- ನಮೂನೆಗಳು-
- ಶ್ರೀನಾಥ್ ಭಲ್ಲೆ, ರಿಚ್ಮಂಡ್, ವಿ.ಎ
ಎಲ್ಲರ ಜೀವನದಲ್ಲೂ ಇಂತಹ ನಮೂನೆಗಳು ಇದ್ದೇ ಇರುತ್ತಾರೆ .... ಇವರುಗಳು ರೀತಿ ರಿವಾಜು ಬೇರೆ ... ಇವರ ನಡುವಳಿಕೆಯನ್ನು 'abnormal' ಅನ್ನುವ ಬದಲು 'different' ಅನ್ನಬಹುದು ... ಬಹಳ ಹಿಂದೆ ಟೀ.ವಿ ಯಲ್ಲಿ ಮೂಡಿ ಬರುತ್ತಿದ್ದ 'Ketchup' ಜಾಹೀರಾತಿನಲ್ಲಿ ಪಂಕಜ್ ಕಪೂರ್ ಹೇಳುವಂತೆ 'Its different' .... ಇರಲಿ, ನಾನು ಏನ ಹೇಳಹೊರಟಿರುವುದೆಂದರೆ ಕೆಲವು ನಮೂನೆಗಳ ನಗುವಿನ ಬಗ್ಗೆ.
- Wii ಪುರಾಣ-
-ಶ್ರೀನಾಥ್ ಭಲ್ಲೆ, ಮುಂಬೈಶಿವ ಪುರಾಣ, ವಿಷ್ಣು ಪುರಾಣ , ಗರುಡ ಪುರಾಣವನ್ನು ಹೆಸರನ್ನು ಎಲ್ಲರೂ ಕೇಳಿಯೇ ಇರುತ್ತೀರ. ಆದರೆ ಇದೇನಿದು Wii ಪುರಾಣ ಎಂದುಕೊಳುತ್ತಿರಬಹುದು....
ಇಲ್ಲಿ ನಾನು ಹೇಳಹೊರಟಿರುವುದು Nintendo - Wii ಸ್ವರ್ಗಾರೋಹಣ ಮಾಡಿದ ವಿಷಯದ ಬಗ್ಗೆ.
- ಬರಿ ಓಳು !-
-ಶ್ರೀನಾಥ್ ಭಲ್ಲೆ, ಮುಂಬೈ
ನನಗಂತೂ ಸುಳ್ಳು ಹೇಳಲಿಕ್ಕೆ ಬರೋಲ್ಲ ...... ವಾವ್ ... ನೋಡಿ, ಅದೇ ದೊಡ್ಡ ಸುಳ್ಳು ...... ನಿಂತ ನಿಲುವಲ್ಲೇ ಸುಳ್ಳು .... ಸತ್ಯದ ತಲೆ ಮೇಲೆ ಹೊಡೆದಂತಹ ಸುಳ್ಳು .... ಸುತ್ತಿಕೊಳ್ಳಲೂ ಕಷ್ಟವಾಗುವಂತೆ ರೀಲು ...
- ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?-
- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.
ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬಾಯಿಲ್ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ). - ಅಭ್ಯಾಸ ಬಲ-
ಗೋಪೀನಾಥ ರಾವ್
ರಾಜ್ಯೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಹೊಣೆ ನನ್ನ ಮೇಲೆ ಬಿದ್ದಿತ್ತು. "ಹತ್ತು ಮಂದಿಯನ್ನು ಸೇರಿಸಿ ನಾಟಕ ಮಾಡಿ" ಅಂತ ಪುಕ್ಕಟೆ ಸಲಹೆಯೂ ಸಿಕ್ಕಿತ್ತು.
