ಬಾಳಲು ಬಿಡದ ಠಾಕರೆಗಳು
ಗೋಪಿನಾಥ್ ರಾವ್

- ಗೋಪೀನಾಥ ರಾವ್


ಮುಂಬೈ ಮಹಾರಾಷ್ಟ್ರಿಗರಿಗೆ ಮಾತ್ರ ಸೇರಿದ್ದು ಅನ್ನುವ ಕೂಗು ಹಿಂದೊಮ್ಮೆ ಕೂಡ ಬಂದಿತ್ತು. ಆಗ ಈ ಮಾತನ್ನು ಹೇಳಿದ್ದು ಬಾಳಾ ಠಾಕರೆ. ಸುಮಾರು ಮೂರು ದಶಕಗಳ ನಂತರ ಇತಿಹಾಸ ಪುನರಾವರ್ತನೆಯಾಗಿದೆ. ಈ ಬಾರಿ ಈ ಸೊಲ್ಲೆತ್ತಿದವರು ಬಾಳಾ ಠಾಕರೆಯ ಅಳಿಯ ರಾಜ್ ಠಾಕರೆ. ಉದ್ದೇಶ ಒಂದೇ- ತನ್ನ ಬೇರು ಗಟ್ಟಿಮಾಡಿಕೊಳ್ಳುವುದು.

ರಾಜಕೀಯದ ಮಂದಿಗೆ ತನ್ನನ್ನು ನಾಯಕನನ್ನಾಗಿಯೇ ಉಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಹಿಂಬಾಲಕರುಗಳಲ್ಲಿ ಲೀಡರು ಅನ್ನಿಸಿಕೊಳ್ಳಬೇಕಾದವರು ತನ್ನ ನಾಯಕತ್ವದ ಲಕ್ಷಣಗನ್ನು ಆಗಾಗ ತೋರಿಸಬೇಕಾಗುತ್ತದೆ. ಇನ್ನಿತರ ಮರಿ ಪುಢಾರಿಗಳು ಮೇಲೇರಿ ಬರದಂತೆ ನೋಡಿಕೊಳ್ಳಬೇಕಾಗುತ್ತದೆ. ಅದಕ್ಕೆಂದೇ ಬರಿಗಣ್ಣಿಗೆ ನ್ಯಾಯವೆಂದು ಕಾಣುವ ಈ ರೀತಿಯ ಆಕರ್ಷಕ ಸ್ಲೋ 'ಗನ್ನು'ಗಳು ಉಪಯೋಗಕ್ಕೆ ಬರುತ್ತವೆ. ಮೇರು ವ್ಯಕ್ತಿತ್ವವನ್ನು ಕೆಣಕುವುದು ಒಂದು ದಾರಿ. ಸಂಸ್ಕೃತಿಯ ಮೇಲೆ ಧಾಳಿಯನ್ನು ಪ್ರತಿಭಟಿಸುವುದು ಇನ್ನೊಂದು ದಾರಿ. ಪ್ರಾದೇಶಿಕತೆ, ಭಾಷೆ, ಜಾತಿ ಭಾವನೆಗಳನ್ನು ಕೆಣಕುವುದು ಇನ್ನೊಂದು ದಾರಿ. ಹೇಳಿಕೆ ಆಕರ್ಷಕವಾಗಿ ಕಾಣುವ ಇನ್ಯಾವುದೇ ದಾರಿಯೂ ಆದೀತು- ಅಗತ್ಯ ಅಂದರೆ ಸುದ್ದಿಯಾಗಬೇಕು ಅಥವಾ ಸುದ್ದಿಯಲ್ಲಿರಬೇಕು.
ರಾಜ್ ಥಾಕರೆಗೆ ಮನಸ್ಸಿದ್ದರೆ ಅಮಿತಾಭ್ ರನ್ನು ನೇರವಾಗಿ ಕಂಡು ಮುಂಬೈಯಲ್ಲಿ ಕಾಲೇಜು ಹಾಕಿಸುವಂತೆ ಕೇಳಿಕೊಳ್ಳಬಹುದಿತ್ತು. ಬರೇ ಅಮಿತಾಭ್ ರನ್ನೇ ಏಕೆ, ಹೊರಪ್ರದೇಶದಿಂದ ಬಂದ ಎಲ್ಲರನ್ನೂ ಮುಂಬೈ ಅಭಿವೃದ್ಧಿಗೆ ಪಣತೊಡುವಂತೆ ಮನವೊಲಿಸಬಹುದಿತ್ತು. ಯಾರೆಲ್ಲ ಮುಂಬೈ ಅಭಿವೃದ್ಧಿಗೆ ಸಹಕರಿಸುತ್ತಿಲ್ಲವೋ ಅವರುಗಳ ಹೆಸರು ಬಹಿರಂಗ ಪಡಿಸಬಹುದಿತ್ತು. ಅದನ್ನು ಬಿಟ್ಟು ಅವರ ಬಗೆಗೆ ಕೀಳಾಗಿ ಮಾತನಾಡುವುದು, ಧಮ್ಕಿ ನೀಡುವುದು ಪ್ರಚಾರಗಿಟ್ಟಿಸಿಕೊಳ್ಳುವ ತಂತ್ರ ಅಲ್ಲದೆ ಮತ್ತಿನ್ನೇನೂ ಅಲ್ಲ.. ಹೊರನಾಡಿನವರು ಬಿಡಿ, ಮುಂಬೈ ಬೆಳವಣಿಗೆಗೆ ಅದೇ ಪ್ರದೇಶದವರಾದ ರಾಜ್ ಠಾಕರೆ ಕೊಡುಗೆ ಏನು?

