- ಊರ್ಧ್ವಮುಖಿ-
-ಮಹೇಶ್
ಊರ್ಧ್ವಮುಖಿ
ಭುವಿಯನ್ನೂ ಬಾನನ್ನೂ
ಬೆಸೆಯುವಂತೆ
ಬಯಲಲೊಂದು
ಒಂಟಿ ಮರ. - ನನ್ನ ಪ್ರೀತಿಯ ಹೆಡ್ಮಾಸ್ಟರ್ - ಭಾಗ ೨-
ಕಳೆದ ವಾರದಿಂದ ಮುಂದುವರೆದ ಭಾಗ...
ಮಂಡಲ ಪಂಚಾಯಿತಿಗೆ ಸೇರಿದ್ದ ಒಂದು ಕೊಠಡಿಯಲ್ಲಿ ಜೂನಿಯರ್ ಕಾಲೇಜಿನ ಹದಿನೇಳೊ ಹದಿನೆಂಟೊ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿತ್ತು. ಗ್ರಂಥಾಲಯ, ಪ್ರಯೋಗಾಲಯ ಮೊದಲಾದವುಗಳ ಪದಪರಿಚಯವಷ್ಟೇ ನಮ್ಮ ಪಾಲಿಗಿದ್ದುದ್ದು!ವೆಂಕಟಪ್ಪನವರು ಎಂಟನೇ ತರಗತಿಗೆ ಜೀವಶಾಸ್ತ್ರ ವಿಷಯ ಪಾಠ ಮಾಡುತ್ತಿದ್ದರು. - ಮಧುಕರ ವೃತ್ತಿ-
ಇತ್ತೀಚೆಗಂತೂ ವಾರಾಂತ್ಯದಲ್ಲಿ ಬೇಬೀ ಶವರ್ರು, ಸತ್ಯನಾರಾಯಣ ಪೂಜೆ, ಗೃಹಪ್ರವೇಶ, ಮಕ್ಕಳ ಹುಟ್ಟುಹಬ್ಬ ಅಂತ ಒಂದಲ್ಲಾ ಒಂದು ಪಾರ್ಟಿ ಇದ್ದೇ ಇರುತ್ತೆ. ಇಂತಹ ಹಲವು ಪಾರ್ಟಿಗಳಿಗೆ ಹೋಗಿ ಬಂದ ಮೇಲೆ ನನಗೆ ನಾನೇ ಒಂದು ಹೋಮ್ ವರ್ಕ್ ಮಾಡಿಕೊಂಡಿದ್ದೇನೆ.
- ನೆನಪುಗಳು-
-ಅರುಣ್ ಕುಮಾರ್ ಹೆಚ್ ಎಸ್.
೧
ಬಿ೦ಕದ ಹೆಜ್ಜೆಯ ಹೆಣ್ಣು
ಕೆರೆಯಿ೦ದ ನೀರು ತರುತಿರಲು
ಕೇಳಿದೆನು ನೀರು ಬೇಕೆ೦ದು.
ಸ್ವಲ್ಪವೇಕೆ, ಕೊಡದ ನೀರೆಲ್ಲ ನಿನಗೆ
ಹೇಳುತ್ತಾ ನಕ್ಕಳಾ ಜಾಣೆ. - ಎನ್ನ ಮನ್ನಿಸು ತಾಯೇ-
-ಶ್ರೀನಾಥ್ ಭಲ್ಲೆ
ಮನುಷ್ಯ ಕ್ರೂರ ಪ್ರಾಣಿ. ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರೂ ವಂಚಿಸುತ್ತಾನೆ. ತನ್ನ ಮಾತು, ಕ್ರಿಯೆಗಳಿಂದಲೇ ಇನ್ನೊಬ್ಬರನ್ನು ಕೊಲ್ಲುತ್ತಾನೆ. ಕೆಲವೊಮ್ಮೆ ಕೊನೆಗೊಂದು ದಿನ ಕೆಟ್ಟ ಮನಸ್ಸಿಗೆ ಬುದ್ದಿ ಬರಬಹುದು. ಈ ಕವಿತೆಯೊಲ್ಲಬ್ಬ ಕೊನೆಗಾಲದಲ್ಲಿ ತನ್ನ ತಪ್ಪುಗಳನ್ನು ತಾಯಿಯಲ್ಲಿ ನಿವೇದಿಸಿಕೊಂಡು ಕಣ್ಣೀರಿಡುತ್ತಾನೆ. ಆದರೆ ಸಾಂತ್ವನ ನೀಡಲು ಆಕೆ ಇರುವುದಿಲ್ಲ. ತಪ್ಪನ್ನು ನಿವೇದಿಸಿಕೊಂಡ ಸಮಾಧಾನವಷ್ಟೇ ಅವನಲ್ಲಿ ಉಳಿಯುತ್ತದೆ.
- ಕಂ-ಪತಿಗಳು-
ಕಂ-ಪತಿಗಳು (ಕಂಪ್ಯೂಟರ್ ಪತಿಗಳು)
-ಶ್ರೀನಾಥ್ ಭಲ್ಲೆ
ಪಾತ್ರಧಾರಿಗಳು:
ಮೂರು ಜನ ಹೆಂಗಸರು - ಶಾಂತ, ಮಾಲ, ಇಳ
ಮೂರು ಜನ ಗಂಡಸರು - ಪ್ರಶಾಂತ, ಬಾಲ, ನಳ
ಡಾಕ್ಟರ್ ಹಾಗೂ ಪೇಶಂಟ್/ಕಾಂಪೌಂಡರ್/ಟೆಲಿಫೋನ್ ರಿಪೇರ್ ಮಾಡುವವವ
ಶಾಂತ: (ಕಿಟಕಿ ಧೂಳು ಹೊಡೇಯುತ್ತ) ಇವರಿಬ್ರೂ ಬರೋದು ಇನ್ನೂ ಎಷ್ಟೊತ್ತು



