- ಅಬು ಧಾಬಿಯಲ್ಲಿ ಕನ್ನಡ ರಾಜ್ಯೋತ್ಸವ-
ಅಬುಧಾಬಿ ಕನ್ನಡ ಸಂಘವು 51ನೆಯ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಕಾರ್ಯಕ್ರಮವು ಹಾಸ್ಯ, ಕವನವಾಚನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡಿದ್ದು ನೆರೆದಿದ್ದ ಕನ್ನಡಿಗರ ಮನಸೂರೆಗೊಂಡಿತು.
- ದುಬೈನಲ್ಲಿ ಕನ್ನಡ ರಾಜ್ಯೋತ್ಸವ-
ದುಬೈ ಕರ್ನಾಟಕ ಸಂಘ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಕಾನ್ಸುಲೇಟ್ ಹಾಲಿನಲ್ಲಿ. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕನ್ನಡಿಗರೆಲ್ಲರೂ ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- ಮುಕ್ತ ಆಹ್ವಾನ...-
ಕಳೆದೆರಡು ವಾರಗಳಿಂದ ಕನ್ನಡಧ್ವನಿಯ ಹೊಸ ರೂಪದ ಪರಿಚಯ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹಾಗೆಯೇ ನೀವೂ ಕುತೂಹಲದಿಂದ ಅಲ್ಲಲ್ಲಿ ಕ್ಲಿಕ್ಕಿಸಿ ಹೊಸ ತಾಣದ ರೂಪರೇಷೆಗಳನ್ನು ಜಾಲಾಡಿಸಿದ್ದೀರೆಂದು ನಂಬಿದ್ದೇನೆ.
- ಏನ್ ತಿಂದ್ರೀ !!-
- ಶ್ರೀನಾಥ್ ಭಲ್ಲೆ
ಸಂಜೆ ತಂಪು ಗಾಳಿ ಸೇವನೆಗೆ ಹೊರಟಿದ್ದೆ. ಮನಸ್ಸಿಗೆ ಬಂದ ಹಾಡನ್ನು ಗುನುಗುನಿಸುತ್ತಾ ಹಾಗೇ ನೆಡೆಯಲು ವಕ್ರಮೂತಿ ಸುಂದರೇಶ ಸಿಕ್ಕ. ಹಾಗೇ ಅವನೊಡನೆ ಹೆಜ್ಜೆ ಹಾಕುತ್ತಾ ನನಗೇ ಅರಿವಿಲ್ಲದೆ ಕದಂಬ ರೆಸ್ಟೋರೆಂಟ್’ನಲ್ಲಿ ಕುಳಿತಿದ್ದೆ.
- ಹೇ ಮಾರಿಕಾಂಬೇ-
- ಗುರು ಬಬ್ಬಿಗದ್ದೆ
ವಂದಿಪೆನು ಮಾರಿಕಾಂಬೆ ನಿನ್ನ ಮಡಿಲಿಗೆ
ಭಕ್ತ ಜನರ ಪೊರೆವ ಪ್ರೀತಿವಿತ್ತ ತಾಯಿಗೆ
ಸಿರಸಿಪುರದ ನಡುವೆ ಇರುವ ಲೋಕಮಾತೆಗೆ
ಕರುಣೆಯಿಂದ ವರವ ನೀಡ್ವ ಲೋಕಜನನಿಗೆ ೧
- ಇದೋ ಬಂತು ದೀಪಾವಳಿ ! !-
- ದಿವ್ಯಾ ರಾವ್
ಇದೋ ಬಂತು ಬೆಳ್ಳ ಬೆಳಕಿನ ದೀಪಗಳ ಹಬ್ಬ
ಅಂಧಕಾರವ ತೊಳೆದು, ಬಾಳ ಬೆಳಗುವ ಹಬ್ಬ
ಅಬಾಲ ವೃದ್ಧರು ಒಂದಾಗಿ ನಲಿಯುವ ಹಬ್ಬ
ಮನೆ ಮನದಿ ಬೆಳಕ ಚೆಲ್ಲುವ ಹಬ್ಬ



