ಎರೆಡು ಚುಟುಕು
-ಅರ್ಶದ್ ಹುಸೇನ್ ಎಂ.ಹೆಚ್
ಸೃಷ್ಟಿಕರ್ತ
ಆಹಾ ಎಂಥಾ ನಯನ
ತಕ್ಕ ಸುಂದರ ವದನ
ಆಹಾ ಎಂಥಾ ಅಧರ
ಮಾತು ಎಂಥಾ ಮಧುರ
ಕೊಡಬೇಕು ಕೋಟಿ ರೂಪಾಯಿ
ಇವಳ ಸೃಷ್ಟಿಕರ್ತನ
ಹಾಂಗಾರೆ ನಂಗಕೊಡ್ರೀ
ಎಂದನಾ ಮೇಕಪ್ ಮ್ಯಾನ
೧ ಮೀಟರು ಬಟ್ಟೆ
ಮಲ್ಲಿಕಾ ಶೆರಾವತ್ ಗೆ
ಒಂದು ಮೀಟರು ಬಟ್ಟೆ ಕೊಟ್ಟರೆ
ಅದರಲ್ಲೇನು ಹೊಲಿಸಿಕೊಳ್ಳುತ್ತಾರೆ?
ಒಂದು ಜೊತೆ ಡ್ರೆಸ್ಸು
ಎರೆಡು ಕೈಗವಸು
ಮೂರು ಕರವಸ್ತ್ರ
ಹೊಲಿಸಿಯೂ ಉಳಿಸುತ್ತಾರೆ
ಅರ್ಧ ಮೀಟರ್ ವಸ್ತ್ರ








