- ರೋನ್ಸ್ ಬಂಟ್ವಾಳ, ಮುಂಬೈ
ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ ಸುವರ್ಣ ಮಹೋತ್ಸವ ಸಮಾರಂಭವು ಇಂದಿಲ್ಲಿ (೧೬.೧೨.೨೦೦೭) ಭಾನುವಾರ ಬೆಳಿಗ್ಗೆಯಿಂದ ಒಂದು ದಿನದ ಸಂಭ್ರಮದ ಕಾರ್ಯಕ್ರಮದೊಂದಿಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು.
ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ಜಯ ಸಿ. ಸುವರ್ಣ ಇವರು ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು. ವಿದ್ಯಾವಿಹಾರ ಶ್ರೀ ಅಂಬಿಕಾ ಮಂದಿರದ ಧರ್ಮದರ್ಶಿ ಪೆರ್ಣಂಕಿಲ ಹರಿದಾಸ್ ಭಟ್ ಶುಭಾಶಂಸನೆಗೈದರು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ಹೈಕೋರ್ಟ್‌ನ ಪ್ರಸಿದ್ಧ ನ್ಯಾಯವಾದಿ, ಸಿಟಿಜನ್ಸ್ ಆರ್ಗನೈಸೇಶನ್ ಫೋರ್ ಪಬ್ಲಿಕ್ ಒಪೀನಿಯನ್ ಸಂಸ್ಥೆಯ ಅಧ್ಯಕ್ಷರೂ, ಮುಂಬಯಿ ಬಿಜೆಪಿ ಲೀಗಲ್ ಸೆಲ್‌ನ ಚೇರ್‍ಮೆನ್ ನ್ಯಾ. ಸಂಜೀವ ಕಾಂಚನ್ ಹಾಜರಿದ್ದು, ಕನ್ನಡ ಸಂಘ ಸಾಂತಾಕ್ರೂಜ್ ಮುಂಬಯಿ ಅಧ್ಯಕ್ಷರಾದ ಎಲ್. ವಿ. ಅಮೀನ್ ಇವರ ಅಧ್ಯಕ್ಷತೆಯಲ್ಲಿ ಸಮಾರಂಭವು ನೆರವೇರಿತು.
ಗೌರವ ಅತಿಥಿಗಳಾಗಿ ಗೋಲ್ಡ್ ಇಮೇಜ್‌ನ ಮಾಲಕರು ಹೆಚ್. ಪಿ.ನಾಯಕ್, ಸಿ ಕ್ಯಾನ್‌ಬರಾ ಇಂಡಸ್ಟ್ರೀಸ್‌ನ ಮಾಲಕ ಕೆ. ಎಂ. ಶೆಟ್ಟಿ, ಬಾಬಾಸ್ ಗ್ರೂಫ್ ಆಫ್ ಇಂಡಸ್ಟ್ರೀಸ್‌ನ ಮಾಲಕ ಮಹೇಶ್ ಶೆಟ್ಟಿ, ದಿವ್ಯ ಸಾಗರ್ ಗ್ರೂಫ್ ಆಫ್ ಹೋಟೆಲ್ಸ್‌ನ ಆಡಳಿತ ನಿರ್ದೇಶಕ ದಿವಾಕರ್ ಶೆಟ್ಟಿ ಉಪಸ್ಥಿತರಿದ್ದು, ಸಂಘದ ಮಾಜಿ ಅಧ್ಯಕ್ಷರು, ದಾನಿಗಳಿಗೆ ಸನ್ಮಾನಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಲ್. ವಿ. ಅಮೀನ್ ವಹಿಸಿದ್ದು, 'ಅಕ್ಷಯ' ಮಾಸಿಕದ ಗೌರವ ಸಂಪಾದಕ, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷರೂ, ಖ್ಯಾತ ಸಾಹಿತಿ ಎಂ. ಬಿ. ಕುಕ್ಯಾನ್ ಸಂಘದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಈ ಶುಭಾವಸರದಲ್ಲಿ ಮುಖ್ಯ ಅತಿಥಿಯಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಭಾರತ್ ಬ್ಯಾಂಕ್‌ನ ಉಪಕಾರ್ಯಾಧ್ಯಕ್ಷ ವಾಸುದೇವ ಆರ್. ಕೋಟ್ಯಾನ್, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ನ್ಯೂಸ್‌ನ ಕಾರ್ಯಾಧ್ಯಕ್ಷ ಹಾಗೂ ಮಹಾಲಕ್ಷ್ಮೀ ಬಿಲ್ಡರ್‍ಸ್‌ನ ನಿರ್ದೇಶಕ ಕುಮಾರ್ ಬಂಗೇರ, ಚಿತ್ರ ನಿರ್ಮಾಪಕ, ಉದ್ಯಮಿ ಗ್ರೇಗೊರಿ ಡಿ. ಆಲ್ಮೇಡಾ ಉಪಸ್ಥಿತರಿದ್ದು, ಮಕ್ಕಳ ದತ್ತು ಸ್ವೀಕಾರ ಹಾಗೂ ಲಕ್ಕೀಡ್ರಾವನ್ನು ನೆರವೇರಿಸಿದರು. ಹಾಗೂ ಸಂಘದ ಅಧ್ಯಕ್ಷರಾದ ಎಲ್. ವಿ. ಅಮೀನ್ ದಂಪತಿಯನ್ನು ಸನ್ಮಾನಿಸಿದರು.
ಗೌ. ಕೋಶಾಧಿಕಾರಿ ಚಂದ್ರಹಾಸ ಜೆ. ಕೋಟ್ಯಾನ್, ಜೊತೆ ಕಾರ್ಯದರ್ಶಿ ಜಿ. ಆರ್. ಬಂಗೇರ ಜೊತೆ ಕೋಶಾಧಿಕಾರಿ ಸುಂದರ್ ವಿ. ಅಮೀನ್, ಸಲಹಾದಾರರಾದ ನಾರಾಯಣ ಎಸ್. ಶೆಟ್ಟಿ, ಫೆಲಿಕ್ಸ್ ಡಿ'ಸೋಜಾ, ಎನ್. ಎಂ. ಸನೀಲ್, ದಿನೇಶ್ ಅವಿನ್, ಶ್ರೀಮತಿ ಸುಜತಾ ಆರ್.ಶೆಟ್ಟಿ, ಶ್ರೀಮತಿ ಪ್ರೇಮಾ ಆರ್.ಕೋಟ್ಯಾನ್, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಎಸ್.ಶೆಟ್ಟಿ, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷ ಬಿ.ಆರ್.ಪೂಂಜ ಹಾಜರಿದ್ದು, ಸಂಘದ ಗೌ. ಪ್ರ. ಕಾರ್ಯದರ್ಶಿ ಬಿ. ಡಿ. ಸುವರ್ಣ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಹಾಗೂ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಪ್ರಾಸ್ತಾವಿಕ ಭಾಷಣಗೈದು, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬಿ.ರವೀಂದ್ರ ಅವಿನ್ ವಂದಿಸಿದರು.
ಚಿಣ್ಣರ ಬಿಂಬ ಕಲಾಜಗತ್ತು ಮಕ್ಕಳಿಂದ, ಸಂಘದ ಸದಸ್ಯ, ಸದಸ್ಯೆಯರಿಂದ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಮನೋರಂಜನಾ ಕಾರ್ಯಕ್ರಮ ಪ್ರದರ್ಶಿಸಲ್ಪಟ್ಟವು.
(ಮೇಲಿರುವ ಫೋಟೋ ಕ್ಲಿಕ್ಕಿಸಿದರೆ ಪೂರ್ಣಪ್ರಮಾಣದ ಫೋಟೋ ಲಭ್ಯವಾಗುತ್ತದೆ)








