- ತಲಕಾಡು - ಪ್ರವಾಸ ಲೇಖನ - 2 -
ಪ್ರವಾಸ ಲೇಖನ-೨
-ನಳಿನಿ ಸೋಮಯಾಜಿ
ತಲಕಾಡು ಶಿವಸಮುದ್ರದ ಭರಚುಕ್ಕಿ ಪ್ರದೇಶದಿಂದ 24 ಕಿಲೋಮೀಟರ್ ದೂರದಲ್ಲಿದೆ. ನಾವು ಈ ರಸ್ತೆಯಲ್ಲಿ ಮುಂದುವರೆದು ತಲಕಾಡು ಸೇರುವ ಉದ್ದೇಶದಿಂದ ನಮ್ಮ ಪ್ರಯಾಣ ಮುಂದುವರೆಸಿದೆವು. ರಸ್ತೆಯಂತೂ ಒಂದಿಷ್ಟೂ ಸರಿಯಿಲ್ಲದೆ ನಮಗೆ ಆ 24 ಕಿಲೋಮೀಟರ್ ದೂರ ಸಾಗಿ ತಲಕಾಡು ಸೇರಲು 2 ಗಂಟೆ ಬೇಕಾಯಿತು. - ಟಾಟಾ ಪ್ರಸ್ತುತಪಡಿಸುತ್ತಿದೆ : ಏರ್ ಕಾರ್- ಅಂತ್ಯಗೊಂಡೀತೇ ತೈಲದ ಮೇಲಿನ ನಿರ್ಭರ?-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
- ಗಗನಚುಕ್ಕಿ ಮತ್ತು ಭರಚುಕ್ಕಿ-
-ನಳಿನಿ ಸೋಮಯಾಜಿಪ್ರವಾಸ ಲೇಖನ-೧ಕಾವೇರಿ ನದಿ ತಲಕಾವೇರಿಯಲ್ಲಿ ಹುಟ್ಟಿ ವೈಯಾರಾವಾಗಿ ಬಳಕುತ್ತಾ ಹರಿದು ಕರ್ನಾಟಕದ ಕೆಲೆವೆಡೆ ಸುಂದರ ತಾಣಗಳನ್ನು ಸೃಷ್ಟಿಸಿ ಕರ್ನಾಟಕದ ಚೆಲುವನ್ನು ಹೆಚ್ಚಿಸಿದ್ದಾಳೆ ಎಂದರೆ ಅತಿಶಯೋಕ್ತಿಯಾಗಲಾರದು. ಕೆಲೆವೆಡೆ ವಯ್ಯಾರ ತೋರಿದರೆ, ಕೆಲೆವೆಡೆ ರಭಸ, ಕೆಲೆವೆಡೆ ಶಾಂತ. ಹೀಗೆ ಹರಿಯುವ ಕಾವೇರಿಯ ಭರ ನೋಡುವುದೇ ಒಂದು ಆನಂದ.- ಗಣೇಶನ ಉದ್ದಿಮೆ-
- ಗೋಪೀನಾಥ ರಾವ್
ಕಳೆದ ವಾರ ನಾನು ಬೆಂಗಳೂರಲ್ಲಿದ್ದೆ. ಗಣೇಶನ ಹಬ್ಬ ಕಳೆದು ದುಬೈಗೆ ವಾಪಸ್ ಬರಬೇಕೆಂಬ ಅಪೇಕ್ಷೆಯಿದ್ದರೂ ಹಾಗಾಗುವುದು ಸಾಧ್ಯವಿರಲಿಲ್ಲ. ಗಣೇಶನ ಹಬ್ಬಕ್ಕೆ ಎರಡು ದಿನ ಮೊದಲೇ ಹಿಂತಿರುಗಬೇಕಾಯಿತು.
- ಸಹೃದಯ ಗೋಷ್ಠಿಯಲ್ಲಿ "ಪು.ತಿ.ನ. ಅವರ ಕಾವ್ಯಗಳ ರಸಯಾತ್ರೆ"!!!-
-ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫ಼ೋರ್ನಿಯ.
ಸಹೃದಯ ಗೋಷ್ಠಿ ಹಮ್ಮಿಕೊಂಡಿದ್ದು, ಸಹೃದಯತೆಗೆ ಹೆಸರಾದ ನಮ್ಮ ಬೇ ಏರಿಯಾದ ಅಪರೂಪ ಮತ್ತು ಅನುರೂಪ ದಂಪತಿಗಳಾದ, ಅಲಮೇಲು ಮತ್ತು ತಿರುನಾರಾಯಣ ಐಯ್ಂಗಾರ್ ಅವರು. ಸಾಹಿತ್ಯಾಸಕ್ತರೂ, ಸ್ವತಃ ಕವಿಗಳೂ ಆದ ಈ ದಂಪತಿಗಳು ಸರಟೋಗಾದಲ್ಲಿರುವ ಅವರ ಸುಂದರವಾದ ಸ್ವಗೃಹದಲ್ಲಿ ಈ ಗೋಷ್ಠಿಯನ್ನು ಜುಲೈ ೨೬ ರ ಶನಿವಾರ ಸಂಜೆ ಏರ್ಪಡಿಸಿದ್ದರು. ಈ ಗೋಷ್ಠಿಯ ಇನ್ನೊಂದು ವಿಶೇಷತೆ ಏನೆಂದರೆ, ಪು ತಿ ನ ಅವರೇ ಈ ವೇದಿಕೆ ಮೇಲೆ ಮೊದಲನೆಯ ಗೋಷ್ಠಿಯಲ್ಲಿ ಮಾತನಾಡಿ ನಂತರ ಹಲವಾರು ಸುಪ್ರಸಿದ್ಧ ಕನ್ನಡ ಸಾಹಿತಿಗಳು, ಡಾ. ಜಿ.ಎಸ್. ಶಿವರುದ್ರಪ್ಪ, ಹೆಚ್. ಎಸ್. ವೆಂಕಟೇಶ ಮೂರ್ತಿ ಮುಂತಾದವರು ಮಾತನಾಡಿ ಅಣಿಮಾಡಿದ ವೇದಿಕೆ ಇದು.
- ನನ್ನ ಪ್ರೀತಿಯ ಹೆಡ್ಮಾಸ್ಟರ್ - ಭಾಗ ೩- -ಡಾ. ಬಿ.ಆರ್. ಸತ್ಯನಾರಾಯಣ
ಕಳೆದ ವಾರದಿಂದ ಮುಂದುವರೆದ ಭಾಗ...
ನಾನು ವಾಪಸ್ಸಾಗುವಷ್ಟರಲ್ಲಿ ಅದೇ ಮಾರ್ಗವಾಗಿ ವೆಂಕಟಪ್ಪವರು ನಡೆದುಕೊಂಡು ಬರುತ್ತಿದ್ದರು. ಹದಿನೈದು ನಿಮಿಷ ಬಿಟ್ಟುಕೊಂಡು ಬಾ ಎಂದು ಹೇಳಿ ಮುಂದೆ ಹೋಗುತ್ತಿದ್ದರು. ನಾನು ಮತ್ತೆ ಸ್ಕೂಲಿಗೆ ಬರುತ್ತಿದ್ದೆ. ಹದಿನೈದು ನಿಮಿಷ ಕಳೆದು ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ತಮ್ಮ ಕೆಲಸ ಮುಗಿಸಿ ವಾಪಸ್ಸು ಬರುತ್ತಿದ್ದರು. ಆಗಲೇ ನನಗೆ ಅವರು ಥ್ಯಾಂಕ್ಸ್ ಎಂದು ಹೇಳುತ್ತಿದ್ದುದ್ದು. ನಾನು ಹೋಗಿ ಖಾಲಿ ಬಿಂದಿಗೆ ತಂದು ಅದರ ಜಾಗದಲ್ಲಿ ಇಡಬೇಕಾಗಿತ್ತು.- ಸಮಾಜ ಸೇವೆ ಅತ್ಯಗತ್ಯ ಏಕೆ?-
ಪ್ರಪಂಚ ಈಗಾಗಲೆ ಆರ್ಥಿಕ ರೀತಿಯ ವಿಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆದಿದೆ ಹಾಗೂ ಮುಂದುವರೆಯುತ್ತಲೇ ಇದೆ. ಕಾರಣ ಮಾನವ ಪ್ರಕೃತಿದತ್ತವಾಗಿ ದೊರೆಯುವ ಎಲ್ಲಾ ವಸ್ತುಗಳನ್ನು ಉಪಯೋಗಿಸಿ ತಾನು ಸುಖ ಸಂತೋಷಗಳನ್ನು ಅನುಭವಿಸಿ ನೆಮ್ಮದಿಯಿಂದ ಇರಬೇಕೆಂದು ತನ್ನ ಎಲ್ಲಾ ಚೇತನಗಳನ್ನು ಅಳವಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಹೆಚ್ಚು ಹೆಚ್ಚು ದುಡಿಯುತ್ತ ಅದರಲ್ಲಿ ಅಭಿವೃದ್ಧಿ ಹೊಂದುತ್ತಾ, ಇಂದಿಗೂ ಕೂಡ ತನ್ನ ಪೀಳಿಗೆಯನ್ನು ಸಹ ಇದೇ ದುಡಿಮೆಯಲ್ಲಿ ತೊಡಗಿಸಿ ಮಾನವ ಶ್ರಮಿಸುತ್ತಿದ್ದಾನೆ.
- ನನ್ನ ಪ್ರೀತಿಯ ಹೆಡ್ಮಾಸ್ಟರ್ - ಭಾಗ ೨-
ಕಳೆದ ವಾರದಿಂದ ಮುಂದುವರೆದ ಭಾಗ...
ಮಂಡಲ ಪಂಚಾಯಿತಿಗೆ ಸೇರಿದ್ದ ಒಂದು ಕೊಠಡಿಯಲ್ಲಿ ಜೂನಿಯರ್ ಕಾಲೇಜಿನ ಹದಿನೇಳೊ ಹದಿನೆಂಟೊ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿತ್ತು. ಗ್ರಂಥಾಲಯ, ಪ್ರಯೋಗಾಲಯ ಮೊದಲಾದವುಗಳ ಪದಪರಿಚಯವಷ್ಟೇ ನಮ್ಮ ಪಾಲಿಗಿದ್ದುದ್ದು!ವೆಂಕಟಪ್ಪನವರು ಎಂಟನೇ ತರಗತಿಗೆ ಜೀವಶಾಸ್ತ್ರ ವಿಷಯ ಪಾಠ ಮಾಡುತ್ತಿದ್ದರು.- ಮಧುಕರ ವೃತ್ತಿ-
ಇತ್ತೀಚೆಗಂತೂ ವಾರಾಂತ್ಯದಲ್ಲಿ ಬೇಬೀ ಶವರ್ರು, ಸತ್ಯನಾರಾಯಣ ಪೂಜೆ, ಗೃಹಪ್ರವೇಶ, ಮಕ್ಕಳ ಹುಟ್ಟುಹಬ್ಬ ಅಂತ ಒಂದಲ್ಲಾ ಒಂದು ಪಾರ್ಟಿ ಇದ್ದೇ ಇರುತ್ತೆ. ಇಂತಹ ಹಲವು ಪಾರ್ಟಿಗಳಿಗೆ ಹೋಗಿ ಬಂದ ಮೇಲೆ ನನಗೆ ನಾನೇ ಒಂದು ಹೋಮ್ ವರ್ಕ್ ಮಾಡಿಕೊಂಡಿದ್ದೇನೆ.
- ಇದು ನಮ್ಮ ಹಣೆ ಬರಹವೇ?-
- ಆತ್ರಾಡಿ ಸುರೇಶ್ ಹೆಗ್ಡೆ, ಬೆಂಗಳೂರು.
