- ಶಾಂತಿಯ ಸಂದೇಶ -
-ಇರ್ಶಾದ್ ಮೂಡಬಿದ್ರಿ, ದುಬೈ
ಯಾವುದೇ ಒಂದು ಧರ್ಮವಾಗಲಿ ಅದು ಹೊಡೆ ಬಡಿ ಕೊಲ್ಲು ಎಂದು ಕಲಿಸುವುದಿಲ್ಲ. ಪರಸ್ಪರ ಪ್ರೀತಿ-ಸಹಬಾಳ್ವೆಯನ್ನೇ ಕಲಿಸುತ್ತದೆ. ಅದು ಜನರಲ್ಲಿ ಶಾಂತಿಯನ್ನೇ ಹರಡು ಎಂದು ಬೋಧಿಸುತ್ತದೆ.
- ಸ್ವಾತಂತ್ರ್ಯದ ನೆರಳಲ್ಲಿ ಚಿನ್ನದ ಸುಖ-
-ಗೋಪಿನಾಥ ರಾವ್.
ಈ ಸ್ವಾತಂತ್ರ್ಯ ದಿನಕ್ಕೆ ವಿಶೇಷ ಕಳೆ ಕೊಟ್ಟಿರುವುದು ಭಾರತ ಗೆದ್ದ ಒಲಿಂಪಿಕ್ ಚಿನ್ನ. ಸ್ವಲ್ಪ ಮಂದಿಗೆ ಚಿನ್ನ ಗೆದ್ದ ಹುಡುಗನ ಹೆಸರು ಅಭಿನವ್ ಬಿಂದ್ರಾ ಅಂತಲೂ ಗೊತ್ತಿಲ್ಲ. ಬಹುತೇಕ ಮಂದಿಗೆ ಆತನ ಹೆಸರು ಬಿಂದ್ರಾ ಮತ್ತು ಆತ ಗೆದ್ದದ್ದು ಶೂಟಿಂಗ್ ಚಿನ್ನ ಎಂದಷ್ಟೇ ಗೊತ್ತು. ನಿಜವಾದ ಸ್ಪರ್ಧಾ ವಿಭಾಗವಂತೂ ಸುದ್ದಿದಾರರಿಗೆ ಮಾತ್ರ ಗೊತ್ತು. ಆದರೂ ಭಾರತ ಚಿನ್ನ ಗೆದ್ದಿದೆ.
- ಕನ್ನಡ ಕಲಿ ಸಂಚಿಕೆ ಇಲ್ಲಿದೆ -
ಪ್ರಿಯ ಕನ್ನಡ ಕಲಿಗಳೆ
ಕನ್ನಡ ಕಲಿಯ ಜೂನ್ ಸಂಚಿಕೆ ಇಲ್ಲಿದೆನಿಮ್ಮ ಕನ್ನಡ ಕೂಟ, ಗೆಳೆಯರು, ಮತ್ತು ಆಸಕ್ತರೊಂದಿಗೆ ಈ ಪತ್ರಿಕೆಯನ್ನು ಮುಕ್ತವಾಗಿ ಹಂಚಿಕೊಳ್ಳಿ.
- ಬಿಸಿ ಬಿಸಿ ಪ್ರಶ್ನೆಗಳಿಗೆ ಬಿಸಿಯಾರದ ಉತ್ತರಗಳು !!-
- ಗೋಪೀನಾಥ ರಾವ್
ಮನಸ್ಸಿನಲ್ಲಿ ಎದ್ದ ಪ್ರಶ್ನೆಗೆ ಉತ್ತರ ಸಿಗದೇ ಇದ್ದರೆ ಏನು ಮಾಡ್ತೀರಾ? ತಲೆ ಕೆಡಿಸಿಕೊಳ್ಳುತ್ತೀರಾ? ಸತ್ತುಹೋಗಲಿ ಎಂದು ಮರೆತು ಬಿಡ್ತೀರಾ? ಛೆ.. ಹಾಗೆ ಮಾಡಬೇಡಿ.
