ಇರಬೇಕು ಕನ್ನಡನಾಡಿನಲ್ಲಿ
Sandeep pp photo.jpg

- ಸಂದೀಪ್ ಪಿ ಪಿ 

ಇರಬೇಕು ಭಾರತದಲ್ಲಿ

ಹುಟ್ಟಬೇಕು ಕರ್ನಾಟಕದಲ್ಲಿ ಭಾರತಾಂಬೆಯ ಪುತ್ರನಾಗಿ

ಹಾರಿಸಬೇಕು ಕನ್ನಡದ ಕೀರ್ತಿಯನ್ನು

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ

ಎಲ್ಲೇ ಇದ್ದರೂ, ಏನೇ ಆದರೂ

ಇರಬೇಕು ನಿಮ್ಮಲ್ಲಿ ಒಬ್ಬನಾಗಿ

ಅಪ್ಪಟ ಕನ್ನಡಿಗನಾಗಿ

ಎಷ್ಟೇ ಜನ್ಮಗಳಿದ್ದರೂ ನಾ ಹುಟ್ಟುವ ಊರು ನನ್ನೂರು

ನನ್ನ ಹೆಮ್ಮೆಯ ತವರೂರು

ನನ್ನ ತಾಯಿಯ ಕನ್ನಡಾಂಬೆ ಊರು

ಶ್ರೀಗಂಧದ ನಾಡು ಚೆಲುವ ಕನ್ನಡ ನಾಡು

ಕಾವೇರಿ ಹರಿಯುವ ನಾಡು ನಮ್ಮ ನಾಡು

ಬೇಲೂರು ಹಳೇಬೀಡಿನ ಬೀಡು

ಮಲೆನಾಡಿನ ಮೈಸಿರಿ ನಮ್ಮ ನಾಡು

ಸಾಗರದಂಚಿನ ಊರು ಮಂಗಳೂರು

ಸಾಗರದಾಚಿನ ಬೆಂಗಳೂರು

ಹಸಿರು ಮಲೆಗಳಿಂದ ಥಳಥಳಿಸುವ ನಮ್ಮ ನಾಡು

ಬೆಟ್ಟಗುಡ್ಡಗಳ ಈ ಬೀಡು ಇದೊಂದು ಸುಂದರ ನಾಡು

ಕರ್ನಾಟಕದ ಸೊಬಗ ನೋಡಲು ಎರೆಡು ಕಣ್ಣು

ಸಾಲದು ಸೊಬಗನ್ನು ಬರೆಯಲು

ಸಾಲೂ ಇಲ್ಲ ವಿವರಿಸಲು ಮಾತೂ ಇಲ್ಲ

ನನ್ನ ಹೆಮ್ಮೆಯ ಕರ್ನಾಟಕ

ಅದರ ಬಗ್ಗೆ ಎರೆಡು ಮಾತಿಲ್ಲ

ಕನ್ನಡ ಕೇಳಲು ಚೆಂದ

ಕನ್ನಡಿಗನ ನೋಡುವುದೇ ಒಂದು ಅಂದ

ಓದುವುದು ಬರೆಯುವುದೇ ಒಂದು ಅಂದ

ಕನ್ನಡ ಮಾತನಾಡುವುದು ಅಂದವೋ ಅಂದ

ಜನ್ಮ ಕೊಟ್ಟವಳು ನನ್ನ ತಾಯಿ

ಬೆಳೆಸಿದಳು ಭೂತಾಯಿ ತಾಯಿ

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು

ಸತ್ತರೂ ಕನ್ನಡ ನಾಡಿನಲ್ಲೇ ಸಾಯಬೇಕು

ಕುಡಿದರೆ ಕಾವೇರಿ ನೀರೇ..

ಜೈ ಎಂದರೆ ಜೈ ಕನ್ನಡಾಂಬೆ ಎನ್ನಬೇಕು

ಇದೇ ನನ್ನ ಆಸೆ

ಕನ್ನಡಿಗರ ಆಸೆಯಾಗಬೇಕೆಂಬುದು ನನ್ನ ಆಸೆ

maanyarE pi. pi. saMdeep

maanyarE
pi. pi. saMdeep avara
kavana Odi hemme enisitu.

aadare maanya shree dEvE gowDarige " kannaDa naaDinalli huTTabaaradittu eMdu yaake anisitO?"

uttama kavana prakaTisiddakke vaMdanegaLu.

iMtee
pejattaaya es. em.
baaLehoLe19

Syndicate

Syndicate content