- ತೇಜಸ್ವಿಯವರ ವೈಚಾರಿಕತೆ ( ಭಾಗ ೨)-
ವ್ಯಕ್ತಿಪೂಜೆ - ವ್ಯಕ್ತಿತ್ವದ ಸಮಾಧಿ:
ಕುಬಿಯದೊಂದು ದುರಂತ ಕಥೆ‘ಕುಬಿ ಮತ್ತು ಇಯಾಲ’ ಕಥೆಯ ಕುಬಿ ಈ ಬಗೆಯ ದುರಂತಕ್ಕೆ ಒಂದು ಉತ್ತಮ ಉದಾಹರಣೆ. ಕುಬಿ ಡಾಕ್ಟರಾಗಿ ಬಂದ ಹೊಸತರಲ್ಲಿ ದ್ವೇಷಿಸುತ್ತಿದ್ದ ರಾಮರಾವ್, ತನ್ನನ್ನು ಗುಣಪಡಿಸಿದರು ಎಂಬ ಕಾರಣಕ್ಕೆ, ಅವರನ್ನು ದೈವತ್ವಕ್ಕೆ ಏರಿಸುತ್ತಾನೆ.
- ಪುಸ್ತಕ ವಿಮರ್ಶೆ: ಮುಹಮ್ಮದ್ ಕುಳಾಯಿ ಅವರ "ಇನ್ನಷ್ಟು ಕಥೆಗಳು"-
-ಇರ್ಶಾದ್ ಮೂಡಬಿದ್ರಿ
ಮುಹಮ್ಮದ್ ಕುಳಾಯಿ ನನ್ನ ಕಾಲೇಜು ದಿನಗಳ ಮೆಚ್ಚಿನ ಕಥೆಗಾರ. ನಾನು ಹೆಚ್ಚಾಗಿ ಅವರ ಕಥೆಗಳನ್ನು ಉದಯವಾಣಿ ಸಾಪ್ತಾಹಿಕ ಹಾಗೂ ಸನ್ಮಾರ್ಗದಲ್ಲಿ ಓದುತ್ತಿದ್ದೆ. ಅದಕ್ಕೀಗ ಪ್ರತಿಕ್ರಿಯೆಗಳನ್ನು ಬರೆಯುತ್ತಿದ್ದೇನೆ. - ಓ, ಮನಸೇ...-
ಡಾ. ಮೀನಾ ಸುಬ್ಬರಾವ್
ಸಲಿನಾಸ್, ಕ್ಯಾಲಿಫೋರ್ನಿಯಾ.ನೀನಿರುವುದು ಕಣ ಕಣಗಳಲಿ,
ಕಾಣದಿರುವುದು ಕಣ್ಣು ಕಣ್ಣುಗಳಲಿ,
ಕರೆದು ಜಯಿಸುವರುಂಟು ನಿನ್ನ,
ಕರೆಯದೇ-ಕೇಳದೇ ನೀ
ಬರುವೆ, ಗೆಲುವಿನ-ಒಲವಿನ ಒಡನಾಟಕೆ. - ನಾನ್ಸೆನ್ಸ್ ಕವಿತೆಗಳು-
- ಸತ್ಯನಾರಾಯಣ ಬಿ ಆರ್
ಸರಕಾರೀ ಆಫೀಸರುಗಳಿಗೆ ಸಂಜೆ ಹೊತ್ತು ವ್ಯಾಯಾಮಕ್ಕೆ ಬೆನ್ನು ಬಗ್ಗಿಸದೇ ಆಡಬಹುದಾದ ಬ್ಯಾಡ್ ಮಿಂಟನ್ ಆಟ ಬೇಕಾಗುವಂತೆ ನಮಗೂ ಗಂಭೀರ ಕವನಗಳ ನಡುವೆ ಹಾಸ್ಯ ಕವನಗಳು!
