಅಧೋಗತಿಗೆ ಈ ಕೆಲವು ಮೇಸ್ಟರುಗಳ ಕೂಟವೇ ಕಾರಣ ಎಂಬ ಪ್ರಬಲ ನಂಬಿಕೆ ತೇಜಸ್ವಿಯವರಿಗಿತ್ತು. ಕನ್ನಡ ಮೇಸ್ಟ್ರುಗಳನ್ನು ಅವರು ಗುಜರಿಗಳು ಎಂದೇ ಮೂದಲಿಸುತ್ತಿದ್ದರು. ಈ ನಂಬಿಕೆ ನಿರಾಕಾರಣದಿಂದ ಬಂದಿದ್ದಲ್ಲ. ಅದಕ್ಕೆ ಅವರು ಕೊಡುವ ಕಾರಣಗಳೂ ತಗೆದುಹಾಕುವಂತಿಲ್ಲ. ಶಿಕ್ಷಕ ಸಮುದಾಯದ ಬಗ್ಗೆ ಇಷ್ಟೊಂದು ಕಠೋರವಾಗಿರುವ ತೇಜಸ್ವಿಯವರ ಬಗ್ಗೆ ಯಾವ ಶಿಕ್ಷಕನೂ ದನಿಯೆತ್ತುವುದಿಲ್ಲ. ಅಲ್ಲಲ್ಲಿ ಇರುವ ಕೆಲವೊಂದು ಒಳ್ಳೆಯ ಆದರ್ಶಪ್ರಾಯ ಶಿಕ್ಷಕರು ತೇಜಸ್ವಿಯವರ ಬೆಂಬಲಕ್ಕೇ ನಿಂತುಬಿಡುತ್ತಾರೆ. ಸಾಹಿತ್ಯಕ್ಷೇತ್ರವನ್ನು ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುವ ಅಧ್ಯಾಪಕ ಮಿತ್ರರು ಪಠ್ಯಪುಸ್ತಕ ರಚನೆ, ಪುಸ್ತಕ ಪ್ರಕಟಣೆ, ಪ್ರಸಾರಣೆ ಇವುಗಳನ್ನೂ ಬಿಟ್ಟಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಅಧ್ಯಾಪಕ ಮಿತ್ರರು ಇಂದು ಪಾಠ ಮಾಡುವುದಕ್ಕಿಂತ ರಿಜಿಸ್ಟ್ರಾರ್ ಆಗಿಯೋ, ಪ್ರಸಾರಾಂಗದ ಅಧಿಕಾರಿಯಾಗಿಯೋ, ಅಕಾಡೆಮಿಗಳ ಅಧ್ಯಕ್ಷರೋ ಸದಸ್ಯರೋ ಆಗಿ ಕಾರ್ಯ ನಿರ್ವಹಿಸುತ್ತಿರುವುದೇ ಹೆಚ್ಚು. ಸರ್ಕಾರದ ಯಾವ ಅಕಾಡೆಮಿಗಳಲ್ಲಿ ಮೇಸ್ಟರುಗಳಿಲ್ಲ ಹೇಳಿ. ಇಂದು ಕನ್ನಡ ಸಂಸ್ಕೃತಿ ಇಲಾಖೆ, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮೊದಲಾದವುಗಳಲ್ಲಿ ರಿಜಿಸ್ಟ್ರಾರ್ ಆಗಿ ನಿಯೋಜಿತ ರಜೆಯ ಮೇಲೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇವರುಗಳಲ್ಲಿ ಹೆಚ್ಚಿನವರು ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವವರೇ ಇರುವುದು ಮಾತ್ರ ವಿಷಾದದ ಸಂಗತಿ. ಇಲ್ಲಿಯಾದರೂ ಇವರೆಲ್ಲಾ ಮಾಡುತ್ತಿರುವುದೇನು. ಅಕಾಡೆಮಿಗಳ ಆಶ್ರಯದಲ್ಲಿ ನಡೆಯುವ ಎಲ್ಲಾ ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮ ಕೃತಿಗಳನ್ನೋ ಅಥವಾ ತಮಗೆ ಬೇಕಾದವರ ಕೃತಿಗಳನ್ನು ಮೇಲೆತ್ತಲು ಪ್ರಯತ್ನಿಸುವುದು!. ಪ್ರಶಸ್ತಿಗಳಿಗೆ ವಶೀಲಿಬಾಜಿ ನಡೆಸುವುದು!!. ಜಿಲ್ಲಾ ಸಾಹಿತ್ಯ ಪರಿಷತ್ತೊಂದರ ಪದಾಧಿಕಾರಿಯಾಗಿದ್ದ ಯುವ ಉಪನ್ಯಾಸಕರೊಬ್ಬರು ಒಮ್ಮೆ ನನಗೆ ಸಿಕ್ಕು, 'ಬಿ.ಸಿ.ಎ. ಹುಡುಗರಿದ್ದರೆ ಹೇಳಿ. ನಮ್ಮವರೇ ಎಕ್ಸಾಮ್ ಚೀಫ್ ಆಗಿದ್ದಾರೆ. ಪಾಸ್ ಮಾಡಿಸಿಕೊಡುತ್ತಾರೆ. ನಿಮಗೂ ಕಮೀಷನ್ ಸಿಗುತ್ತದೆ' ಎಂದಿದ್ದರು. ಅದೂ ಸಾಹಿತ್ಯ ಪರಿಷತ್ ಆವರಣದಲ್ಲೇ!. ಇವುಗಳೆನ್ನೆಲ್ಲಾ ನೋಡಿದರೆ, ಯಾರು ಎಲ್ಲೇ ಕೆಲಸ ಮಾಡಲಿ. ಪರಿಣಾಮ ಮಾತ್ರ ಒಂದೆ ಎನ್ನಿಸುತ್ತದೆ. ಎಲ್ಲವೂ ಅಧೋಗತಿಗಿಳಿಯುತ್ತಿದೆ. ಗಂಗೋತ್ರಿಯಲ್ಲಿ ತೇಜಸ್ವಿ ಮಾಡಿದ ಭಾಷಣವನ್ನು ಕೆಲವರು ವಿರೋಧಿಸಿದ್ದು, ಕೆಲವರು ಸಭಾತ್ಯಾಗ ಮಾಡಿದ್ದು ಇದೇ ಕಾರಣಕ್ಕೆ. ಸತ್ಯವನ್ನು ಅರಗಿಸಿಕೊಳ್ಳುವಷ್ಟು ಆರೋಗ್ಯಕರ ಸಂಸ್ಕೃತಿ ನಮ್ಮಲ್ಲಿ ಇನ್ನೂ ನಿರ್ಮಾಣವಾಗಿಲ್ಲದಿರುವುದು ವಿಷಾದನೀಯ.

ಶಿಕ್ಷಕರು ಮೂಢನಂಬಿಕೆಗಳ ಮೂಟೆಗಳು
ಕುವೆಂಪು ಅವರು ನೆನಪಿನ ದೋಣಿಯಲ್ಲಿ ವಿಜ್ಞಾನಿಯಾಗಿಯೂ ಮೂಢನಂಬಿಕೆಗಳ್ಳನ್ನಿಟ್ಟುಕೊಂಡಿದ್ದ ತಮ್ಮ ಬಂಧುವೊಬ್ಬರಿಗೆ 'ನೀವು ವಿಜ್ಞಾನವನ್ನು ಹೊತ್ತ ಕತ್ತೆ' ಎಂದು ಮೂದಲಿಸಿದ ವಿಚಾರ ಬರುತ್ತದೆ. ತೇಜಸ್ವಿಯವರೂ ಶಿಕ್ಷರಲ್ಲಿ ಇಲ್ಲದಿರುವ ವೈಜ್ಞಾನಿಕ ಮನೋಭಾವವನ್ನು ಹುಡುಕಿ ಹುಡುಕಿ, ಅದನ್ನು ತುಂಬಲು ಪ್ರಯತ್ನಿಸಿ ನಿರಾಶರಾಗಿದ್ದಾರೆ. ಈಗಲೂ ಕಾಲ ಬದಲಾಗಿಲ್ಲ. ಇಂದೂ ವಿಜ್ಞಾನದ ಮೇಸ್ಟರುಗಳು ಮೂಢನಂಬಿಕೆಯಲ್ಲೇ ತೊಳಲಾಡುತ್ತಿದ್ದಾರೆ. ನಮ್ಮ ಗ್ರಂಥಾಲಯದಲ್ಲಿ, ನನ್ನ ಅನುಕೂಲಕ್ಕಾಗಿ ನಾನು ದಕ್ಷಿಣಾಭಿಮುಖವಾಗಿ ಕುಳಿತುಕೊಳ್ಳುತ್ತೇನೆ. ಕೇವಲ, ಗ್ರಂಥಾಲಯಕ್ಕೆ ಬಂದು ಹೋಗುವವರೆಲ್ಲರೂ ನನ್ನ ಕಣ್ಣಿಗೆ ಬೀಳಲೆಂಬುದಷ್ಟೇ ನನ್ನ ಉದ್ದೇಶ. ಆದರೆ ನಮ್ಮ ಕಾಲೇಜಿನ ಕೆಮಿಸ್ಟ್ರಿ ಅಧ್ಯಾಪಕರೊಬ್ಬರು ಪ್ರತಿ ಸಾರಿ ಬಂದಾಗಲೂ ನಾನು ಕುಳಿತು ಕೊಳ್ಳುವ ದಿಕ್ಕನ್ನು ಬದಲಾಯಿಸುವಂತೆ ಹೇಳುತ್ತಾರೆ. ನಾನು ಸುಮ್ಮನಾದರೆ 'ನೀವು ಬಿಡಿ ಕ್ರಾಂತಿಕಾರಿಗಳು' ಎನ್ನುತ್ತಾರೆ. ಇದರಲ್ಲಿ ಅದ್ಯಾವ ಕ್ರಾಂತಿಕಾರಕತನ ಅಡಗಿದೆಯೋ ನನಗಿನ್ನು ಅರ್ಥವಾಗಿಲ್ಲ. ಇವರು ಉಚಿತವಾಗಿ ವಾಸ್ತು ಸಲಹೆಗಳನ್ನೂ ಕೊಡುತ್ತಾರೆ. ಅವರು ಹೇಳುವ ಪ್ರಕಾರ ನಮ್ಮ ಕಾಲೇಜಿನ ವಾಸ್ತುವೇ ಸರಿಯಿಲ್ಲ. ಆದರೂ ನಮ್ಮ ಕಾಲೇಜು ವರ್ಷ ವರ್ಷವೂ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ಫಲಿತಾಂಶವೂ ಉತ್ತಮಗೊಳ್ಳುತ್ತಿದೆ. ಅಡ್ಮಿಷನ್ನಿಗೂ ಡಿಮ್ಯಾಂಡಿದೆ. ಇವಾವುವೂ ನನ್ನ ಜಂಭದ ಮಾತುಗಳಲ್ಲ. ವರುಷಕ್ಕೊಮ್ಮೆ ತಮಿಳುನಾಡಿನ ನವಗ್ರಹ ಕ್ಷೇತ್ರಗಳಿಗೆ ಭೇಟಿಕೊಡುವ ಇಂತಹ ಮೇಸ್ಟರುಗಳನ್ನು, ತೇಜಸ್ವಿಯಿರಲಿ ಸ್ವತಃ ಆ ನವಗ್ರಹಗಳೇ ಬಂದರೂ ಬದಲಾಯಿಸಲು ಸಾಧ್ಯವಿಲ್ಲ.ಶಿಕ್ಷಣ ಮಾಧ್ಯಮ‌ಇನ್ನು ಶಿಕ್ಷಣ ಮಾಧ್ಯಮದ ಬಗ್ಗೆ ಅವರದು ಸ್ಪಷ್ಟ ನಿಲುವು. ಶಿಕ್ಷಣ ಮಾದ್ಯಮ ಕನ್ನಡವೇ ಆಗಬೇಕು ಎಂಬುದು ತೇಜಸ್ವಿಯವರ ಅಚಲವಾದ ನಿಲುವು. ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನಿಧನರಾಗುವವರೆಗೂ ಅದೇ ಅವರ ಮಂತ್ರವಾಗಿತ್ತು. ಅದಕ್ಕೆಂದೇ ಕನ್ನಡದಲ್ಲಿ ಎಲ್ಲಾ ವಿಷಯಗಳ ಪುಸ್ತಕಗಳೂ ಸಿಗಬೇಕು ಎಂದು ಮಿಲೆನಿಯಂ ಸರಣಿಯನ್ನು ಸಿದ್ದಪಡಿಸಿದರು. ವಿವಿಧ ವಸ್ತು ವಿಷಯದ ಪುಸ್ತಕಗಳು ಬರಬೇಕೆಂದು ಆಶಿಸಿದರು. ಬಹುಶಃ ಇಂಗ್ಲೀಷನ್ನು ಅವರಷ್ಟು ದ್ವೇಷಿಸಿದ್ದ ವಿದ್ಯಾರ್ಥಿ ಇನ್ನೊಬ್ಬನಿರಲಾರನು. ನಾವೆಲ್ಲಾ ಇಂಗ್ಲಿಷ್ನಲ್ಲಿ ಕೇವಲ ೩೫ ಅಂಕಗಳನ್ನು ತಗೆದುಕೊಂಡು ಪಾಸದವರೇ. ಆದ್ದರಿಂದ ತೇಜಸ್ವಿವರಿಗಾದ ಅನುಭವ ನಮಗೂ ಆಗಿದೆ. ಆದರೆ ಇತ್ತೀಚಿಗೆ ಇಂಗ್ಲೀಷ್ ಬೇಕೆ ಬೇಡವೇ ಎಂಬ ವಿಷಯ ಬಂದಾಗ ರಾತ್ರೋರಾತ್ರಿ ತೇಜಸ್ವಿಯವರನ್ನು ಕನ್ನಡ ವಿರೋಧಿಯಂತೆ ಚಿತ್ರಿಸಲಾಯಿತು. ಸ್ವತಃ ಚಂಪಾ ಅವರೇ ತೇಜಸ್ವಿಯವರನ್ನು ಮೂದಲಿಸಿ ಕಾಗದ ಬರೆದರು. ಆದರೆ ಯಾವುದೇ ಭಾವೋದ್ವೇಗಕ್ಕಳಗಾಗದೇ ತೇಜಸ್ವಿಯವರು ಕೊಟ್ಟ ಉತ್ತರ ಎಲ್ಲರ ಕಣ್ಣು ತೆರೆಸಿತ್ತು. ಹಿಂದೆ ಸಂಸ್ಕೃತವನ್ನು ಬಹುಸಂಖ್ಯಾತರಿಂದ ದೂರವಿಟ್ಟಿದ್ದ ಮನಸ್ಸುಗಳೇ ಇಂದೂ ಇಂಗ್ಲೀಷನ್ನು ಬಹುಸಂಖ್ಯಾತರಿಂದ ದೂರವಿಡುವ ಹುನ್ನಾರ ಎಲ್ಲರಿಗೂ ಅರ್ಥವಾಗುವಂತದ್ದೆ. ಈ ಹಿಂದೆಯೂ ಕುವೆಂಪು ಅವರನ್ನು ಇಂಗ್ಲಿಷ್ ಪರ-ವಿರೋಧಿಯಂತೆ ಚಿತ್ರಿಸಿದ್ದನ್ನು ನಾವು ನೋಡಿದ್ದೇವೆ. ಮೌನವೇ ಉತ್ತರ‌ಇಲ್ಲೇ ಇನ್ನೊಂದು ವಿಷಯವನ್ನು ಪ್ರಸ್ತಾಪಿಸಬಹುದು. ವಿಜಯಮೋರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿಬಳಿದ ಪ್ರಕರಣದ ಬಗ್ಗೆ ಸಿನಿಮಾ ಬುದ್ದಿಜೀವಿಯೊಬ್ಬರು ವಾಚಕರ ವಾಣಿಯಲ್ಲಿ ಬರೆದಿದ್ದರು. 