- ಅಣು ಒಪ್ಪಂದ : ಸಹಿ ಸಂಗ್ರಹ-
---ಗೋಪಿನಾಥ ರಾವ್
’ಮಕ್ಕಳಿಗೆ ರಜ ಸಿಕ್ಕಾಯ್ತಲ್ಲ, ಇನ್ನು ಸ್ವಲ್ಪ ಮನೆಯಿಂದ ಹೊರಗೆ ಹೊರಟು ಕೆಲವರ ಸಹಿ ತಕ್ಕೊಂಡು ಬನ್ನಿ ಹೋಗಿ’
ನಾನು ಸುಮ್ಮನೆ ಕುಳಿತರೆ ಸಂಪಾದಕರಿಗೆ ಏನೋ ಒಂದು ತರಹದ ಅಸೂಯೆ. ಅದಕ್ಕೇ ಇರಬೇಕು, ಇರಲಿ, ಹೊರಗೆ ಸೆಖೆಯಲ್ಲಿ ಸ್ವಲ್ಪ ಸುತ್ತಾಡಿಕೊಂಡು ಬರುವಾ ಎಂದು ಹೊರಟೆ. - ರಾಮಣ್ಣಿಯ ಹೋಮ್ ವರ್ಕ್ !-
-ಶ್ರೀನಾಥ್ ಭಲ್ಲೆ
ಶುದ್ದ ಶುಕ್ರವಾರ ಬೆಳಿಗ್ಗೆ ತಲೆ ಸ್ನಾನ ಮಾಡಿ ತುಳಸೀಕಟ್ಟೆಯನ್ನು ನಾಲ್ಕೂವರೆ ರೌಂಡ್ ಹೊಡೆಯುವಷ್ಟರಲ್ಲಿ ನನ್ನ ಧರ್ಮಪತ್ನಿ ವಿಶಾಲೂಗೆ ಸೊಂಟ ಹಿಡಿದುಕೊಂಡುಬಿಟ್ಟಿತು. ನಿಲ್ಲೋಕ್ಕಾಗದೆ ಕುಸಿಯುವುದರಲ್ಲಿದ್ದಳು. ಹಿಡಿದುಕೊಳ್ಳೋಣ ಅಂತ ಹತ್ತಿರ ಹೋದರೆ ’ಮುಟ್ಟಬೇಡಿ’ ಅಂತ ಕಿರುಚೋದೇ ?
- ಹೆಸರು - ಹಾಗೇ ಸುಮ್ಮನೆ ..-
- ಶ್ರೀನಾಥ್ ಭಲ್ಲೆ.
ಹೆಸರಿನಲ್ಲೇನಿದೆ ಎಂದು ಕೇಳುವುದು ಬಹಳ ಹಳೆಯ ವಿಚಾರ. ಈ ಮುನ್ನ ನಾನೇ ಹಲವಾರು ಉಲ್ಲೇಖಗಳೊಡನೆ ಈ ವಿಚಾರವನ್ನು ಹೇಳಿದ್ದೆ. ಈಗ ಹೊಸ ರೀತಿಯಲ್ಲಿ ಆ ವಿಚಾರವನ್ನು ರಾಜಕೀಯ ವ್ಯಕ್ತಿಗಳ ಹೆಸರುಗಳ ಮೇಲೆ ಪ್ರಯೋಗ ಮಾಡಿದ್ದೇನೆ.
- ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿದರೆ ಧರಣಿ : ಅಮೇರಿಕಾದಲ್ಲಿ???-
-ಅರ್ಶದ್ ಹುಸೇನ್ ಎಂ. ಹೆಚ್
ಮೊನ್ನೆ ಯು.ಪಿ.ಎ. ಸರ್ಕಾರ ಪೆಟ್ರೋಲ್,ಡೀಸೆಲ್ ಬೆಲೆಗಳನ್ನು ಏರಿಸಿದ್ದು ಜನಸಾಮಾನ್ಯರಲ್ಲಿ ಬಿಸಿಸುದ್ದಿ. ಇದಕ್ಕೇ ಕಾದುಕೊಂಡಿದ್ದವರು ಪೆಟ್ರೋಲ್ ಬೆಲೆ ಏರಿಕೆಯನ್ನೇ ನಪವಾಗಿಟ್ಟುಕೊಂಡು ಅಗತ್ಯವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಲವೆಡೆ ಪ್ರತಿಭಟನೆ, ಬಂದ್ ಎಲ್ಲಾ ಆಚರಿಸುತ್ತಿದ್ದಾರೆ.