- ಕೃಷ್ಣ ಕೃಪೆ ಮಾಡೋ...-
ಇದನ್ನು ಕಾಂಗ್ರೆಸ್ಸಿನ ಮಹಾಯೋಜನೆ ಎನ್ನಿ, ರಾಜ್ಯ ನಾಯಕರುಗಳಿಲ್ಲದ ದಿವಾಳಿತನದ ಸಾಕ್ಷಿ ಎನ್ನಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸಮರ್ಥವಾಗಿ ಹಿನ್ನಡೆಸಿದ ಕೃಷ್ಣರಿಗಿಂತ ಉತ್ತಮ ನಾಯಕರಿಲ್ಲ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ (ಸೋನಿಯಾ ಎಂದೂ ಓದಿಕೊಳ್ಳಬಹುದು) ನಿರ್ಧಾರಕ್ಕೆ ಬಂದಿದೆ.
- ಬಾಳಲು ಬಿಡದ ಠಾಕರೆಗಳು-
- ಗೋಪೀನಾಥ ರಾವ್
ಮುಂಬೈ ಮಹಾರಾಷ್ಟ್ರಿಗರಿಗೆ ಮಾತ್ರ ಸೇರಿದ್ದು ಅನ್ನುವ ಕೂಗು ಹಿಂದೊಮ್ಮೆ ಕೂಡ ಬಂದಿತ್ತು. ಆಗ ಈ ಮಾತನ್ನು ಹೇಳಿದ್ದು ಬಾಳಾ ಠಾಕರೆ. ಸುಮಾರು ಮೂರು ದಶಕಗಳ ನಂತರ ಇತಿಹಾಸ ಪುನರಾವರ್ತನೆಯಾಗಿದೆ. - ಹೊಸ ವರ್ಷದ ಹೊಸ ಆಲೋಚನೆಗಳು-
- ಗೋಪೀನಾಥ ರಾವ್
೨೦೦೮ರಲ್ಲಿ ಕನ್ನಡಧ್ವನಿಯಲ್ಲಿ ಏನು ಹೊಸತು?" ಅಂತ ಒಬ್ಬರು ಹಿರಿಯರು ಕೇಳಿದರು. ಪ್ರಾಮಾಣಿಕವಾಗಿ ಹೇಳುವುದಾದರೆ ನಾವು ಏನೂ ಹೊಸ ಯೋಜನೆಗಳನ್ನು ಹಾಕಿಕೊಂಡಿಲ್ಲ. ಆದರೂ ಏನೂ ಹೊಸತಿಲ್ಲ ಅನ್ನಲಿಕ್ಕಾಗುತ್ತದೆಯೇ? "ಓದುಗರಲ್ಲಿ ಈ ಪ್ರಶ್ನೆ ಹಾಕಿ ಮುಂದೆ ಉತ್ತಮ ಯೋಜನೆ ಸಿಕ್ಕಿದರೆ ಕೈಗೆತ್ತಿಕೊಳ್ಳುತ್ತೇವೆ" ಎಂದು ಸುತ್ತು ಬಳಸಿ ಉತ್ತರ ಹೇಳಿದೆ.
- ಮುಕ್ತ ಆಹ್ವಾನ...-
ಕಳೆದೆರಡು ವಾರಗಳಿಂದ ಕನ್ನಡಧ್ವನಿಯ ಹೊಸ ರೂಪದ ಪರಿಚಯ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹಾಗೆಯೇ ನೀವೂ ಕುತೂಹಲದಿಂದ ಅಲ್ಲಲ್ಲಿ ಕ್ಲಿಕ್ಕಿಸಿ ಹೊಸ ತಾಣದ ರೂಪರೇಷೆಗಳನ್ನು ಜಾಲಾಡಿಸಿದ್ದೀರೆಂದು ನಂಬಿದ್ದೇನೆ.