'ಮಸಿ ಬಳಿಯದೆ ಫೇರ್ ಅಂಡ್ ಲೌವ್ಲಿ ಹಚ್ಚಬೇಕಾ?' ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ 'ದೂರದ ಕಾಫಿತೋಟದಲ್ಲಿ ಬೆಚ್ಚಗೆ ಮನೆಯಲ್ಲಿ ಕುಳಿತಿರುವ ತೇಜಸ್ವಿ, ಕನ್ನಡಕ್ಕೆ ಕಡಿದು ಕಟ್ಟೆ ಹಾಕಿರುವುದೇನು?' ಎಂದು ಪ್ರಶ್ನಿಸಿದ್ದರು. ಇದಕ್ಕೆ ತೇಜಸ್ವಿಯವರು ಉತ್ತರಿಸುತ್ತಾರೆ ಎಂದು ನಾವೆಲ್ಲಾ ಕಾದಿದ್ದೆವು. ಕೊನೆಗೆ ತಡೆಯಲಾಗದೇ ನಾವೇ ವಾಚಕರ ವಾಣಿಗೆ ಪತ್ರ ಬರೆದು ಬುದ್ಧಿಜೀವಿಗಳನ್ನು ಖಂಡಿಸಿದೆವು ಕೂಡಾ. ಆದರೆ ಈಗ, ತೇಜಸ್ವಿಯವರ ಮೌನವೇ ಅರ್ಥಪೂರ್ಣವಾಗಿತ್ತು ಎನ್ನಿಸುತ್ತದೆ. ಇರಲಿ. ಆದರೆ ಬೆಂಗಳೂರಿನಲ್ಲಿ ನಡೆದ ಒಂದು ಸಮಾರಂಭದ ನಂತರ ತೇಜಸ್ವಿಯವರ ಗಮನಕ್ಕೆ ಈ ಹೇಳಿಕೆಯನ್ನು ತರಲಾಯಿತು. 'ನೋಡ್ರಿ. ನಾನು ಕನ್ನಡಕ್ಕೆ ಏನು ಮಾಡಿಲ್ಲ. ನಿಜ. ಆದರೆ ಅನ್ಯಾಯವನ್ನೂ ಮಾಡಿಲ್ಲ' ಎಂದು ತಣ್ಣಗೆ ಉತ್ತರಿಸಿದರು. ಇದು ತೇಜಸ್ವಿಯವರ ದೊಡ್ಡತನ. ಆದರೆ ಈಗ, ನನಗನ್ನಿಸಿದ್ದು, ಆ ಬುದ್ದಿಜೀವಿಗಳಿಗೆ ತೇಜಸ್ವಿಯವರ ಕನ್ನಡ ಪ್ರೇಮವನ್ನು ಪ್ರಶ್ನಿಸುವುದಕ್ಕಿಂತ ಹೆಚ್ಚಾಗಿ ಬೇರೊಂದು ಉದ್ದೇಶ ಇತ್ತೇನೋ ಎಂದು. 'ನಾವೆಲ್ಲಾ ಇಲ್ಲೇ ವಿಧಾನಸೌಧದ ಮೆಟ್ಟಿಲ ಮೇಲೆಯೇ ಇರುವಾಗ ಅವನೊಬ್ಬ ಅಲ್ಲಿ ದೂರದಲ್ಲಿ ಸ್ವಚ್ಚಂದವಾಗಿ ಬದುಕುತ್ತಿದ್ದಾನಲ್ಲ. ಅವನೂ ಇಲ್ಲಿಗೇ ಬಂದರೆ ಆಗ ನಮ್ಮನ್ನೂ ಯಾರೂ ದೂರುವುದಿಲ್ಲ' ಎಂಬ ದು(ದೂ)ರಾಲೋಚನೆ ಇತ್ತು ಎಂದು ನನಗನ್ನಿಸಲು ಕಾರಣ, 'ಕಾಫಿ ತೋಟದ ಮನೆಯಲ್ಲಿ ಬೆಚ್ಚಗೆ ಕುಳಿತಿರುವ' ಎಂಬ ಅಡ್ಡಮಾತು.

 ಸತ್ಯನಾರಾಯಣ ಬಿ.ಆರ್.