ಭಾರತ ಮಾತೆ ಆಂಗ್ಲರ ವಸಾಹತುಶಾಹಿ ಆಡಳಿತದ ಭದ್ರ ಮುಷ್ಟಿಯಿಂದ ಬಂಧಮುಕ್ತಗೊಂಡು ಇಂದಿಗೆ ಅರುವತ್ತೊಂದು ಸಂವತ್ಸರಗಳು ಸಂದಿವೆ. ಅಂದರೆ ಬರೋಬರಿ ೨೨೨೮೧ ದಿನಗಳು. ಸ್ವಾತಂತ್ರ್ಯಾನಂತರದ ಈ ದೀರ್ಘ ಪಯಣದ ಹಾದಿಯ ಸಿಂಹಾವಲೋಕನ ಮಾಡಿದಾಗ ಕಂಡುಬರುವುದೇನು? ಅದರಿಂದ ನಮಗೆ ಸಿಗುವ ಸಂತಸವೆಷ್ಟು? ಅಲ್ಲಿ ನಾವು ನೀವುಗಳೆಲ್ಲಾ ವಿಷಾದಪಡಬೇಕಾದ ಸಂಗತಿಗಳೆಷ್ಟು?- ನನ್ನ ಪ್ರೀತಿಯ ಹೆಡ್ಮಾಸ್ಟರ್-
- ಡಾ. ಬಿ.ಆರ್. ಸತ್ಯನಾರಾಯಣ
ನಾನು ಎಂಟನೇ ತರಗತಿಗೆ ಅಡ್ಮಿಷನ್ ಆಗುವ ಮೊದಲ ದಿನವೇ ಒಂದು ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ನಾನು ಐದನೇ ತರಗತಿಗೆ ಕುಂದೂರಿನ ಮಿಡ್ಲಿಸ್ಕೂಲಿಗೆ ಸೇರಿಕೊಳ್ಳುವಾಗಲೇ ನಮ್ಮ ಮನೆಯಿಂದ ಯಾರೂ ಬಂದಿರಲಿಲ್ಲ. ನಾನೇ ಹೋಗಿ ಮೇಸ್ಟರನ್ನು ಕೇಳಿಕೊಂಡು ಅಡ್ಮಿಟ್ ಆಗಿದ್ದೆ.
- ಭಾರತದಲ್ಲಿ ಟ್ರಾಫಿಕ್ ಉಲ್ಲಂಘನೆಗೆ ನೀಡಲಾಗುವ ದಂಡಗಳ ವಿವರ -
-ಗೋಪೀನಾಥ ರಾವ್
೧೯೮೯ರಲ್ಲಿ ಅನ್ವಯವಾದ ಟ್ರಾಫಿಕ್ ಕಾನೂನುಗಳು ಇನ್ನೂ ಜಾರಿಯಲ್ಲಿವೆ. ದ್ವಿ,ತ್ರಿ ಹಾಗೂ ಚತುರ್ಚಕ್ರ ವಾಹನಗಳ ಚಾಲಕರಿಗೆ ಸುರಕ್ಷತಾ ವಿಧಾನ ಹಾಗೂ ಸಮಾಜದಲ್ಲಿ ಸುವಿಧಾನದ ಸಾರಿಗೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಿ ಇಪ್ಪತ್ತು ವರ್ಷಗಳಾದ ಬಳಿಕ ಇಂದೂ ಪ್ರಸ್ತುತಿಯಲ್ಲಿವೆ.
- ಬೆಲೂನುಗಳ ಮೂಲಕ ಮುನ್ನೂರು ಮೈಲಿ ಹಾರಾಟ ನಡೆಸಲೆತ್ನಿಸಿರುವ ತಿಳಿಗೇಡಿ-
--ಅರ್ಶದ್ ಹುಸೇನ್ ಎಂ.ಹೆಚ್.
ಮಿಸ್ಟರ್ ಬೀನ್ ಶೃಂಖಲೆ ನೋಡಿದ್ದಿರಲ್ಲ, ಮಗುವೊಂದು ಅಯಾಚಿತವಾಗಿ ಮಿಸ್ಟರ್ ಬೀನ್ ತೆಕ್ಕೆಗೆ ಬಿದ್ದು ಮಗುವಿನಿಂದ ಕಳಚಿಕೊಳ್ಳಲಾಗದೇ ಮನರಂಜನಾ ಕೇಂದ್ರದಲ್ಲಿ ಅನುಭವಿಸುವ ರಗಳೆಯೇ ಇಲ್ಲಿ ಹಾಸ್ಯಕ್ಕೆ ವಸ್ತು. ಕಡೆಯಲ್ಲಿ ಬೆಲೂನುಗಳನ್ನು ಮಗುವಿನ ಗಾಲಿಕುರ್ಚಿಗೆ ಕಟ್ಟಿದಾಗ ಅದು ಎತ್ತರಕ್ಕೆ ಹಾರಿ ಬಳಿಕ ಮಿಸ್ಟರ್ ಬೀನ್ ಪೆನ್ಸಿಲ್ ಒಂದನ್ನು ಬಾಣದಂತೆ ಪ್ರಯೋಗಿಸಿ ಬೆಲೂನು ಒಡೆದು ಮಗುವನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿ ಮೆರೆದಿದ್ದು ಚಿತ್ರಕ್ಕೆ ಭರ್ಜರಿ ಯಶಸ್ಸು ತಂದು ನೀಡಿತ್ತು.
- ಚಂದ್ರಶೇಖರ ಕಂಬಾರರೊಂದಿಗೊಂದು ದಿನ-
--ಅರ್ಶದ್ ಹುಸೇನ್ ಎಂ.ಹೆಚ್.
ಕಳೆದ ವಾರ ಹಯವದನ ನಾಟಕ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಚಂದ್ರಶೇಖರ ಕಂಬಾರರೊಂದಿಗೆ ನಡೆಸಿದ ಸಂವಾದದ ಕೆಲವು ತುಣುಕುಗಳು :
ತುಂಬಿದ ಕೊಡ ತುಳುಕುವುದಿಲ್ಲವಂತೆ. ಚಿಕ್ಕಪುಟ್ಟ ಸಾಧನೆ ಮಾಡಿದವರು ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿದ್ದವರು ಕಂಬಾರರೊಂದಿಗೆ ಕೊಂಚಕಾಲ ಕಳೆದಾಕ್ಷಣ ಈ ಗಾದೆ ವೇದ್ಯವಾಗುವುದು ಖಚಿತ.
- ದಾವಣಗೆರೆಯ ವಿಶಿಷ್ಟ ಕಲಾವಿದ ಆರ್.ಟಿ. ಅರುಣ್ ಕುಮಾರ್ ಅವರ ಸಂದರ್ಶನ-
ಕಳೆದ ವಾರ ದುಬೈಯಲ್ಲಿ ಕಾರ್ಯಕ್ರಮ ನೀಡಲು ಪ್ರಥಮ ಬಾರಿಗೆ ಆಗಮಿಸಿದ್ದ ಅರುಣ್ ಕುಮಾರ್ ಅವರೊಂದಿಗೆ ಕನ್ನಡ ಧ್ವನಿ ನಡೆಸಿದ ಸಂದರ್ಶನದ ಆಯ್ದ ಭಾಗಗಳು:
- ಮತ್ತೊಬ್ಬ ರಾಜ, ಇನ್ನೊಂದು ಅರಮನೆ, ತೀರದು ಗೋಳಿನ ಕೊನೆ-
ಮತ್ತೊಬ್ಬ ರಾಜ, ಇನ್ನೊಂದು ಅರಮನೆ, ತೀರದು ಗೋಳಿನ ಕೊನೆ...
