ನಿನ್ನೊಲುಮೆ ನನಗಿರಲಿ
- ಗುರು ಬಬ್ಬಿಗದ್ದೆ
ಏನಿದ್ದರೇನು, ನೀನಿಲ್ಲದಿರೆ ಮನವೆ
ಏನಾದರೇನು ನೀನಿದ್ದರೆ ಒಲವೆ ೧
ಬದುಕಲಿ ನೋವುಗಳು ನಲಿವುಗಳು ಹಲವು
ನಿನ್ನೊಲುಮೆ ನನಗಿರಲಿ ಸಂತಸದ ಹೊನಲು ೨
ಬೇಸಿಗೆಯ ಕರಿಮುಗಿಲು ವರ್ಷಋತು ಎನದಿರು
ಹರುಷದಿ ಮನವಿರಲು ದ್ರೋಹವ ಬಗೆಯದಿರು ೩
ಕರವನು ವಂದಿಸಿಹೆ ಕರುಣಾಳು ಕಾಪಾಡು
ಕರ್ತನೂ ನೀನು ಕಾರಣನೆ ಕೃಪೆದೋರು ೪
ಬಿಡಬೇಡ ನಿನ್ನ ಗುಣ ಬರಲಿ ಜೀವಕ್ಕೆ ಪಣ
ಅವನಿರೆ ನಿನ್ನೊಳು ಹೊಮ್ಮುವುದು ಸದ್ಗುಣ ೫
ಅಕ್ಕರೆಯ ಮಾತುಗಳು ಹೊಮ್ಮಲಿ ನನ್ನಲಿ
ಸಕ್ಕರೆಯ ಬದುಕಿಗೆ ನಿನ್ನೊಲುಮೆ ನಿನಗಿರಲಿ ೬









