ಭಗ್ನ ಪ್ರೇಮಿಯ ಹಿತವಚನಗಳು
- ಗೋಪೀನಾಥ ರಾವ್.
ಸತ್ಯವೆಂದು
ನಂಬಿಸಿದ್ದೇ ಸುಳ್ಳು
ಪ್ರೀತಿಸಿದ ಹೃದಯವನ್ನು
ಚುಚ್ಚಿದ್ದೇ ಮುಳ್ಳು
ದುಃಖ ತೋರಲು
ಕುಡಿದದ್ದೇ ಕಳ್ಳು
ಹಾಳು
ಜೀವನವೆಂದರೆ... ಟೊಳ್ಳು
ಗಾಳಿ ಮಾತ್ರ
ಹೊರಡುವ ಶಬ್ದವಿಲ್ಲದ ಸಿಳ್ಳು
ಅಥವಾ
ಗಾಳಿ ಹೋದ ಚಕ್ರದ
ಬಂಡಿಯಂತೆ ಜೊಳ್ಳು
ಹುಷಾರಾಗಿ ಅದನ್ನು
ಇಳಿದುಹೋಗುವಲ್ಲಿ ಮಾತ್ರ ತಳ್ಳು
ಪೊಳ್ಳು ಪ್ರೇಮ
ಧಿಕ್ಕರಿಸಿ ಗೆಲ್ಲು
ನೆಮ್ಮದಿ ಪಡೆದುಕೊಳ್ಳು.