- ಗುರು ಬಬ್ಬಿಗದ್ದೆ
ಕನ್ನಡ ನಾಡಿನಲ್ಲಿ ಅಕಾಲಿಕ ಮಳೆಯಂತೆ ಇನ್ನೊಂದು ಅಕಾಲಿಕ ಪ್ರಸವವಾಗುತ್ತಿದೆ ಅರ್ಥಾಥ್ ಮತ್ತೊಮ್ಮೆ ಚುನಾವಣೆ- ಆಗಸದ ಅಂಚಿನಲ್ಲಿ ಕನ್ನಡ ಪದಗಳ ಲಹರಿ ಹರಿಸಲೇಬೇಕು-
-ಸುನಿಲ್ ಮಲ್ಲೇನಹಳ್ಳಿ
ಸ್ನೇಹಿತರೇ, ಇನ್ನು ಬೆರೆಳೆಣಿಕೆಯ ದಿನಗಳಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ಈ ವಿಮಾನ ನಿಲ್ದಾಣದಿಂದ ನಾನಾ ದೇಶಗಳ ನಾನಾ ನಗರಗಳಿಗೆ ದಿನನಿತ್ಯ ಒಂದರ ಹಿಂದೆ ಒಂದರಂತೆ ವಿಮಾನಗಳು ಹಾರಾಡುತ್ತಲೇ ಇರುತ್ತವೆ. ಇದು ಕನ್ನಡಿಗರಿಗಂತೂ ಸಂತಸ ತರುವ ವಿಷಯವೇನೋ ಸರಿ.
- ತರ೦ಗ ’ವಾರ ಪತ್ರಿಕೆಗೆ 25 ರ ಸ೦ಭ್ರಮ......ವಸ೦ತ ವಿಶೇಷ ಸ೦ಚಿಕೆ-2008 ಬಿಡುಗಡೆ-
ಮಣಿಪಾಲದ ಮಣಿಪಾಲ ಮೀಡಿಯಾ ನೆಟ್ ವರ್ಕ ಲಿಮಿಟೆಡ್ ಸ೦ಸ್ಥೆ ಇದರ ಆಶ್ರಯದಲ್ಲಿ ಕಳೆದ ಸುಮಾರು 25 ವರುಷಗಳಿ೦ದ ಮುದ್ರಣಗೊ೦ಡು ಕರಾವಳಿಯಲ್ಲಿ ಮನೆ ಮಹಿಳೆಯರ ಪ್ರೀತಿಯ ಹಾಗೂ ಎಲ್ಲರ ಮನೆ ಮಾತಾಗಿರುವ ಪ್ರಸಿದ್ದ ‘ತರ೦ಗ’ವಾರ ಪತ್ರಿಕೆಗೆ ಎಪ್ರಿಲ್ 26ರ೦ದು 25 ವಸ೦ತಗಳನ್ನು ಪೂರೈಸಿದ ‘ರಜತ ಸ೦ಭ್ರಮ’.
- ಗೋವುಗಳಿಗೆ ಇ-ಬೇಲಿ-
ಗೋವುಗಳಿಗೆ ಇ-ಬೇಲಿ
-ಅರ್ಶದ್ ಹುಸೇನ್ ಎಂ.ಹೆಚ್.
ಬೆಳೆಗಾರರಿಗೆ, ರೈತರಿಗೆ ಬೆಳೆ ಬೆಳೆಯುವುದಕ್ಕಿಂತ ಬೆಳೆದ ಬೆಳೆಯ ರಕ್ಷಣೆಯ ಹೊರೆಯೇ ಹೆಚ್ಚು. ಗದ್ದೆ-ತೋಟಗಳಿಗೆ ಧಾಳಿಯಿಡುವ ಪ್ರಾಣಿಗಳನ್ನು ತಡೆಯಲು ರೈತರು ತೆಗೆದುಕೊಳ್ಳುವ ಕ್ರಮ ಒಂದೆರೆಡಲ್ಲ. ಮುಳ್ಳು ಬೇಲಿ, ತಂತಿ ಬೇಲಿ, ಕಲ್ಲಿನ ಬೇಲಿ, ಪಾಪಾಸುಕಳ್ಳಿಯ ಬೇಲಿ ಇನ್ನೂ ಹತ್ತು-ಹಲವಾರು ತರಹದ ರಕ್ಷಣಾ ಕೋಟೆಗಳನ್ನು ಕಟ್ಟಿದರೂ ಕೆಲವೊಮ್ಮೆ ಜಾನುವಾರುಗಳು ಎಲ್ಲೋ ಒಂದೆಡೆ ನುಸುಳಲು ಮಾರ್ಗ ಹುಡುಕಿ ನುಗ್ಗಿಯೇ ನುಗ್ಗುತ್ತವೆ. ತೋಟಗಳಿಗೆ ಧಾಳಿಯಿಡುವ
ಮಂಗಗಳಿಗಂತೂ ಎಷ್ಟೆತ್ತರ ಬೇಲಿಯಿದ್ದರೂ ನಿರರ್ಥಕ.- ತೇಜಸ್ವಿಯವರ ವೈಚಾರಿಕತೆ (ಕೊನೆಯ ಭಾಗ)-
- ಬಿ ಆರ್ ಸತ್ಯನಾರಾಯಣತೇಜಸ್ವಿ ಮಾರ್ಗಪ್ರವರ್ತಕನಲ್ಲ; ಅಭಿವ್ಯಕ್ತಿ ಮಾರ್ಗಗಳ ಅನ್ವೇಷಕ:
ಇಂದು ನಾವು ಸಾಹಿತ್ಯ ಚರಿತ್ರೆಯಲ್ಲಿ, ಸಾಹಿತಿಯ ಸ್ಥಾನ ನಿರ್ದೇಶನ ಮಾಡುವಾಗಲೆಲ್ಲಾ ಪ್ರವರ್ತಕ, ಆಚಾರ್ಯಪುರುಷ ಎನ್ನುವ ಮಾತನ್ನು ಬಳಸುತ್ತೇವೆ. ಷಟ್ಪದಿಯ ಬ್ರಹ್ಮ, ನವೋದಯ ಸಾಹಿತ್ಯದ ಆಚಾರ್ಯಪುರುಷ, ನವ್ಯಕಾವ್ಯದ ಪ್ರವರ್ತಕ ಇತ್ಯಾದಿ ಇತ್ಯಾದಿ.- ಟೀಂ ಮ್ಯಾಂಗಲೋರಿಯನ್ . ಕಾಮ್ ಮಕ್ಕಳಿಗೆಂದೇ ಆಯೋಜಿಸಿರುವ ವಿಶೇಷ ಸ್ಪರ್ಧೆ -
ಖ್ಯಾತ ವಾರ್ತಾತಾಣವಾದ ಮ್ಯಾಂಗಲೋರಿಯನ್ ಡಾಟ್ ಕಾಮ್ ತನ್ನ ಮಕ್ಕಳ ಅಂಕಣದಲ್ಲಿ ಭಾಗವಹಿಸುವ ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡಲು ವಿಶೇಷ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ.