ನಮ್ಮ ಭಾಷೆ, ಸಂಸ್ಕೃತಿ, ನೆಲ ರಕ್ಷಿಸಬೇಕೆಂಬ ಮನಸ್ಸುಳ್ಳವರು ಒಗ್ಗೂಡಬೇಕು, ಒಟ್ಟಾಗಿ ಕೆಲಸ ಮಾಡಬೇಕು. ಹದಗೆಟ್ಟ ಮಾತನ್ನಾಡಿ ಸಾಮರಸ್ಯ ಕೆಡಿಸಬಾರದು. ಎಲ್ಲಿ ಯಾರೆದುರು ಸಮಸ್ಯೆ ಚರ್ಚಿಸಬೇಕೋ ಅವರಲ್ಲಿ ಮಾತ್ರ ಚರ್ಚೆಯಾಗಬೇಕು, ಚಳವಳಿ ಅವಕಾಶ ಹುಡುಕುವ ದುಷ್ಕರ್ಮಿಗಳ ಕೈಗೊಂಬೆಯಾಗಬಾರದು. ರಾಜಕೀಯ ಲಾಭದ ಅಳತೆಗೋಲು ಹಿಡಿಯುವವರನ್ನೆಲ್ಲ ಬದಿಗಿಟ್ಟು ನೈಜ ಸರಳ ನಿಲುವಿನಲ್ಲಿ ನಾಡು ಸಂಸ್ಕೃತಿ ಕಾಪಾಡುವುದಕ್ಕಿಳಿದರೆ ಕಾರ್ಯಸಾಧನೆಯಾಗುತ್ತದೆ. ಯಾರಗೋಜಿಗೂ ಇಲ್ಲದ ಎಚ್ ಎ ಎಲ್ ನೌಕರನಂತಹ ಶ್ರೀಸಾಮಾನ್ಯರು ಸಾಯುವುದು ತಪ್ಪುತ್ತದೆ. ಆದರೆ ಆ ರೀತಿಯ ಸಾಂಸ್ಕೃತಿಕ ನಾಯಕರೆಲ್ಲಿ? ನಮ್ಮಲ್ಲಿರುವುದು ನೆಮ್ಮದಿಯಲ್ಲಿ ಬಾಳಲು ಬಿಡದ ಥಾಕರೆಗಳು ಮಾತ್ರ!

ವಂದನೆಗಳೊಂದಿಗೆ,
ನಿಮ್ಮ ಸಂಗಾತಿ,
ಗೋಪೀನಾಥ ರಾವ್.

ಇದರಿಂದ

ಇದರಿಂದ ನಮ್ಮ ಅಭಿಮಾನಶೂನ್ಯ ಕನ್ನಡಿಗರಿಗೆ ಬಂದ ಪಾಠವೇನು ಅನ್ನೊದು ಮುಖ್ಯನೋಡಿ.  ಕೆಲವನ್ನು ಗಮನಿಸಿ. ಇಬ್ಬರೂ ಠಾಕರೆಗಳಲ್ಲಿ ಪೈಪೋಟಿ ಇದೆ. ಸತ್ಯ. ಆದರೆ ಭೂಮಿಪುತ್ರರ ಹಕ್ಕಿನ ಬಗ್ಗೆ ಇರುವ ಕಳಕಳಿ ಬಹುಶಃ ನಮ್ಮ ರಾಜಕಾರಣಿಗಳಿಗಾಗಲಿ ಕನ್ನಡ ಹೋರಾಟಗಾರರಿಗಾಗಲಿ ಇದೆಯೆ ?

ಈಗಾಗಿರೋದೇನು  ?  