- ವಿಧಿಯಾಟವೇನು ಬಲ್ಲವರು ಯಾರು?-
- ಶ್ರೀನಾಥ್ ಭಲ್ಲೆ
ಎಂದಿನಂತೆ ಬೆಳಿಗ್ಗೆ ಎದ್ದು ಸ್ನಾನ-ಸಂಧ್ಯಾವಂದನೆ ಮುಗಿಸಿ. ಬಿಸಿ ಬಿಸಿ ಕಾಫಿ ಕುಡಿದು ಅಡಿಗೆಗೆ ಇಟ್ಟೆ. ಶ್ಲೋಕಗಳನ್ನು ಹೇಳಿಕೊಳ್ಳುತ್ತ, ಇನ್ನೊಂದು ಕಡೆ ಉಪ್ಪಿಟ್ಟು ಕೆದಕಿ ತಟ್ಟೆಗೆ ಹಾಕಿ ಮಿಕ್ಕಿದ್ದನ್ನ ಪಾತ್ರೆಯಲ್ಲಿ ಹಾಕಿ ಮುಚ್ಚಿಟ್ಟೆ. ತಿಂಡಿ ತಿಂದು ಮುಗಿಸಿ, ಅಡಿಗೆಯನ್ನೂ ಮುಗಿಸಿ ಡಬ್ಬಿ ಪ್ಯಾಕ್ ಮಾಡಿ ಕೆಲಸಕ್ಕೆ ಹೊರಡಲು ಅಣಿಯಾದೆ.
- ಎ.ಪಿ.ಜೆ. ಅಬ್ದುಲ್ ಕಲಾಂ ಅವರ -ಭಾರತ ೨೦೨೦ರ ದೂರದೃಷ್ಟಿಯಲ್ಲಿ- -
- ಅರ್ಶದ್ ಹುಸೇನ್ ಎಂ.ಹೆಚ್.
(ನಿಕಟಪೂರ್ವ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ -ಭಾರತ ೨೦೨೦ರ ದೂರದೃಷ್ಟಿಯಲ್ಲಿ- ಕೃತಿಯಿಂದ ಆಯ್ದ ಭಾಗದ ಕನ್ನಡ ಅನುವಾದ)
ಸುಭದ್ರ ಭಾರತಕ್ಕೆ ಮೂರು ಸೂತ್ರಗಳು
ಸೂತ್ರ ೧: ಸುಮಾರು ಮೂರು ಸಾವಿರ ವರ್ಷಗಳಿಂದ ವಿಶ್ವದ ಎಲ್ಲೆಡೆಗಳಿಂದ ಅತಿಕ್ರಮಣಕಾರರು ಭಾರತಕ್ಕೆ ಧಾಳಿಯಿಟ್ಟು ನಮ್ಮ ಖಜಾನೆಯನ್ನು ಕೊಳ್ಳೆ ಹೊಡೆದಿದ್ದಾರೆ.
- ಕಡಲಾಚೆಯ ದುಬೈಯಲ್ಲಿ "ಮಹಾ ಶಿವರಾತ್ರಿ"ಯ ಸಂಭ್ರಮದ ಆಚರಣೆ :-
- ನ್ಯಾಮತಿ ಎಸ್. ವಿಶ್ವನಾಥ್.
ದುಬ್ಯೆನ ಕನ್ನಡಕೂಟ ಮತ್ತು ಬಸವ ಸಮಿತಿಯಿಂದ ಮಾರ್ಚ್ ೦೬ರಂದು
ದುಬ್ಯೆನ ಕರಾಮ ಸೆಂಟರಿನ ಪಾರ್ಟಿ ಹಾಲ್ ನಲ್ಲಿ ಆಯೋಜಿಸಲಾಗಿದ್ದ "ಮಹಾ ಶಿವರಾತ್ರಿ" ಹಬ್ಬದ ಆಚರಣೆಯನ್ನು ಕನ್ನಡಿಗರೆಲ್ಲಾ ಸೇರಿ ಸಂಭ್ರಮ ಸಡಗರಗಳಿಂದ ಆಚರಿಸಿದೆವು.



