- ಕನ್ನಡ ಕಲಿ ಸಂಚಿಕೆ ಇಲ್ಲಿದೆ -
ಪ್ರಿಯ ಕನ್ನಡ ಕಲಿಗಳೆ
ಕನ್ನಡ ಕಲಿಯ ಜೂನ್ ಸಂಚಿಕೆ ಇಲ್ಲಿದೆನಿಮ್ಮ ಕನ್ನಡ ಕೂಟ, ಗೆಳೆಯರು, ಮತ್ತು ಆಸಕ್ತರೊಂದಿಗೆ ಈ ಪತ್ರಿಕೆಯನ್ನು ಮುಕ್ತವಾಗಿ ಹಂಚಿಕೊಳ್ಳಿ.
- ಅರಳುತಿದೆ ಮಲ್ಲಿಗೆಯು-
-ಅರುಣ್ ಕುಮಾರ್ ಹೆಚ್ ಎಸ್.
ನಿನ್ನ ಮುಗುಳುನಗೆಯಲ್ಲಿ
ಹರಡುತಿದೆ ಸ೦ತಸವು
ಸುಳಿಗಾಳಿಯಲ್ಲಿ
ನಿನ್ನೊಲವು ಸವಿಜೇನು - ದ್ವಿ-ತ್ರಿವಳಿ ಮಕ್ಕಳ ತಾಯಿ - ಮ್ಯಾರಥಾನ್ ಓಟಗಾರ್ತಿ-
-ಅರ್ಶದ್ ಹುಸೇನ್ ಎಂ. ಹೆಚ್.
ಇದೇನೋ ಹೊಸ ಪದ ಪ್ರಯೋಗವಾಗಿದೆಯೆಲ್ಲಾ. ಅಮೇರಿಕಾದ ನ್ಯೂಯಾರ್ಕ್ ನಲ್ಲಿ ವಾಸವಾಗಿರುವ ಜೆನ್ನಿ ಮಾಸ್ಖೆಯವರು ಜೂನ್ ೧೧-೨೦೦೭ ರಂದು (ಸುಮಾರು ಒಂದು ವರ್ಷದ ಹಿಂದೆ) ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಆರು ಮಕ್ಕಳನ್ನು ಏನೆನ್ನುವುದು? ಇಂಗ್ಲಿಷಿನಲ್ಲಾದರೆ ಸೆಕ್ಟುಪ್ಲೆಟ್ ಎಂಬ ಪದವಿದೆ. ಆದರೆ ಕನ್ನಡದಲ್ಲಿ?
- ರ೦ಗವಲ್ಲಿ-
- ಅರುಣ್ ಕುಮಾರ್ ಹೆಚ್ ಎಸ್.
ನನ್ನ ಮನದ೦ಗಳದಲ್ಲಿ ನಗುತಿಹುದು ರ೦ಗವಲ್ಲಿ
ಮೂಡಿಸಿದ ಜಾಣೆ ಎಲ್ಲಿಹಳೊ ಕಾಣೆ.
ತೆ೦ಗು ಗರಿಗಳ ನಡುವೆ ತು೦ಬು ಚ೦ದಿರನ೦ತೆ