ಪ್ರತಿ ಬ್ಯಾಂಕ್ ನಲ್ಲಿ ಉದ್ಯೋಗ ಕ್ಷೇತ್ರಗಳಲ್ಲಿ ಮರಾಠಿಜನ ತುಂಬ್ಕೊತಿದಾರೆ. ಅದು ಇಲ್ಲಿನ ಜನರ ಹಿತದೃಷ್ಟಿಯಿಂದ ಒಳ್ಳೇದಲ್ವೆ. ನಮ್ಮ ಕನ್ನಡದೋರು ಮಾಡ್ತಾಇರೋದೇನು ? ನಮ್ಮ ಜನಕ್ಕೆ ಏನಾದ್ರು ನ್ಯಾಯ ಸಿಕ್ತಾಇದೆಯಾ ನಮ್ಮ ಬೆಂಗ್ಳೂರ್ ನಲ್ಲಿ ?

ಹೀಗೆ ಯೋಚಿಸೊದ್ ಬಿಟ್ಟು,  ಮರಾಠಿಜನನ ಬೈದ್ರೆ ಏನುಪಯೋಗ ಸ್ವಾಮಿ. ಅದು ಅವ್ರ ರಾಜ್ಯ.  ಹೊಡ್ದಾಡ್ತಿದಾರೆ. ಸರಿ,   ಅಲ್ವೇನು ?

ಮುಂಬೈ ಅಂತರರಾಷ್ಟ್ರೀಯ ನಗರ ಸರಿ. ನಾವ್ ಹೇಳ್ತೀವಿ. ಅಷ್ಟು ಜನ ಮಹಾರಾಷ್ಟ್ರಿಯನ್ಸ್ ಎಲ್ಲಿಗೆ ಹೋಗಬೇಕು ? ಅವರ ಸಾಹಸ, ಅವರ ಭಾಷೆ, ಅವರ ಮಾತೃಭಾಷೆ ಪ್ರೇಮ ಮೆಚ್ಚಿ. ಈಗಂತೂ ಅವರಿಗೆ ಶುಕ್ರದೆಶೆ. ಎಲ್ಲಿ ನೋಡ್ಲಿ ಮರಾಠಿ ಗಾಳಿ. ದೇಶದ ಪ್ರೆಸಿಡೆಂಟ್ , ಕೃಷಿಮಂತ್ರಿ, ಮತ್ತೆ ಭಾರಿಭಾರಿ ಉದ್ಯಮಿಗಳು ಅವ್ರೆ. ಬಿ. ಎಮ್. ಸಿ. ಅವ್ರ ಸುಪರ್ದಿನಲ್ಲಿದೆ. ಅವ್ರಿಗೆ ಒಳ್ಳೆ ಪೇಪರ್ ಇದೆ. ಜನ ಪ್ರೀತಿಯಿಂದ ಖರೀದಿಸಿ
ಓದ್ತಾರೆ. ಹೌದು. ನೀವೆ ಊಹಿಸ್ಕೊಳ್ಳಿ ನಮ್ಜನದ ನಿದ್ದೆ ತತ್ವನ. ನಮ್ಮ ರಾಜಕಾರಣಿಗಳೊ ಬಡ್ಕೊಬೇಕು. ಏನಂತೀರಿ.  ಯೋಚ್ಸಿ  !

 

  ಯಾವುದೇ

 

ಯಾವುದೇ ಸುಧಾರಣಾತ್ಮಕ ಕೆಲಸ ಮಾಡದೆ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಾಗಿ ಮಾಡುವ ಇ೦ತಹಾ ಅಪಾಯಕಾರಿ ತ೦ತ್ರಗಳಿಗೆ ಜನ ಮರುಳಾಗದೆ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಮತ್ತು ಈ ಧೋರಣೆಯನ್ನು ಪ್ರತಿಭಟಿಸಬೇಕು. ಪರಸ್ಥಳದಿ೦ದ ಬ೦ದವರ ಪ್ರತಿಭೆ, ಪರಿಶ್ರಮಗಳನ್ನು ಉಪಯೋಗಿಸಿಕೊ೦ಡು ತಮ್ಮೂರನ್ನು ಬೆಳೆಸಿ, ತಾವು ಪ್ರಬಲರಾದೊಡನೆ ಹೊರಗಿನಿ೦ದ ಬ೦ದವರನ್ನು ಹೀಯಾಳಿಸಿ, ಹಿ೦ಸಿಸಿ ಹೊರಗಟ್ಟುವ ವರ್ತನೆ ಖ೦ಡನೀಯ.

ಮೃಣಾಲಿನಿ ಉದಯ ಕುಮಾರ್

Syndicate

Syndicate content