ಪ್ರವೃತ್ತಿಪ್ರಿಯ ಶಿಕ್ಷಕ ಸಮುದಾಯ
ಒಬ್ಬ ಮಾರ್ಗಾನ್ವೇಷಕನ ಕ್ಷೇತ್ರ ಬಹುಮುಖವಾಗಿರುತ್ತದೆ. ಅದಕ್ಕೆ ತೇಜಸ್ವಿಯವರು ಉತ್ತಮ ಉದಾಹರಣೆ. ಮೊದಲಿನಿಂದಲೂ ನಮ್ಮ ಶಿಕ್ಷಣ ಕ್ಷೇತ್ರ, ಮಾದ್ಯಮ, ವಿದ್ಯಾಭ್ಯಾಸ ಪದ್ಧತಿ, ಗಡಿದಾಟದ ಶಿಕ್ಷಕ ವರ್ಗ ಇದೆಲ್ಲದರ ಬಗ್ಗೆಯೂ ಯಾವ ಮುಲಾಜು ಇಲ್ಲದೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮೊದಲ ಕಥೆ 'ಲಿಂಗ ಬಂದ'ದಲ್ಲಿಯೇ ಒಂದು ವಾಕ್ಯ ಯಾವ ಪೂರ್ವಾಗ್ರಹ ಉದ್ದೇಶವೂ ಇಲ್ಲದೆ ಸಹಜವಾಗಿ ಬಂದಿದೆ. 'ಓದೋದಿಕ್ಕಿಂತ ತೊಟ್ಲು ತೂಗೋದೆ ಎಷ್ಟೋ ವಾಸಿ' ಅಂತ. ಅಲ್ಲಿಂದ ಮುಂದೆ 'ಅಬಚೂರಿನ ಪೋಸ್ಟಾಫೀಸು' ಕೃತಿಯ ಮುನ್ನುಡಿಯಲ್ಲಿ ಶಿಕ್ಷಕವರ್ಗದ ಆಶಾಡಭೂತಿತನವನ್ನು ವಿವೇಚಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ಸಂದರ್ಶನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇಂದಿನ ಶಿಕ್ಷಣ ಕ್ಷೇತ್ರದ ಅಧೋಗತಿಗೆ ಈ ಕೆಲವು ಮೇಸ್ಟರುಗಳ ಕೂಟವೇ ಕಾರಣ ಎಂಬ ಪ್ರಬಲ ನಂಬಿಕೆ ತೇಜಸ್ವಿಯವರಿಗಿತ್ತು. ಕನ್ನಡ ಮೇಸ್ಟ್ರುಗಳನ್ನು ಅವರು ಗುಜರಿಗಳು ಎಂದೇ ಮೂದಲಿಸುತ್ತಿದ್ದರು. ಈ ನಂಬಿಕೆ ನಿರಾಕಾರಣದಿಂದ ಬಂದಿದ್ದಲ್ಲ. ಅದಕ್ಕೆ ಅವರು ಕೊಡುವ ಕಾರಣಗಳೂ ತಗೆದುಹಾಕುವಂತಿಲ್ಲ. ಶಿಕ್ಷಕ ಸಮುದಾಯದ ಬಗ್ಗೆ ಇಷ್ಟೊಂದು ಕಠೋರವಾಗಿರುವ ತೇಜಸ್ವಿಯವರ ಬಗ್ಗೆ ಯಾವ ಶಿಕ್ಷಕನೂ ದನಿಯೆತ್ತುವುದಿಲ್ಲ. ಅಲ್ಲಲ್ಲಿ ಇರುವ ಕೆಲವೊಂದು ಒಳ್ಳೆಯ ಆದರ್ಶಪ್ರಾಯ ಶಿಕ್ಷಕರು ತೇಜಸ್ವಿಯವರ ಬೆಂಬಲಕ್ಕೇ ನಿಂತುಬಿಡುತ್ತಾರೆ. ಸಾಹಿತ್ಯಕ್ಷೇತ್ರವನ್ನು ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುವ ಅಧ್ಯಾಪಕ ಮಿತ್ರರು ಪಠ್ಯಪುಸ್ತಕ ರಚನೆ, ಪುಸ್ತಕ ಪ್ರಕಟಣೆ, ಪ್ರಸಾರಣೆ ಇವುಗಳನ್ನೂ ಬಿಟ್ಟಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಅಧ್ಯಾಪಕ ಮಿತ್ರರು ಇಂದು ಪಾಠ ಮಾಡುವುದಕ್ಕಿಂತ ರಿಜಿಸ್ಟ್ರಾರ್ ಆಗಿಯೋ, ಪ್ರಸಾರಾಂಗದ ಅಧಿಕಾರಿಯಾಗಿಯೋ, ಅಕಾಡೆಮಿಗಳ ಅಧ್ಯಕ್ಷರೋ ಸದಸ್ಯರೋ ಆಗಿ ಕಾರ್ಯ ನಿರ್ವಹಿಸುತ್ತಿರುವುದೇ ಹೆಚ್ಚು. ಸರ್ಕಾರದ ಯಾವ ಅಕಾಡೆಮಿಗಳಲ್ಲಿ ಮೇಸ್ಟರುಗಳಿಲ್ಲ ಹೇಳಿ. ಇಂದು ಕನ್ನಡ ಸಂಸ್ಕೃತಿ ಇಲಾಖೆ, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮೊದಲಾದವುಗಳಲ್ಲಿ ರಿಜಿಸ್ಟ್ರಾರ್ ಆಗಿ ನಿಯೋಜಿತ ರಜೆಯ ಮೇಲೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇವರುಗಳಲ್ಲಿ ಹೆಚ್ಚಿನವರು ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವವರೇ ಇರುವುದು ಮಾತ್ರ ವಿಷಾದದ ಸಂಗತಿ. ಇಲ್ಲಿಯಾದರೂ ಇವರೆಲ್ಲಾ ಮಾಡುತ್ತಿರುವುದೇನು. ಅಕಾಡೆಮಿಗಳ ಆಶ್ರಯದಲ್ಲಿ ನಡೆಯುವ ಎಲ್ಲಾ ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮ ಕೃತಿಗಳನ್ನೋ ಅಥವಾ ತಮಗೆ ಬೇಕಾದವರ ಕೃತಿಗಳನ್ನು ಮೇಲೆತ್ತಲು ಪ್ರಯತ್ನಿಸುವುದು!. ಪ್ರಶಸ್ತಿಗಳಿಗೆ ವಶೀಲಿಬಾಜಿ ನಡೆಸುವುದು!!. ಜಿಲ್ಲಾ ಸಾಹಿತ್ಯ ಪರಿಷತ್ತೊಂದರ ಪದಾಧಿಕಾರಿಯಾಗಿದ್ದ ಯುವ ಉಪನ್ಯಾಸಕರೊಬ್ಬರು ಒಮ್ಮೆ ನನಗೆ ಸಿಕ್ಕು, 'ಬಿ.ಸಿ.ಎ. ಹುಡುಗರಿದ್ದರೆ ಹೇಳಿ. ನಮ್ಮವರೇ ಎಕ್ಸಾಮ್ ಚೀಫ್ ಆಗಿದ್ದಾರೆ. ಪಾಸ್ ಮಾಡಿಸಿಕೊಡುತ್ತಾರೆ. ನಿಮಗೂ ಕಮೀಷನ್ ಸಿಗುತ್ತದೆ' ಎಂದಿದ್ದರು. ಅದೂ ಸಾಹಿತ್ಯ ಪರಿಷತ್ ಆವರಣದಲ್ಲೇ!. ಇವುಗಳೆನ್ನೆಲ್ಲಾ ನೋಡಿದರೆ, ಯಾರು ಎಲ್ಲೇ ಕೆಲಸ ಮಾಡಲಿ. ಪರಿಣಾಮ ಮಾತ್ರ ಒಂದೆ ಎನ್ನಿಸುತ್ತದೆ. ಎಲ್ಲವೂ ಅಧೋಗತಿಗಿಳಿಯುತ್ತಿದೆ. ಗಂಗೋತ್ರಿಯಲ್ಲಿ ತೇಜಸ್ವಿ ಮಾಡಿದ ಭಾಷಣವನ್ನು ಕೆಲವರು ವಿರೋಧಿಸಿದ್ದು, ಕೆಲವರು ಸಭಾತ್ಯಾಗ ಮಾಡಿದ್ದು ಇದೇ ಕಾರಣಕ್ಕೆ. ಸತ್ಯವನ್ನು ಅರಗಿಸಿಕೊಳ್ಳುವಷ್ಟು ಆರೋಗ್ಯಕರ ಸಂಸ್ಕೃತಿ ನಮ್ಮಲ್ಲಿ ಇನ್ನೂ ನಿರ್ಮಾಣವಾಗಿಲ್ಲದಿರುವುದು ವಿಷಾದನೀಯ.

(ತೇಜಸ್ವಿಯವರ ವಿಚಾರಧಾರೆಯ ಬಗೆಗೆ ಸತ್ಯನಾರಾಯಣರ ಅವಲೋಕನ ಬರುವ ವಾರ ಕೂಡ ಮುಂದುವರೆಯಲಿದೆ)

ಸತ್ಯನಾರಾಯಣ ಬಿ.ಆರ್.ಗ್ರಂಥಪಾಲಕರು, ಸುರಾನ ಕಾಲೇಜುಸೌತ್ ಎಂಡ್ ರಸ್ತೆ, ಬಸವನಗುಡಿಬೆಂಗಳೂರು - 560 004ದೂರವಾಣಿ: 0 99645 90246ಈ-ಮೇಲ್: satya_nbr@yahoo.com 

Syndicate

Syndicate content