ಕುಸುಮದ ಚಡಪಡಿಕೆ
flowers.jpg

-  ನ್ಯಾ. ಶಿ. ವಿ.

ಮುಂಜಾನೆಯ ಇಬ್ಬನಿಯ ಮುತ್ತುಗಳಲಿ
ನವಿರಾಗಿ ಅರಳಿ ನಿಂತ ಕುಸುಮವೇ...
ತಂಪಾಗಿ ಬೀಸುತಿಹ ತಂಗಾಳಿಯಲಿ
ಹೊಂಬಿಸಿಲ ಕಿರಣಗಳಲಿ ಮೈಚಾಚಿ
ಇಬ್ಬನಿ ಮುತ್ತುಗಳ ಕರಗಿಸಿದ ಕುಸುಮವೇ...

ನೀ ಮಾನಿನಿಯ ಮುಡಿಗೇರಲು
ಅದು ಯಾರ ಬಿನ್ನಹವೋ..?
ನೀನೇ ಬಯಸಿದ ಕನಸೋ..?
ನೀ ದೇವ ಪಾದಕ್ಕೆರಗಲು
ಅದು ಯಾರ ಕೋರಿಕೆಯೋ..?
ಅದು ನಿನ್ನ ಸಮರ್ಪಣೆಯೋ..?

ನೀ ಎಂದಾದರೂ ನಿರ್ಧರಿಸಿದ್ದೆಯಾ..
ಮಾನಿನಿಯ ಮುಡಿಗೇರದಿರಲು..?
ನೀ ಎಂದಾದರೂ ಕೊರಗಿದ್ದೆಯಾ..
ಒಲಿಯದ ದೇವರ ಪಾದಕ್ಕೆರಗಲು..?
ನೀ ಎಂದಾದರೂ ಚಡಪಡಿಸುವೆಯಾ
ಲತೆಬಳ್ಳಿಯಲಿ ನಿನ್ನಂತೆ ನೀ ಕುಸುಮವಾಗಿರಲು....?


   

Syndicate

Syndicate content