- ಮೊಲದ ಮಂಜ ಮತ್ತು ಮೇಷ್ಟ್ರು ನಿಂಗೇಗೌಡರು-
ಮೊಲದ ಮಂಜ ಮತ್ತು ಮೇಷ್ಟ್ರು ನಿಂಗೇಗೌಡರು
ಮೊಲದ ಮಂಜ ನಮ್ಮ ತರಗತಿಯಲ್ಲಿದ್ದ ಅತ್ಯಂತ ಹಿರಿಯ ವಿದ್ಯಾರ್ಥಿ! ಸುಮಾರು ಹದಿನೆಂಟು ಇಪ್ಪತ್ತು ವರ್ಷದವನಾದ ಆತ ಇನ್ನೂ ಹತ್ತನೇ ತರಗತಿಯಲ್ಲಿಯೇ ಇದ್ದುದಕ್ಕೆ, ಆತ ಕೊಡುತ್ತಿದ್ದ ಕಾರಣ ‘ಅವನ ತಾಯಿ ಸ್ಕೂಲಿಗೆ ಸೇರಿಸಿದ್ದು ಲೇಟು’ ಎಂಬುದು. - ಭಾರತದಲ್ಲಿ ಮಹಾಭಾರತೀಯರು !-
-ಶ್ರೀನಾಥ್ ಭಲ್ಲೆ
ದ್ವಾಪರ ಯುಗದ ಹಲವರಿಗೆ ಸ್ವರ್ಗಲೋಕದಲ್ಲಿದ್ದು ಬಹಳ ಬೋರಾಯಿತು. ದಿನವೂ ಅದೇ ಮುಖಗಳು. ಭೂಲೋಕದಲ್ಲಿ ಪಾಪ ಹೆಚ್ಚಾಗಿರೋದ್ರಿಂದ ಸ್ವರ್ಗಲೋಕದಲ್ಲಿ ಹೊಸ ಮುಖಗಳೇ ಕಾಣಿಸಿಕೊಳ್ಳುತ್ತಿಲ್ಲ. ನರಕಲೋಕದ ಕಾಲ್ ಸೆಂಟರ್’ಗಳು ಇತ್ತೀಚೆಗೆ ತಮಗೆ ವಿಪರೀತ ಕೆಲಸವಾಗಿದೆ ಅಂತ ಗೊಣಗುತ್ತಿದ್ದಾರೆ. ಪ್ರತಿ ಸಾವಿಗೂ ಇವರಿಗೆ ಫೋನ್ ಬರುತ್ತೆ. ಈಚೆಗಂತೂ ಮಿಯಾಮ್ನಾರ್, ಚೈನಾ, ಜೈಪುರ್’ಗಳಲ್ಲಿ ಆದ ದುರಂತದಿಂದ ಇವರಿಗೆ ದಿನಕ್ಕೆ ಇಪ್ಪತ್ತುನಾಲ್ಕು ಘಂಟೆ ಕೆಲಸ.
- ಕಲಿತ್ತ ಹುಡುಗಿ ದುಬೈಯಲ್ಲಿ-
ಕಲಿತ್ತ ಹುಡುಗಿ ದುಬೈಯಲ್ಲಿ
ಅರ್ಶದ್ ಹುಸೇನ್ ಎಂ. ಹೆಚ್.
