ಮೂರು ಹನಿಗವನಗಳು
- ಅರ್ಶದ್ ಹುಸೇನ್, ಶಾರ್ಜಾ
ಸ್ಪೇರ್ ಪಾರ್ಟ್ಸ್
ಎಷ್ಟು ಒಳ್ಳೆಯದಾಗುತ್ತಿತ್ತು
ಒಂದು ವೇಳೆ ಬದಲಿಸುವ ಹಾಗಿದ್ದರೆ
ಕಾರಿನ ಬಿಡಿಭಾಗಗಳ ಹಾಗೆ
ಮಾರ್ಪಡಿಸಬಹುದಿತ್ತು
ನಮ್ಮ ಹೆಂಡತಿಯರನ್ನು
ಐಶ್ವರ್ಯಾ, ಸುಶ್ಮಿತಾ, ಮಾಧುರಿಗೆ
ಪಗಾರ:
ತಿಳಿದುಕೊಂಡಿರುವರು
ದುಬೈಯಲ್ಲಿ ಸಿಗುವುದು ರೊಕ್ಕ ಹಜಾರ ಹಜಾರ
ತಿಳಿದುಕೊಳ್ಳಲೇಬೇಕು ನೀವು
ಇಲ್ಲಿ ಮನೆಬಾಡಿಗೆಯೇ ಮುಕ್ಕಾಲು ಪಗಾರ
ಕನ್ನಡಿಗ:
ಕನ್ನಡಿಗರಾರು
ಕರ್ನಾಟಕದಲ್ಲಿರುವವರು
ಕನ್ನಡ ಚಿತ್ರ ನೋಡುವವರು
ಕನ್ನಡ ಹಾಡು ಕೇಳುವವರು
ಕನ್ನಡದಲ್ಲಿ ವ್ಯವಹರಿಸುವವರು
ಇವರಾರೂ ಅಲ್ಲ
ಜಗತ್ತಿನಲ್ಲಿ ಎಲ್ಲಿದ್ದರೂ
ಕನ್ನಡದಲ್ಲಿ ಯೋಚಿಸುವವರೇ
ನಿಜವಾದ ಕನ್ನಡಿಗರು.










Arshadravare, Nimma
Arshadravare, Nimma hanigavanagalu bahala chennagive. Yaaru Kannadiganendu tilisuva bhangiyantoooo innashtu sogasaagide.dhanyavaadagalu.