ಮೌನ ರೋದನ.......
ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ

ಯಾಕವ್ವ ನನ್ನ ಹಡದಿ
ಬೆಳೆಸಿದೀ ಯಾಕ ಅಹಂಕಾರದಿ
‌ಇಲ್ಲದ ಆಸೆಗೆ ನೀರೆರೆಯುತಲಿ
ಕನಸಿನ ಲೋಕವ ದೂರ ಮಾಡಿದಿ      ೧

ಸುಖ ದು:ಖಗಳಿಂದ ಜೀವನವು
ಬಂದಂತೆ ಬರುವುದು ಇರುಳು
ಹಗಲುಕರುಣೆ ಮಮತೆ ತುಂಬಿರಲು               
ಪ್ರೀತಿಯ ತುಂತುರು ಹನಿಮಳೆಯು        ೨

ಬಡಿಯುತ ಮನಸ ತಿದ್ದಲಿಲ್ಯಾಕ
ಮಾನ - ಮೌನವ ಕಲಸ್ಲಿಲ್ಯಾಕ
ನಿಂತೆ ನಾನೊಂದು ದಡದಿ 
ಸಿಗಲಿಲ್ಲ ನನಗ ಜೀವನದ ಹಾದಿ     ೩

Syndicate

Syndicate content