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ
ಅಲ್ಲಿ ಹೋಗ್ತಿದ್ದ ಮಂದಿಯ ಕಣ್ಣು
ಅವಳ ಮ್ಯಾಲೆ ಬಿತ್ತಾ
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ(ಪ) - ಉಪದೇಶ-
- ಶ್ರೀನಾಥ್ ಭಲ್ಲೆ
ನಾನಿಲ್ಲಿ ಹಿತೋಪದೇಶ ಅಥವ ಗೀತೋಪದೇಶಗಳ ಬಗ್ಗೆ ಹೇಳಹೊರಟಿಲ್ಲ, ಬದಲಿಗೆ ’ಶ್ರೀ ಸಾಮಾನ್ಯನ ಬಿಟ್ಟಿ ಉಪದೇಶ’ದ ಬಗ್ಗೆ. ದಿನೇ ದಿನೇ ಏರುತ್ತಿರುವ ಬೆಲೆಗಳ ನಡುವೆಯೂ, ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಅತ್ಯಂತ ಸುಲಭವಾಗಿ ಸಿಗುವ ’ಏಕಮೇವ’ ’ಅದ್ವಿತೀಯ’ ಎಂದರೆ ಉಪದೇಶ. ತಮಗೂ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳುವ ಒಂದು ಕಾಯಿಲೆಯೇ ಈ ಉಪದೇಶ.
- ನಾನ್ಸೆನ್ಸ್ ಕವಿತೆಗಳು-
- ಸತ್ಯನಾರಾಯಣ ಬಿ ಆರ್
ಸರಕಾರೀ ಆಫೀಸರುಗಳಿಗೆ ಸಂಜೆ ಹೊತ್ತು ವ್ಯಾಯಾಮಕ್ಕೆ ಬೆನ್ನು ಬಗ್ಗಿಸದೇ ಆಡಬಹುದಾದ ಬ್ಯಾಡ್ ಮಿಂಟನ್ ಆಟ ಬೇಕಾಗುವಂತೆ ನಮಗೂ ಗಂಭೀರ ಕವನಗಳ ನಡುವೆ ಹಾಸ್ಯ ಕವನಗಳು!
- ಹನ್ಮಂತಪ್ಪನ ಕಥೆ-
ಹೇಳಿದ್ದವರು: ದಿ.ಸಣ್ಣತಿಮ್ಮೇಗೌಡ, ಬಾಳೇಹಳ್ಳಿ
ಸಂಗ್ರಹ: ಸತ್ಯನಾರಾಯಣ ಬಿ.ಆರ್.
ಒಂದು ಊರು. ಆ ಊರಿನ ಪಕ್ಕ ಒಂದು ಹೊಳೆ. ಅಲ್ಲೊಂದು ಅರಳಿಮರ. ಒಂದಿನ ರಾತ್ರಿ ಬರಬಾರದ ಮಳೆ ಬಂದು, ಬೀಸಬಾರದ ಗಾಳಿ ಬೀಸಿ ಆ ಅರಳಿ ಮರದ ಎಲೆ ಎಲ್ಲಾ ಉದುರೋದ್ವು.
- ಯಾರಿಗೂ ಹೇಳಬೇಡಿ... ಆಯ್ತಾ?-
- ಶ್ರೀನಾಥ್ ಭಲ್ಲೆ
ನಮ್ಮ ಬೀದಿ ಕೊನೆ ಅನಸೂಯಾಬಾಯಿಗೆ ವಿಷಯಗಳು ಎಲ್ಲೆಲ್ಲಿಂದಲೋ ಹ್ಯಾಗ್ಯಾಗೋ ತಿಳಿಯುತ್ತದೆ. ನನಗೆ ಎಷ್ಟೋ ಸಾರಿ ಅನ್ನಿಸುತ್ತೆ, ಇಂತಹವರು ನಮ್ಮ ದೇಶದ ಇಂಟೆಲ್ಲಿಜನ್ಸ್ ಡಿಪಾರ್ಟ್ ಮೆಂಟ್’ನಲ್ಲಿ ಇರಬೇಕಿತ್ತು ಅಂತ. ಕುತಂತ್ರಿಗಳ ವಿಷಯಗಳನ್ನು ಅರಿತು ಎಷ್ಟೋ ಜನರ ಜೀವ ಉಳಿಸಬಹುದಿತ್ತು. ಇರಲಿ ಬಿಡಿ ನಾವು ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುವುದು ಬೇಡ. ಸದ್ಯಕ್ಕೆ ಕೇವಲ ಅನಸೂಯಾಬಾಯಿಯ ’ಬಾಯಿಯ’ ವಿಷಯಕ್ಕೆ ಮಾತ್ರ ಸೀಮಿತಗೊಳಿಸೋಣ.
