ವಿಶೇಷ ಲೇಖನ
chaironbaloons.jpg

                                --ಅರ್ಶದ್ ಹುಸೇನ್ ಎಂ.ಹೆಚ್.

ಮಿಸ್ಟರ್ ಬೀನ್ ಶೃಂಖಲೆ ನೋಡಿದ್ದಿರಲ್ಲ, ಮಗುವೊಂದು ಅಯಾಚಿತವಾಗಿ ಮಿಸ್ಟರ್ ಬೀನ್ ತೆಕ್ಕೆಗೆ ಬಿದ್ದು ಮಗುವಿನಿಂದ ಕಳಚಿಕೊಳ್ಳಲಾಗದೇ ಮನರಂಜನಾ ಕೇಂದ್ರದಲ್ಲಿ ಅನುಭವಿಸುವ ರಗಳೆಯೇ ಇಲ್ಲಿ ಹಾಸ್ಯಕ್ಕೆ ವಸ್ತು. ಕಡೆಯಲ್ಲಿ ಬೆಲೂನುಗಳನ್ನು ಮಗುವಿನ ಗಾಲಿಕುರ್ಚಿಗೆ ಕಟ್ಟಿದಾಗ ಅದು ಎತ್ತರಕ್ಕೆ ಹಾರಿ ಬಳಿಕ ಮಿಸ್ಟರ್ ಬೀನ್ ಪೆನ್ಸಿಲ್ ಒಂದನ್ನು ಬಾಣದಂತೆ ಪ್ರಯೋಗಿಸಿ ಬೆಲೂನು ಒಡೆದು ಮಗುವನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿ ಮೆರೆದಿದ್ದು ಚಿತ್ರಕ್ಕೆ ಭರ್ಜರಿ ಯಶಸ್ಸು ತಂದು ನೀಡಿತ್ತು.   ಪೂರ್ತಿ ಓದಿ... »

kambara samvada (28).jpg

               --ಅರ್ಶದ್ ಹುಸೇನ್ ಎಂ.ಹೆಚ್.

ಕಳೆದ ವಾರ ಹಯವದನ ನಾಟಕ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಚಂದ್ರಶೇಖರ ಕಂಬಾರರೊಂದಿಗೆ ನಡೆಸಿದ ಸಂವಾದದ ಕೆಲವು ತುಣುಕುಗಳು :

ತುಂಬಿದ ಕೊಡ ತುಳುಕುವುದಿಲ್ಲವಂತೆ. ಚಿಕ್ಕಪುಟ್ಟ ಸಾಧನೆ ಮಾಡಿದವರು ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿದ್ದವರು ಕಂಬಾರರೊಂದಿಗೆ ಕೊಂಚಕಾಲ ಕಳೆದಾಕ್ಷಣ ಈ ಗಾದೆ ವೇದ್ಯವಾಗುವುದು ಖಚಿತ.    ಪೂರ್ತಿ ಓದಿ... »

7992.jpg

ಕಳೆದ ವಾರ ದುಬೈಯಲ್ಲಿ ಕಾರ್ಯಕ್ರಮ ನೀಡಲು ಪ್ರಥಮ ಬಾರಿಗೆ ಆಗಮಿಸಿದ್ದ ಅರುಣ್ ಕುಮಾರ್ ಅವರೊಂದಿಗೆ ಕನ್ನಡ ಧ್ವನಿ ನಡೆಸಿದ ಸಂದರ್ಶನದ ಆಯ್ದ ಭಾಗಗಳು:   ಪೂರ್ತಿ ಓದಿ... »

ಮತ್ತೊಬ್ಬ ರಾಜ, ಇನ್ನೊಂದು ಅರಮನೆ, ತೀರದು ಗೋಳಿನ ಕೊನೆ...

