ಸಣ್ಣ ಕತೆ
 •    •  
paadadaDiya swarga.jpg

 


                                   -ಅಬ್ದುಲ್ ಹಮೀದ್ ಪಕ್ಕಲಡ್ಕ

(ಈ ಕಥೆಯನ್ನು ಅವರ ಇತ್ತೀಚಿನ ’ಪಾದದಡಿಯ ಸ್ವರ್ಗ’ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ).

ಕೆಲವರಿದ್ದಾರೆ, ಎಲ್ಲಾ ಇದ್ದೂ ಏನೂ ಇಲ್ಲವೆಂದು ಅಳುತ್ತಾರೆ. ಇವರು ಅತೃಪ್ತರು. ಇನ್ನೂ ಕೆಲವರಿದ್ದಾರೆ, ಏನೂ ಇಲ್ಲದಿದ್ದರೂ ಎಲ್ಲ ಇದೆ ಎಂದು ಇದ್ದುದರಲ್ಲಿ ಸಂತೃಪ್ತಿ ಪಡುತ್ತಾರೆ. ನನ್ನ ಬದುಕು ಈ ಎರೆಡೂ ವರ್ಗಗಳಿಗೆ ಸೇರಿಲ್ಲ.  ಆದರೂ ನನ್ನದು ಸುಖೀ ಸಂಸಾರ. ಸರ್ಕಾರಿ ನೌಕರನಾದುದರಿಂದ ಲೆಕ್ಕಾಚಾರದ ಜೀವನ.   ಪೂರ್ತಿ ಓದಿ... »

 •    •  
hutta.jpg

                                  -ಪ್ರೇಮಶೇಖರ


ಪ್ರೊಫೆಸರ್ ನಾಗೇಂದ್ರಸ್ವಾಮಿಯವರಿಗೆ ಈ ಮನೆ ಅನುಕೂಲಕರವಾಗಿರುವಂತೆ ಕಂಡುಬಂದು ನೆಮ್ಮದಿಯೆನಿದೆ.  ಮೊನ್ನೆಯಷ್ಟೇ ಟ್ರ್ಯಾನ್ಸ್‍ಫರ್ ಆಗಿ ಒಂಟಿಯಾಗಿ ಈ ಊರಿಗೆ ಬಂದಿರುವ ಅವರ ಹೆಂಡತಿ ಹಾಗೂ ಹೈಸ್ಕೂಲಿಗೆ ಹೋಗುವ ಇಬ್ಬರು ಗಂಡುಮಕ್ಕಳಿರುವ ಸಂಸಾರ ಮೈಸೂರಿನಲ್ಲೇ ಇದೆ. 

  ಪೂರ್ತಿ ಓದಿ... »

 •    •  
Satyanarayana

- ಬಿ ಆರ್ ಸತ್ಯನಾರಾಯಣ, ಬೆಂಗಳೂರು. 

ಮಂಜಪ್ಪನ ಕಥೆಯನ್ನು ಬರೆದು ಪ್ರಕಟಿಸುವುದಕ್ಕೆ ಸ್ವತಃ ಕಥಾನಾಯಕನಾದ ಮಂಜಪ್ಪನಿಂದಿಲೇ ನಾನು ಅನುಮತಿ ಪಡೆದಿದ್ದೇನೆ; ಅದೂ ಹದಿನೈದು ವರ್ಷಗಳ ಹಿಂದೆ!   ಪೂರ್ತಿ ಓದಿ... »

 •    •  
irshad3.jpg

 

      ....ಇರ್ಶಾದ್ ಮೂಡಬಿದ್ರಿ

     ಅದು ಬೆತ್ತಲೆ ಮಲಗಿದ ಮರುಭೂಮಿ. ನಮ್ಮ ಸೂರ್ಯನಿಗೆ ಅದೇನೋ ರಸಿಕತನ. ಚುಂಬಿಸಲು ಸದಾ ಓಡಿ ಬರುತ್ತಿರುತ್ತಾನೆ. ಈ ಚಕ್ಕಂದ ನೋಡುತ್ತಾ ನಾನು ಬಸ್ಸಿಗೆ ಕಾಯುತ್ತಾ ನಿಂತಿರುವೆನು.   ಪೂರ್ತಿ ಓದಿ... »

 •    •  

                                     -ಸುರಭಿ

ಸೂರ್ಯನು ಪಶ್ಚಿಮದಲ್ಲಿ ಮುಳುಗಿ ಹೊತ್ತು ಸರಿದಿತ್ತು.ಗ೦ಗ ಎ೦ದಿನ೦ತೆ ಕೆಲಸ ಬಿಟ್ಟು ಮನೆ ಕಡೆ ನಡೆಯುತ್ತಿದ್ದಳು."ಗ೦ಗ, ಕೆಲಸದಿ೦ದ ಬರ್ತಾ ಇದ್ದಿಯಾ?" ವಿಶಾಲಕ್ಕ ದಾಮು ಅ೦ಗಡಿಗೆ ಬೀಡಿ ಕೊಡಲು ಹೋಗುವವಳು ಒ೦ದು ಫರ್ಲಾ೦ಗ್ ದೂರದಿ೦ದಲೇ ಗ೦ಗ ಬಸ್ ಇಳಿದು ಬರುವುದನ್ನು ಕ೦ಡು ಕೇಳಿದಳು. "ಹೌದು ವಿಶಾಲಕ್ಕ.." ಗ೦ಗ ಆ ಬದಿಗೆ ನೋಡದೆ ಮಾರ್ಗದಲ್ಲಿ ದಾಪುಗಾಲು ಹಾಕತೊಡಗಿದಳು.   ಪೂರ್ತಿ ಓದಿ... »