- ಗೋರಿಯ ಮೇಲೆ ಸೌಧ !-
- ಶ್ರೀನಾಥ್ ಭಲ್ಲೆ
ಇತ್ತೀಚೆಗೆ ನನ್ನ ಮಗರಾಯ ’ಕೃಷ್ಣ’ ನ ಬಾಲ್ಯದ ಕಥೆಗಳುಳ್ಳ ಸಿ.ಡಿ. ನೋಡುತ್ತಿದ್ದ. ಕಂಸನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಾರಾಜ ಉಗ್ರಸೇನನು ಅವನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲು ತನ್ನ ಸೈನಿಕರಿಗೆ ಆಜ್ಞಾಪಿಸುತ್ತಾನೆ. ಆದರೆ ಒಬ್ಬ ಸೈನಿಕನೂ ನಿಂತಲ್ಲಿಂದ ಕದಲುವುದಿಲ್ಲ. ಕಂಸನು ತನ್ನ ಪರಾಕ್ರಮದಿಂದ ಎಲ್ಲರನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದನೆಂದು ಅಗ ಮಹಾರಾಜನಿಗೆ ಅರಿವಾಗುತ್ತದೆ.
- ತೇಜಸ್ವಿಯವರ ವೈಚಾರಿಕತೆ (ಭಾಗ ೭)-
- ಬಿ ಆರ್ ಸತ್ಯನಾರಾಯಣ
ಜ್ಞಾನದ ಅಹಂಕಾರ ಮತ್ತು ಜ್ಞಾನಮೂಲದ ನಿರಾಕರಣೆ
ಕನ್ನಡ ಪುಸ್ತಕೋದ್ಯಮದ ಬಗ್ಗೆ ತೇಜಸ್ವಿಯವರಿಗೆ ಸ್ಪಷ್ಟನಿಲುವುಗಳಿದ್ದುದ್ದು ಎಲ್ಲರಿಗೂ ತಿಳಿದ ವಿಷಯ. ಕನ್ನಡಿಗರು ಅಭಿಮಾನಶೂನ್ಯರು. ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿಯಿಲ್ಲದವರು. ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಸಾಮಾನ್ಯವಾಗಿ ಇಂತಹ ಆರೋಪ ಮಾಡುವವರು ಸಾಹಿತಿಗಳೆ ಆಗಿರುತ್ತಾರೆ.- ಚಾಂದ್ರಮಾನ - ಸೌರಮಾನ ಯುಗಾದಿ ಆಚರಣೆ -
-ನಳಿನಿ ಸೋಮಯಾಜಿ
ಯುಗ ಯುಗಾದಿ ಕಳೆದರೂ,
ಯುಗಾದಿ ಮರಳಿ ಬರುತಿದೆ,
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ......- ಮಲೆನಾಡು-ಎತ್ತ ಸಾಗುತ್ತಿದೆ?-
- ಅರ್ಶದ್ ಹುಸೇನ್ ಎಂ. ಹೆಚ್.
ಮೇಲಿನ ಚಿತ್ರ ಇತ್ತೀಚೆಗೆ ತೆಗೆದದ್ದು. ನೋಡಲು ಅತ್ಯಂತ ಸುಂದರವಾಗಿ ಕಂಡಿತಲ್ಲಾ. ನಮಗೂ ಹೀಗೇ ಕಂಡಿತ್ತು. ತೀರ್ಥಹಳ್ಳಿ - ಕೊಪ್ಪ ರಸ್ತೆಯ ನಡುವೆ ಕಂಡುಬಂದ ಒಂದು ದೃಶ್ಯವಿದು. ಇಡಿಯ ಮಲೆನಾಡಿನಲ್ಲೇ ಕಂಡುಬರುವ ಯಾವುದೇ ಗದ್ದೆಯ ಸಾಮಾನ್ಯ ನೋಟವಿದು. ಅರೆ, ಸುಂದರವಾಗಿಯೇ ಇದೆಯಲ್ಲಾ, ಮಲೆನಾಡಿಗೇನಾಗುತ್ತಿದೆ?
- ತೇಜಸ್ವಿಯವರ ವೈಚಾರಿಕತೆ ( ಭಾಗ ೬ )-
- ಬಿ ಆರ್ ಸತ್ಯನಾರಾಯಣ
ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು
ಚಿದಂಬರ ರಹಸ್ಯ ಕಾದಂಬರಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುವ ಸನ್ನಿವೇಶದ ಚಿತ್ರಣ ಬರುತ್ತದೆ. ನರಿ ಹೊಡೆಯಲು ಇಟ್ಟಿದ್ದ ಪಟಾಸು ಬಾಂಬು ಸಿಡಿದು ಪಾಟೀಲರು ಗಾಯಗೊಂಡ ಸಂದರ್ಭದಲ್ಲಿ ಜನ ಮಾತನಾಡುತ್ತಾರೆ. ಒಬ್ಬ ‘ಮಸೀದಿಗೆ ಹಿಂದೂಗಳು ನುಗ್ಗಬಹುದು ಅಂತ ಸಾಬರೇ ಬಾಂಬು ಇಟ್ಟಿದ್ದಾರೆ’ ಅನ್ನುತ್ತಾನೆ.