- ಹೊಸ ಫರ್ನಿಚರು!-
_ಗೋಪೀನಾಥ ರಾವ್
ಹುಡುಗಿಯ ಕಡೆಯವರು ಮಾತುಕತೆಗೆ ಬರುತ್ತಾರೆ ಎನ್ನುವುದು ಹಿಂದಿನಷ್ಟು ಸಂಭ್ರಮದ ಸುದ್ದಿಯಲ್ಲ ಬಿಡಿ. ಹಿಂದೆಯಾದರೋ ಇದು ಬಹಳಷ್ಟು ಸಂಭ್ರಮದ ಸುದ್ದಿಯೇ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ ನೋಡಿ!
- ಗುಂಡಿನ ಮತ್ತೇ ಆಪತ್ತು...-
- ಅರ್ಶದ್ ಹುಸೇನ್ ಎಂ.ಹೆಚ್.
ದಕ್ಷಿಣ ಕನ್ನಡದ ಆಟ (ಯಕ್ಷಗಾನ) ಬಂದರೆ ಮಲೆನಾಡಿನವರಿಗೊಂದು ನಿದ್ದೆಯಿಲ್ಲದ ರಾತ್ರಿ. - ಮಲದ ಮೆರವಣಿಗೆ-
{ಜಗತ್ತಿನ ಹಲವೆಡೆ ಚುನಾವಣೆ ಕಾವು ಏರಿದೆ. ಅಧಿಕಾರಕ್ಕಾಗಿ ಹತ್ಯಾಕಾಂಡದಂತಹ ವೈಪರೀತ್ಯ ಇತ್ತೀಚೆಗೆ ನೋಡಿದ್ದೇವೆ. ಮತ್ತೊಂದೆಡೆ ತಾವೇ ಉತ್ತಮ, ತಮ್ಮನ್ನು ಚುನಾಯಿಸಿ ಎಂದು ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಕೀಯ ಮುಖಂಡರು.
- ಕುಹಕವಾರ್ತೆ-
- ಅರ್ಶದ್ ಹುಸೇನ್ ಶಾರ್ಜಾ.
ಓದುತ್ತಿರುವವರು ಅಪರಿಚಿತ.
ಮುಖ್ಯಾಂಶಗಳು: ಆಯಾ ಸಂಸ್ಥಾನದಲ್ಲಿ ಕೆಲಸ ಮಾಡುತ್ತಿರುವವರು ಆಯಾ ಸಂಸ್ಥಾನದಲ್ಲಿಯೇ ಮನೆ ಮಾಡಬೇಕಿರುವುದು ಕಡ್ಡಾಯ, ಹೊಸ ಕಾನೂನು ಜಾರಿಗೆ ಬಂದ ಮೇಲೆ ದುಬೈ-ಶಾರ್ಜಾ ಸಹಿತ ಎಲ್ಲಾ ಸಂಸ್ಥಾನಗಳಲ್ಲಿ ಬಾಡಿಗೆಗಳಲ್ಲಿ ಧಿಡಿರನೆ ಕುಸಿತ
- ಸೇಕ್ರನೂ ಸೆಗಣಿ ಎಸೆಯುವ ದೆವ್ವವೂ...- - ಅರ್ಶದ್ ಹುಸೇನ್ ಎಂ.ಹೆಚ್.
