ಪಕ್ಷಾಂತರ
- ಶ್ರೀನಾಥ್ ಭಲ್ಲೆ
ನಲ್ಲೆ
ನಿನ್ನಲ್ಲಿ ನಾ
ಸತ್ಯವೊಂದನು ಹೇಳಲೇ?
ರೂಪದಲ್ಲಿ ನಾ
ಮನ್ಮಥನಲ್ಲ,
ರಮೇಶನಂತೆ
ಹಣಕಾಸಿನಲ್ಲಿ ನಾ
ಕುಬೇರನಲ್ಲ,
ರಮೇಶನಂತೆ
ಅಧಿಕಾರಿಯ ಕುರ್ಚಿಯಲಿ ನಾ
ಕುಳಿತಿಲ್ಲ,
ರಮೇಶನಂತೆ
ಮದುವೆಗಂತೂ
ಲೈನ್ ಕ್ಲಿಯರ್ ಇಲ್ಲ,
ರಮೇಶನಂತೆ
ವಯಸ್ಸಿನಲಿ
ಚಿರ ಯುವಕನಲ್ಲ,
ರಮೇಶನಂತೆ
ಹೇಳು ನಲ್ಲೆ
ನೀ ಬಗೆಹರಿಸುವೆಯಾ
ಈ ನನ್ನ ಚಿಂತೆ?
ನಲ್ಲ,
ನೀನೇಕೆ ಮಾಡುವೆ
ಈ ರೀತಿ ಚಿಂತೆ ?
ನಾನಿಲ್ಲವೇ ಮಾಡ್ಲಿಕ್ಕೆ
ರಮೇಶನ ಚಿಂತೆ ?
ಸಾಕಿನ್ನು ನನಗೆ ನಿನ್ನ ಸಹವಾಸ
ಇದ್ರೆ ಕೊಡ್ತೀಯಾ ರಮೇಶನ ವಿಳಾಸ?










huDugi pakshaaMtara maaDa
huDugi pakshaaMtara maaDa baradittu
--
ಜಯಶಂಕರ್
ಅಂತರ್ವಾಣಿ - http://anjshankar.blogspot.com