ಸಿರಿವಂತಿಕೆಯ ಸುತ್ತ.....
ಗುರು ಬಬ್ಬಿಗದ್ದೆ

-  ಗುರು ಬಬ್ಬಿಗದ್ದೆ

ಶ್ರೀಮಂತರ ಗತ್ತು, ಗತ್ತು ಗಮ್ಮತ್ತು
ಹಣವನ್ನೇ ಕೂಡಿಟ್ಟು ಹಣವನ್ನೇ ಬಿತ್ತು
ಸುತ್ತ ಸುದ್ದಿಯನಿಟ್ಟು ಬೀದಿಯನು ಸುತ್ತು
ಶ್ರೀಮಂತರ ಗತ್ತು ಅವರಿಗೇ ಗೊತ್ತು               ೧

ಬಡವನ ಕುತ್ತಿಗೆಗೆ ತಂದಿತ್ತು ಕುತ್ತು
ತುತ್ತು ಅನ್ನವು ಸಿಗದೆ ಬಂತು ಆಪತ್ತು
ಹರೆಯದ ಹುಡುಗರ ಕಾಮದ ಕಣ್ಣು
ಅಬಲೆಯರ ಮಾಡಿತ್ತು ಅತ್ಯಾಚಾರದಲಿ ಮಣ್ಣು       ೨

ಶ್ರೀಮಂತರ ಗತ್ತು ಅವರದೇ ಸ್ವತ್ತು
ಹೆಣ್ಣು ಹೊನ್ನು ಮಣ್ಣಿನಲಿ ದರ್ಪ ತುಂಬಿತ್ತು
ಮುತ್ತಿಗಾಗಿ ತುತ್ತನ್ನು ಮರೆತಿತ್ತು
ಇನ್ಯಾರನೋ ಮೋಜಿಗೆ ಬಯಸಿತ್ತು                ೩

ಶ್ರೀಮಂತರ ಗತ್ತು ಗತ್ತು ಗಮ್ಮತ್ತು
ನಿನ್ನ ನಾಳೆಯದೆಲ್ಲ ಹಣದಲಿ ಬಿಟ್ಟು
ಇಂದಿನದು ಬಡವರ ರಕ್ತದಲಿ ಉಂಡು
ಸುಖಲೋಲುಪಗಳಲಿ ಅರಿಷಡ್ವೈರಿಗಳನೊಳಗೊಂಡು  ೪

ಶ್ರೀಮಂತರ ಗತ್ತು ಹೀಗೆ ಸಾಗಿತ್ತು
ಭ್ರೂಣ ಹತ್ಯೆಯು ಅವಕೆ ಮಾಮೂಲಾಗಿತ್ತು
ಹೆತ್ತ ತಾಯಿಯ ಮಾತು ಹಿಡಿಸದಾಗಿತ್ತು
ತಾನೆಂಬ ಅಹಂಕಾರ ಮಿತಿಯ ಮೀರಿತ್ತು             ೫

ಇಷ್ಟಾದರೂ ಇಳಿದಿಲ್ಲ ಶ್ರೀಮಂತರ ಗತ್ತು
ಬಡವರ ರಕ್ತದೋಕುಳಿಯಲಿ ಮಾಡುತಿಹರು ಗಮ್ಮತ್ತು

Syndicate

Syndicate content