premashekhara

- ಪ್ರೇಮಶೇಖರ
cherryprem@gmail.com

ಇದು ಹೀಗೇ ಮುಂದುವರೆದರೆ ಪರಿಸ್ಥಿತಿ ಬಿಗಡಾಯಿಸಿಬಿಡುತ್ತದೆ ಎಂದು ಕನಕಾಳಿಗೆ ಅನಿಸಿದ್ದು ಅವಳ ಗಂಡ ಮಾನಪ್ಪನಿಗೆ ತಿಳಿಯಲಿಲ್ಲ.  ತಿಳಿದರೂ ಅದಕ್ಕೆ ಸೊಪ್ಪು ಹಾಕುವ ಜಾಯಮಾನದವನೇನೂ ಅವನಲ್ಲ.  ಇದು ಕನಕಾಳಿಗೂ ಗೊತ್ತು.    ಪೂರ್ತಿ ಓದಿ... »

srinath.jpg

- ಶ್ರೀನಾಥ್ ಭಲ್ಲೆ 

ಎಂದಿನಂತೆ ಬೆಳಿಗ್ಗೆ ಎದ್ದು ಸ್ನಾನ-ಸಂಧ್ಯಾವಂದನೆ ಮುಗಿಸಿ. ಬಿಸಿ ಬಿಸಿ ಕಾಫಿ ಕುಡಿದು ಅಡಿಗೆಗೆ ಇಟ್ಟೆ. ಶ್ಲೋಕಗಳನ್ನು ಹೇಳಿಕೊಳ್ಳುತ್ತ, ಇನ್ನೊಂದು ಕಡೆ ಉಪ್ಪಿಟ್ಟು ಕೆದಕಿ ತಟ್ಟೆಗೆ ಹಾಕಿ ಮಿಕ್ಕಿದ್ದನ್ನ ಪಾತ್ರೆಯಲ್ಲಿ ಹಾಕಿ ಮುಚ್ಚಿಟ್ಟೆ. ತಿಂಡಿ ತಿಂದು ಮುಗಿಸಿ, ಅಡಿಗೆಯನ್ನೂ ಮುಗಿಸಿ ಡಬ್ಬಿ ಪ್ಯಾಕ್ ಮಾಡಿ ಕೆಲಸಕ್ಕೆ ಹೊರಡಲು ಅಣಿಯಾದೆ.   ಪೂರ್ತಿ ಓದಿ... »

ಗೋಪಿನಾಥ್ ರಾವ್

- ಗೋಪೀನಾಥ ರಾವ್

ಅಮ್ಮ ಎಬ್ಬಿಸಿದಾಗ ಯಾರೋ ಏನೋ ಎಲ್ಲಿಯೋ ಎಂದು ತಿಳಿಯಲು ಎರಡು ಮೂರು ನಿಮಿಷ ತಗಲಿತ್ತು. ಎದ್ದು ಕುಳಿತೆ.
ಅಮ್ಮ ಹೆಗಲು ಹಿಡಿದು ಅಲುಗಾಡಿಸಿ ಇಳಿದ ಸ್ವರದಲ್ಲಿ ಹೇಳಿದ್ದಳು. "ನಿನ್ನ ಆ ಡ್ರಾಯಿಂಗ್ ಮಾಸ್ತರರು... ಇದೀಗ ತೀರಿಹೋದರಂತೆ... ಹೋಗಿ ಬಾ..."   ಪೂರ್ತಿ ಓದಿ... »

srinath.jpg

- ಶ್ರೀನಾಥ್ ಭಲ್ಲೆ 

ಹಿಂದಿನ ರಾತ್ರಿ ಬಹಳ ಯಾತನೆಯಾಗಿ ಆಸ್ಪತ್ರೆಗೆ ಸೇರಿದ್ದೆ. ಹೊರಗೆ ಏನು ನೆಡೆದಿದೆ ಎಂದಾಗಲಿ, ನನಗಾಗಿ ಯಾರು ಕಾದಿದ್ದರೆ ಎಂದಾಗಲಿ ಒಂದೂ ಅರಿಯೆ. ಬೆಳಿಗ್ಗೆಯೂ ಹಾಗೇ ನೋವು ಇದ್ದೇ ಇತ್ತು. ಕಣ್ತೆರೆಯ ಹೊರಟರೆ ರೆಪ್ಪೆಗಳು ಅನುಮತಿ ನೀಡಲಿಲ್ಲ. ಮನವೂ ಒಪ್ಪಲಿಲ್ಲ.   ಪೂರ್ತಿ ಓದಿ... »

premashekhara

- ಪ್ರೇಮಶೇಖರ, ಪಾಂಡಿಚೆರಿ 

ಬೀಗ ತೆರೆದು ಬಾಗಿಲು ದೂಡುತ್ತಿದ್ದಂತೇ ನೆಲದ ಮೇಲೆ ಮುಖವಡಿಯಾಗಿ ಬಿದ್ದ ಇನ್‍ಲ್ಯಾಂಡ್ ಲೆಟರ್‍‍ನಲ್ಲಿ ಅಪ್ಪನ ಹೆಸರು ಕಂಡು ಸರಕ್ಕನೆ ಬಾಗಿ ಎತ್ತಿಕೊಂಡು ಹಾಸಿಗೆಯ ಅಂಚಿನಲ್ಲಿ ಕೂತು ಪರಪರ ಬಿಡಿಸಿ ಅಲ್ಲಿದ್ದ ನಾಲ್ಕು ಸಾಲುಗಳನ್ನು ಓದುತ್ತಾ ಹೋದಂತೆ ಗಾಬರಿಗೊಳ್ಳತೊಡಗಿದೆ.   ಪೂರ್ತಿ ಓದಿ... »

Syndicate

Syndicate content
Syndicate content