ದೆವ್ವ, ಭೂತ, ಪಿಶಾಚಿ ಇನ್ನೇನೇನೋ ಹೆಸರುಗಳಿಂದ ಕರೆಯಬಹುದಾದ ಈ ಪ್ರಾಣಿ(?)ಗಳ ಉಪಟಳಗಳ ಬಗ್ಗೆ ಸುಮ್ಮನೇ ಒಂದು ಮಾತು ವಿಚಾರಿಸಿದರೆ ಅಕ್ಕ ಪಕ್ಕದವರಿಂದ ವಿಭಿನ್ನ ಪ್ರತಿಕ್ರಿಯೆ ದೊರೆಯಬಹುದು. ಬೆಂಕಿ ಉಗುಳುವ ಕೊಳ್ಳಿದೆವ್ವ, ರಾತ್ರಿ ಶಬ್ದ ತೆಗೆಯುವ, ನಿದ್ದೆ ಕೆಡಿಸುವ, ಆರೋಗ್ಯ ಹಾಳು ಮಾಡುವ, ಬೆಳೆಗಳಿಗೆ ಕಾಟ ಕೊಡುವ, ಸುಗಮ ಕೆಲಸ ನಡೆಯಲು ಅಡ್ಡಿಪಡಿಸುವ ಇನ್ನೂ ಹಲವಾರು ತರಹದ ದೆವ್ವಗಳ ಕೀಟಲೆ ಉಪಟಳಗಳ ಬಗ್ಗೆ ಜನರು ಇನ್ನೂ ಹೆಚ್ಚಿನ ವಿವರಗಳನ್ನು ನೀಡಬಹುದು. ಆದರೆ ಸೆಗಣಿ ಎಸೆಯುವ ದೆವ್ವ??
- ಸರಸ - ವಿರಸ-
- ಶ್ರೀನಾಥ್ ಭಲ್ಲೆ
ಬೆಳಿಗ್ಗೆ ಇಂದ ಏನೋ ಧುಮ ಧುಮ ಅನ್ನುತ್ತಾ ಓಡಾಡುತ್ತಿದ್ದಳು ವಿಶಾಲೂ. ಏನೂ ಅಂತ ಹೇಳ್ತಿಲ್ಲ. ಕೆನ್ನೆಗಳು ಭಾಗಶ: ಕೆಂಪಾಗಿದ್ದು, ಕಣ್ಣಲ್ಲಿ ಅಲ್ಲಲ್ಲೇ ನೀರು ತುಂಬಿದ್ದು, ತುಂತುರು ಅಥವಾ ಭಾರಿ ಅಳು ಬರುವ ಸಾಧ್ಯತೆ ಇತ್ತು. ನನ್ನೆದೆಗೆ ಒರಗಿ ಅತ್ತಾಗ (ಅತ್ತರೆ) ಕಾಟನ್ ಶರ್ಟಿನ ಜೊತೆ ಹೃದಯಕ್ಕೆ ಹತ್ತಿರವಾದ ಬನಿಯನ್ ಕೂಡಾ ಎಲ್ಲಿ ಒದ್ದೆಯಾಗುವುದೋ ಎಂದು ಅಲೋಚಿಸಿ, ನೀರು ಬಿದ್ದರೂ ಜಾರಿ ಹೋಗುವುದಕ್ಕೆ ಹತ್ತಿರವಾದ ಪಾಲಿಸ್ಟರ್ ಶರ್ಟು ಧರಿಸಿ ಕುಳಿತೆ.
- ಏನ್ ತಿಂದ್ರೀ !!-
- ಶ್ರೀನಾಥ್ ಭಲ್ಲೆ
ಸಂಜೆ ತಂಪು ಗಾಳಿ ಸೇವನೆಗೆ ಹೊರಟಿದ್ದೆ. ಮನಸ್ಸಿಗೆ ಬಂದ ಹಾಡನ್ನು ಗುನುಗುನಿಸುತ್ತಾ ಹಾಗೇ ನೆಡೆಯಲು ವಕ್ರಮೂತಿ ಸುಂದರೇಶ ಸಿಕ್ಕ. ಹಾಗೇ ಅವನೊಡನೆ ಹೆಜ್ಜೆ ಹಾಕುತ್ತಾ ನನಗೇ ಅರಿವಿಲ್ಲದೆ ಕದಂಬ ರೆಸ್ಟೋರೆಂಟ್’ನಲ್ಲಿ ಕುಳಿತಿದ್ದೆ.