- ತೇಜಸ್ವಿಯವರ ವೈಚಾರಿಕತೆ ( ಭಾಗ ೫)-
-ಬಿ ಆರ್ ಸತ್ಯನಾರಾಯಣ
ಸಮೂಹ ಮಾಧ್ಯಮಗಳ ರಾಜಕೀಯ
ಇಲ್ಲಿಯೇ ಸಮೂಹ ಮಾಧ್ಯಮಗಳ ಬಗ್ಗೆ ತೇಜಸ್ವಿಯವರಿಗಿದ್ದ ನಿಲುವುಗಳೇನು ಎಂಬುದನ್ನು ಗಮನಿಸಬಹುದಾಗಿದೆ. ಮಾಧ್ಯಮಗಳೂ ಇಂದು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಅದಕ್ಕೆ ನಮ್ಮ ವ್ಯವಸ್ಥೆ ಎಷ್ಟು ಕಾರಣವೋ ಸ್ವತಃ ಮಾಧ್ಯಮಗಳೂ ಅಷ್ಟೇ ಕಾರಣ. ತಮಗೆ ಬೇಕಾದವರ, ತಮಗೆ ಬೇಕಾದ ಸರ್ಕಾರಗಳಿಗೆ ಅನುಕೂಲವಾಗುವಂತಹ ಸುದ್ದಿಗಳನ್ನು ಹೆಚ್ಚು ಜನರಿಗೆ ತಲುಪುವಂತೆ ಮುಖಪುಟಗಳಲ್ಲಿ ಮುದ್ರಿಸುವುದು.
- ತೇಜಸ್ವಿಯವರ ವೈಚಾರಿಕತೆ (ಭಾಗ ೪)-
- ಸತ್ಯನಾರಾಯಣ ಬಿ.ಆರ್.
ಪ್ರವೃತ್ತಿಪ್ರಿಯ ಶಿಕ್ಷಕ ಸಮುದಾಯ
ಒಬ್ಬ ಮಾರ್ಗಾನ್ವೇಷಕನ ಕ್ಷೇತ್ರ ಬಹುಮುಖವಾಗಿರುತ್ತದೆ. ಅದಕ್ಕೆ ತೇಜಸ್ವಿಯವರು ಉತ್ತಮ ಉದಾಹರಣೆ. ಮೊದಲಿನಿಂದಲೂ ನಮ್ಮ ಶಿಕ್ಷಣ ಕ್ಷೇತ್ರ, ಮಾಧ್ಯಮ, ವಿದ್ಯಾಭ್ಯಾಸ ಪದ್ಧತಿ, ಗಡಿದಾಟದ ಶಿಕ್ಷಕ ವರ್ಗ ಇದೆಲ್ಲದರ ಬಗ್ಗೆಯೂ ಯಾವ ಮುಲಾಜು ಇಲ್ಲದೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮೊದಲ ಕಥೆ 'ಲಿಂಗ ಬಂದ'ದಲ್ಲಿಯೇ ಒಂದು ವಾಕ್ಯ ಯಾವ ಪೂರ್ವಾಗ್ರಹ ಉದ್ದೇಶವೂ ಇಲ್ಲದೆ ಸಹಜವಾಗಿ ಬಂದಿದೆ.
- ತೇಜಸ್ವಿಯವರ ವೈಚಾರಿಕತೆ - (ಭಾಗ ೩)-
- ಬಿ. ಆರ್ ಸತ್ಯನಾರಾಯಣ
ಮೂಲಭೂತವಾದ
ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದ, ಅದರ ಪರಿಣಾಮವಾಗಿ ಭಾರತದ ಸಕ್ಯೂಲರ್ ಆಂದೋಳನ ಶಿಥಿಲವಾಗುತ್ತಿರುವುದು ಇವುಗಳ ಬಗ್ಗೆ ತೇಜಸ್ವಿ ಮಾತನಾಡಿದ್ದಾರೆ.
- ತೇಜಸ್ವಿಯವರ ವೈಚಾರಿಕತೆ ( ಭಾಗ ೨)-
ವ್ಯಕ್ತಿಪೂಜೆ - ವ್ಯಕ್ತಿತ್ವದ ಸಮಾಧಿ:
ಕುಬಿಯದೊಂದು ದುರಂತ ಕಥೆ‘ಕುಬಿ ಮತ್ತು ಇಯಾಲ’ ಕಥೆಯ ಕುಬಿ ಈ ಬಗೆಯ ದುರಂತಕ್ಕೆ ಒಂದು ಉತ್ತಮ ಉದಾಹರಣೆ. ಕುಬಿ ಡಾಕ್ಟರಾಗಿ ಬಂದ ಹೊಸತರಲ್ಲಿ ದ್ವೇಷಿಸುತ್ತಿದ್ದ ರಾಮರಾವ್, ತನ್ನನ್ನು ಗುಣಪಡಿಸಿದರು ಎಂಬ ಕಾರಣಕ್ಕೆ, ಅವರನ್ನು ದೈವತ್ವಕ್ಕೆ ಏರಿಸುತ್ತಾನೆ.
- ತೇಜಸ್ವಿಯವರ ವೈಚಾರಿಕತೆ-
- ಸತ್ಯನಾರಾಯಣ ಬಿ.ಆರ್.
ಅರಿವಿನ ಗುರು
ನನ್ನನ್ನು ಅತಿಯಾಗಿ ಕಾಡಿದ ಹಾಗೂ ನನ್ನ ಪ್ರೀತಿಯ ತೇಜಸ್ವಿಯವರ ಬಗ್ಗೆ ಬರೆಯಲು ಕುಳಿತಿದ್ದೇನೆ. ನಾನು ತೇಜಸ್ವಿಯವರ ಸಾಹಿತ್ಯ ಸಂಪರ್ಕಕ್ಕೆ ಬಂದು ಸುಮಾರು ಹದಿನೆಂಟು ವರ್ಷಗಳೇ ಕಳೆದಿವೆ.- ಕರ್ನಾಟಕ, ಕಲೆ, ನೆಲ - ಒಂದು ಅವಲೋಕನ-
- ನಸೀಮ್ ಎಂ.ಎಸ್. ಮಂಗಳೂರು
"ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಇದು ಕನ್ನಡಿಗರಿಗೆ ಕವಿಗಳು ಬೋಧಿಸಿಕೊಟ್ಟ ಕಿರುಮಂತ್ರ. "ಎಲ್ಲಾದರೂ ಇರು, ಎಲ್ಲಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬುದೊಂದು ಕವಿವಾಣಿ
- ವ್ಯಾಸರಾಯ ಬಲ್ಲಾಳರಿಗೆ ನಮ್ಮ ನಮನ-
- ಗೋಪೀನಾಥ ರಾವ್
ಕಳೆದ ರಜೆಯಲ್ಲಿ ಬೆಂಗಳೂರಿನಲ್ಲಿದ್ದಾಗ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆಯವರನ್ನು ಟೆಲಿಫೋನಿನಲ್ಲಿ ಮಾತಾಡಿಸಿದ್ದೆ. 'ನಾನಿಂದು ವ್ಯಾಸರಾಯ ಬಲ್ಲಾಳರಲ್ಲಿಗೆ ಹೋಗುವವನಿದ್ದೇನೆ. ಸಮಯಾವಕಾಶ ಇದ್ದರೆ ಬನ್ನಿ ಒಟ್ಟಿಗೆ ಹೋಗೋಣ' ಅಂದರು.
