ಓ, ಮನಸೇ...
meena.jpg

ಡಾ. ಮೀನಾ ಸುಬ್ಬರಾವ್
ಸಲಿನಾಸ್, ಕ್ಯಾಲಿಫೋರ್ನಿಯಾ.

ನೀನಿರುವುದು ಕಣ ಕಣಗಳಲಿ,
ಕಾಣದಿರುವುದು ಕಣ್ಣು ಕಣ್ಣುಗಳಲಿ,
ಕರೆದು ಜಯಿಸುವರುಂಟು ನಿನ್ನ,
ಕರೆಯದೇ-ಕೇಳದೇ ನೀ
ಬರುವೆ, ಗೆಲುವಿನ-ಒಲವಿನ ಒಡನಾಟಕೆ.

ಕೈ ಕೊಡುವೆ ಆಗಾಗ,
ಅಂಗಲಾಚಿದಾ--ಗ.
ಅಂತೆಯೇ ಅರಿತಾ--ಗ,
ಆದೆಯಾ!?-ಅಮೃತಮಯ!!!

ಬರೀ ವಿಸ್ಮಯ!!!
ನಿನ್ನ ಆಕಾರ, ವಿಕಾರ, ವಿನಿಮಯ.
ಆಳುವೆ ನಮ್ಮೆಲ್ಲರ ಅಂತರಂಗ ಕಾಯ,
ಆಚಾರ, ವಿಚಾರ, ಗಮನೀಯ.

ಚಲಿಸುವೆ ನೀ,
ಚಂಚಲದಿಂದ " ಚೈತನ್ಯ "
ದ ವರೆಗೆ,
ಆದರೂ ಆಗಿಹೆ ನೀ,
ಶಾಶ್ವತ-"ಅನನ್ಯ".

ಆತ್ಮವಷ್ಟೇ ಅಲ್ಲ ನೀನು,
ಪರಮಾತ್ಮನೂ ಹೌದು ನೀನು.
ಮೋಹ, ನೇಹ, ಕಲಹ ವಲ್ಲದ ನೀನು,
ದಾಸೋಹಂ ತವ ಎಂದರೆ ನಾನು,
ಕೇಳುವೆಯೇನೋ???????????????


 

nimma manassina baggegina

nimma manassina baggegina maatu...chennagide.

http://anjshankar.blogspot.com

Syndicate

Syndicate content