- ಸಮಕಾಲೀನ ಕನ್ನಡ ಕಂಡ ಅಪರೂಪದ ಬರಹಗಾರ : ಡುಂಡಿರಾಜ್-
- ಗೋಪೀನಾಥ ರಾವ್
"ಪಾಡ್ಯ ಬಿದಿಗೆ ತದಿಗೆ" ಓದಿದ ದಿನದಿಂದಲೂ ಡುಂಡಿರಾಜ್ ಅವರನ್ನು ಕಂಡು ಮಾತಾಡಿಸಬೇಕು ಎನ್ನುವ ನನ್ನೊಳಗಿನ ತುಡಿತ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಕಾರಣಗಳು ಹಲವಾರು. ಸಿಗುವ ಇಪ್ಪತ್ತೋ ಇಪ್ಪತ್ತೆರಡೋ ದಿನದ ರಜೆಗಳಲ್ಲಿ ನಾನೆಣಿಸಿದಂತೆ ವ್ಯವಹಾರಗಳು ನಡೆದದ್ದೇ ಕಡಿಮೆ. ಎದುರಿಗೆ ಸಿಕ್ಕಿದವನೇ ಆತ್ಮೀಯ, ಮಾಡಿ ಮುಗಿಸಿದ್ದೇ ಆಗಬೇಕಾಗಿದ್ದ ಕೆಲಸ ಎಂದು ಕೊಂಡು ಹೋದ ದಾರಿಗೇ ದನ ಹೊಡೆಯುತ್ತಾ ರಜೆ ಪೂರೈಸಿ ಬರುತ್ತಿದ್ದ ವರ್ಷಗಳಲ್ಲಿ ನಡುವೆ ಒಮ್ಮೆ ಸಿಕ್ಕಿದ ಸಮಯದಲ್ಲಿ ಡುಂಡಿರಾಜರ ಬಗೆಗೆ ವಿಚಾರಿಸಿದಾಗ "ಅವರೀಗ ಬೆಳಗಾವಿಯೋ ಬಿಜಾಪುರವೋ ಅಂತ ಕಾಣುತ್ತೆ" ಎಂಬ ಉತ್ತರ ಸಿಕ್ಕಿತ್ತು. ಈ ಬಾರಿ ರಜೆಯ ಸಿದ್ಧತೆಯಾಗುತ್ತಿದ್ದಂತೆ ಅವರು ಮಂಗಳೂರಿನಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಶ್ರೀವತ್ಸ ಜೋಶಿಯವರನ್ನು ಕೇಳಿ ತಿಳಿದುಕೊಂಡಿದ್ದೆ. ಮಂಗಳೂರಲ್ಲಿ ಅವರ ಸದ್ಯದ ಟೆಲಿಫೋನ್ ನಂಬ್ರ ನಾ ದಾ ಶೆಟ್ಟಿಯವರಲ್ಲಿ ಸಿಕ್ಕಿತು. ನಾಳೆ ಬನ್ನಿ ಎಂದರೆ ಪರವಾ ಇಲ್ಲ, ನಾಳದು ಬನ್ನಿ ಎಂದರೆ ಆಗುವುದಿಲ್ಲ, ಬರುವ ವಾರ ಬೆಂಗಳೂರಿಗೆ ಹೋಗಬೇಕು ಎಂಬಿತ್ಯಾದಿ ಕಟ್ಟುಪಾಡುಗಳ ನಡುವೆ ಅವರಿಗೆ ಫೋನ್ ಮಾಡಿದೆ. ಯಾವಾಗ ಬೇಕಿದ್ದರೂ ಬನ್ನಿ ಎನ್ನುವ ಡುಂಡಿರಾಜರ ಉತ್ತರ ಬಹಳಷ್ಟು ನೆಮ್ಮದಿ ನೀಡಿತ್ತು.