- ಓ ಮೆಣಸೇ .........ಓದಿ ನೋಡಿ-
- ನಸೀಮ್ ಎಂ.ಎಸ್.
"ವಾರ್ತಾಭಾರತಿ" - ಮಂಗಳೂರು ಮತ್ತು ಬೆಂಗಳೂರಿನಿಂದ ಏಕಕಾಲಕ್ಕೆ ಪ್ರಕಟವಾಗುತ್ತಿರುವ ಕನ್ನಡ ದೈನಿಕ. ಅದರ ಸಂಪಾದಕೀಯ ವಿಭಾಗ ಅತ್ಯಂತ ಜನಪ್ರಿಯವಾಗಿದ್ದರೆ 'ಬುಡಬುಡಿಕೆ' ಎಂಬ ಇನ್ನೊಂದು ವಿಭಾಗವೂ ಓದುಗರಿಗೆ ಅಷ್ಟೇ ಅಚ್ಚುಮೆಚ್ಚು.
- ದುಬೈಯಲ್ಲಿ ನೌಕರಿ ಬೇಕೇ?-
-ಇರ್ಶಾದ್ ಮೂಡಬಿದ್ರಿ, ದುಬೈ
ಭಾಗ ೨
ಆದರೆ ಈ ಪರಿಸ್ಥಿತಿ ಎಲ್ಲಿಯವರೆಗೆ?.......???????
ಬದಲಾಗುತ್ತಿರುವ ಈ ಕಾಲದಲ್ಲಿ ದುಬೈ ಮೊದಲಿನಂತೆ ಇದೆಯೇ?
- ದುಬೈ ನೌಕರಿ ಬೇಕೇ?-
- ಇರ್ಶಾದ್ ಮೂಡಬಿದ್ರಿ, ದುಬೈ
ಭಾಗ ೧
ಮಾರ್ಚ್ ೧೭ ೧೯೯೪, ನಾನು ಪ್ರಥಮ ಬಾರಿ ದುಬೈಗೆ ಕಾಲಿಟ್ಟೆ. ಇಲ್ಲಿನ ರೀತಿ ರಿವಾಜುಗಳಾಗಲೀ, ಕಾನೂನು ಕಟ್ಟಳೆಗಳಾಗಲೀ,- ಎದುರುತ್ತರ ಎಂದರೇನು?-
- ಆರ್ ಶ್ರೀ ನಾಗೇಶ್
ಎಷ್ಟೋ ವೇಳೆ ಎದುರುತ್ತರ ಎಂದರೆ ಏನು ಎಂದು ಅರ್ಥವಾಗದೇ ಪೋಷಕರಲ್ಲಿ, ಮಕ್ಕಳಲ್ಲಿ ವಿರಸ ಉಂಟಾಗುವುದು. ಅದಕ್ಕಾಗಿ ಈ ವಿಷಯದಲ್ಲಿ ಗೊಂದಲ ಇರಬಾರದು.
- ಕಾಸರಗೋಡು ಚಿನ್ನಾರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು:-
ಸಂದರ್ಶನಾಕಾರರು: ಅರ್ಶದ್ ಹುಸೇನ್ ಎಂ.ಹೆಚ್.
ಇಂದು ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿರುವ ಶಾರ್ಜಾ ಕನ್ನಡ ಸಂಘದ ಐದನೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಶ್ರೀ ಕಾಸರಗೋಡು ಚಿನ್ನಾ (ಶ್ರೀನಿವಾಸ ರಾವ್ ಎಸ್) ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು
- ಹದಿ ವಯಸ್ಕರ ಪೋಷಕತ್ವ - ೨-
- ಆರ್ ಶ್ರೀನಾಗೇಶ್
"ಎದುರುತ್ತರ ತುಂಬಾ ಕೊಡ್ತಾನೆ, ಅಥವಾ ಕೊಡ್ತಾಳೆ." - ಇದು ಅನೇಕ ಪೋಷಕರು ಹೇಳುವ ದೂರು. ಮಕ್ಕಳು ಎದುರುತ್ತರ ಯಾಕೆ ಕೊಡ್ತಾರೆ?
- ಹಜ್ ಮಹಾಮೇಳ - ಜೀವನದಲ್ಲಿ ಕನಿಷ್ಟ ಒಂದು ಬಾರಿ ನಿರ್ವಹಿಸಬೇಕಾದ ಮುಸ್ಲಿಂ ವಿಧಿ.-
- ಇರ್ಶಾದ್ ಮೂಡಬಿದ್ರಿ
ಕಾಬಾ, ಸೌದಿ ಅರೇಬಿಯಾದ ಮಕ್ಕ ನಗರದಲಿರುವ, ಅಲ್ಲಾಹನ ಭವನ. ಅದು ಜೆದ್ದಾ ನಗರದಿಂದ ೨೦ ಕಿ.ಮೀ. ದೂರದಲ್ಲಿದೆ. ಇಸ್ಲಾಮಿನ ತತ್ವ -ಸಿದ್ಧಾಂತದ ಪ್ರಕಾರ ಭೂಮಿಯಲ್ಲಿ ಅಲ್ಲಾಹನು ಮೊತ್ತ ಮೊದಲಾಗಿ ಸೃಷ್ಟಿಸಿದ್ದು ಕಾಬಾ ಭವನವನ್ನು. ಪ್ರವಾದಿ ಆದಂ (ಸ) ಅವರ ಆಗಮನದ ಮುನ್ನವೇ ದೇವಚರರು (ಮಲಕ್ ಗಳು) ಈ ಭವನವನ್ನು ನಿರ್ಮಿಸಿದ್ದರು.
- ಹದಿ ಹರೆಯದವರ ಪೋಷಕತ್ವ-
- ಆರ್ ಶ್ರೀನಾಗೇಶ್
ಹದಿ ಹರೆಯದ ಮಕ್ಕಳನ್ನು ಸಾಕುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದುವರೆಗೆ ಹೇಳಿದಂತೆ ಕೇಳುತ್ತಿದ್ದ ಮಕ್ಕಳು ಎದುರುತ್ತರ ಕೊಡಲು ಪ್ರಾರಂಭಿಸುತ್ತಾರೆ. ತಮ್ಮತನವನ್ನು ಪ್ರತಿಪಾದಿಸಲು ಹೊರಡುತ್ತಾರೆ. ಸಿಡುಕುತ್ತಾರೆ. ವ್ಯಸನಗಳನ್ನು ಕಲಿಯುತಾರೆ. ಅಳುತ್ತ ಕೂರುತ್ತಾರೆ. ನಿದ್ದೆ ಮಾಡುತ್ತಾರೆ. ಊಟ ಮಾಡುವುದಿಲ್ಲ.
- ಇರುಳು ಕಂಡ ಬಾವಿಗೆ - ಎರಡನೆಯ ಇನ್ನಿಂಗ್ಸ್ : ಡಿಪಾರ್ಚರ್-
- ಅರ್ಶದ್ ಹುಸೇನ್ ಎಂ. ಹೆಚ್
ಹಿಂದಿನ ಪ್ರಯಾಣದ ಅನುಭವ ಮತ್ತೊಮ್ಮೆ ಆಗದಿರಲಿ ಎಂದು ಹಿಂತಿರುಗುವ ಪ್ರಯಾಣಕ್ಕೆ ಎರೆಡು ದಿನ ಮೊದಲೇ ಫೋನು ಮಾಡಿ ಖಾತರಿ ಪಡಿಸಿಟ್ಟುಕೊಂಡಿದ್ದೆ. ಫೋನು ಸ್ವೀಕರಿಸಿದ ಅಧಿಕಾರಿ ಸಧ್ಯಕ್ಕೆ ಯಾವ ಬದಲಾವಣೆಯೂ ಇಲ್ಲವೆಂದೂ ಒಂದು ವೇಳೆ ಏನಾದರೂ ಇದ್ದಲ್ಲಿ ಕರೆ ಮಾಡಿ ತಿಳಿಸಲಾಗುವುದು ಎಂದೂ ವಿವರಿಸಿದ್ದರು. ಇವರ ಮಾತನ್ನು ನಂಬಿದ ನಾವು ಮತ್ತೊಮ್ಮೆ ಕೋಣರಾದೆವು.
- ಇಂತಹದ್ದೂ ಅನುಭವಗಳು-
- ತಳಕು ಶ್ರೀನಿವಾಸ, ಮುಂಬೈ
ಪರಿಚಯವಿಲ್ಲದವರು ಬಹಳ ಸಲುಗೆಯಿಂದ ವರ್ತಿಸಿದರೆ, ಸ್ವಲ್ಪ ಹೆದರಿಕೆ ಆಗುವುದು ಸಹಜ. ಆದರೆ, ನಮ್ಮದಲ್ಲದ ಊರಿನಲ್ಲಿ ನಮ್ಮ ನಾಡು ನುಡಿಯ ಬಲ್ಲವರು, ನಮಗೆ ಸುಲಭದಲ್ಲಿ ಅರ್ಥವಾಗುವಂತೆ ವರ್ತಿಸುವವರು ಎದುರಾದರೆ ಅದೇನೋ ಆಪ್ಯಾಯತನ ತನ್ನ ತಾನಾಗೇ ಮೂಡಿ ಬರುವುದು. ಇದರ ಬಗ್ಗೆ ನನ್ನ ಒಂದೆರಡು ಅನುಭವಗಳನ್ನು ನಿಮ್ಮ ಮುಂದಿಡುತ್ತಿರುವೆ.
- ಇರುಳು ಕಂಡ ಬಾವಿಗೆ...-
- ಅರ್ಶದ್ ಹುಸೇನ್ ಎಂ. ಹೆಚ್
ಇರುಳು ಕಂಡ ಬಾವಿಗೆ ಹಗಲಿಗೆ ಬಿದ್ದಂತೆ ಎಂಬುದೊಂದು ಕನ್ನಡದ ಗಾದೆ. ಸ್ವತಃ ಒಂದು ಅನುಭವ ಆದ ಮೇಲೆ ಗಾದೆ ಸತ್ಯವೆನಿಸಿದ್ದಂತೂ ನಿಜ. ಕಳೆದ ವರ್ಷ ಊರಿಗೆ ಹೋಗಿದ್ದಾಗ ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯವಾಗಿರಲಿಲ್ಲ. ಹಾಗಾಗಿ ಬೊಂಬಾಯಿ ಮುಖಾಂತರವೇ ಹೋಗಬೇಕಾಯ್ತು. ಹಿಂತಿರುಗಿದ ಕೆಲದಿನಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯಾಗಿತ್ತು. ಮುಂದಿನ ಬಾರಿ ಮಂಗಳೂರಿಗೇ ಹೋಗಬೇಕೆಂದು ಅಂದೇ ನಿಶ್ಚಯಿಸಿದೆ.
- ಅಂತರಂಗದಾ ಮೃದಂಗ-
-ವಾಣಿ ರಾಮದಾಸ್
ಈ ಯಾಂತ್ರಿಕ ಯುಗದಲಿ ಟೈಮಿಲ್ಲ ಮಂತ್ರ ಎಲ್ಲರ ಬಾಯಲ್ಲಿ ಜನ ಜನಿತ. ಎಲ್ಲರೂ ಓಡ್ತಾನೇ ಇರ್ತಾರೆ. ಯಾರಿಗೂ ಯಾವುದಕ್ಕೂ ವೇಳೆ ಇಲ್ಲ. ವೇಳೆ ಕಳೆದು ಹೋಗುತ್ತೋ ಗೊತ್ತಿಲ್ಲ. ಯಾಕೆ ಗೊತ್ತಿಲ್ಲ, ಏನು ಗೊತ್ತಿಲ್ಲ, ಅದೇ ಗೊತ್ತಿಲ್ಲ. ಇಲ್ಲ, ಇಲ್ಲ, ಆಗೊಲ್ಲ, ಕಾಟ ಸಲ್ಲ. ಅದನ್ನು ಎಂದಾದರೊಮ್ಮೆ ಬದಿಗಿಡಿ ಸಿಗುವುದು ಸಿಹಿ ಬೆಲ್ಲ.
- ಗಗನಚುಕ್ಕಿ ಮತ್ತು ಭರಚುಕ್ಕಿ-