                                                   -  ಗುರು ಬಬ್ಬಿಗದ್ದೆ
   ಕನ್ನಡ ನಾಡಿನಲ್ಲಿ ಅಕಾಲಿಕ ಮಳೆಯಂತೆ ಇನ್ನೊಂದು ಅಕಾಲಿಕ ಪ್ರಸವವಾಗುತ್ತಿದೆ ಅರ್ಥಾಥ್ ಮತ್ತೊಮ್ಮೆ ಚುನಾವಣೆ   ಪೂರ್ತಿ ಓದಿ... »

bengaluru airport logo.jpg

                                          -ಸುನಿಲ್ ಮಲ್ಲೇನಹಳ್ಳಿ

ಸ್ನೇಹಿತರೇ, ಇನ್ನು ಬೆರೆಳೆಣಿಕೆಯ ದಿನಗಳಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ಈ ವಿಮಾನ ನಿಲ್ದಾಣದಿಂದ ನಾನಾ ದೇಶಗಳ ನಾನಾ ನಗರಗಳಿಗೆ ದಿನನಿತ್ಯ ಒಂದರ ಹಿಂದೆ ಒಂದರಂತೆ ವಿಮಾನಗಳು ಹಾರಾಡುತ್ತಲೇ ಇರುತ್ತವೆ. ಇದು ಕನ್ನಡಿಗರಿಗಂತೂ ಸಂತಸ ತರುವ ವಿಷಯವೇನೋ ಸರಿ.   ಪೂರ್ತಿ ಓದಿ... »

7162.jpg

ಮಣಿಪಾಲದ ಮಣಿಪಾಲ ಮೀಡಿಯಾ ನೆಟ್ ವರ್ಕ ಲಿಮಿಟೆಡ್ ಸ೦ಸ್ಥೆ ಇದರ ಆಶ್ರಯದಲ್ಲಿ ಕಳೆದ ಸುಮಾರು 25 ವರುಷಗಳಿ೦ದ ಮುದ್ರಣಗೊ೦ಡು ಕರಾವಳಿಯಲ್ಲಿ ಮನೆ ಮಹಿಳೆಯರ ಪ್ರೀತಿಯ ಹಾಗೂ ಎಲ್ಲರ ಮನೆ ಮಾತಾಗಿರುವ ಪ್ರಸಿದ್ದ ತರ೦ಗವಾರ ಪತ್ರಿಕೆಗೆ ಎಪ್ರಿಲ್ 26ರ೦ದು 25 ವಸ೦ತಗಳನ್ನು ಪೂರೈಸಿದ ರಜತ ಸ೦ಭ್ರಮ’.   ಪೂರ್ತಿ ಓದಿ... »

e-beli.jpg

ಗೋವುಗಳಿಗೆ ಇ-ಬೇಲಿ

-ಅರ್ಶದ್ ಹುಸೇನ್ ಎಂ.ಹೆಚ್.


 ಬೆಳೆಗಾರರಿಗೆ, ರೈತರಿಗೆ ಬೆಳೆ ಬೆಳೆಯುವುದಕ್ಕಿಂತ ಬೆಳೆದ ಬೆಳೆಯ ರಕ್ಷಣೆಯ ಹೊರೆಯೇ ಹೆಚ್ಚು.  ಗದ್ದೆ-ತೋಟಗಳಿಗೆ ಧಾಳಿಯಿಡುವ ಪ್ರಾಣಿಗಳನ್ನು ತಡೆಯಲು ರೈತರು ತೆಗೆದುಕೊಳ್ಳುವ ಕ್ರಮ ಒಂದೆರೆಡಲ್ಲ.  ಮುಳ್ಳು ಬೇಲಿ, ತಂತಿ ಬೇಲಿ, ಕಲ್ಲಿನ ಬೇಲಿ, ಪಾಪಾಸುಕಳ್ಳಿಯ ಬೇಲಿ ಇನ್ನೂ ಹತ್ತು-ಹಲವಾರು ತರಹದ ರಕ್ಷಣಾ ಕೋಟೆಗಳನ್ನು ಕಟ್ಟಿದರೂ ಕೆಲವೊಮ್ಮೆ ಜಾನುವಾರುಗಳು ಎಲ್ಲೋ ಒಂದೆಡೆ ನುಸುಳಲು ಮಾರ್ಗ ಹುಡುಕಿ ನುಗ್ಗಿಯೇ ನುಗ್ಗುತ್ತವೆ.  ತೋಟಗಳಿಗೆ ಧಾಳಿಯಿಡುವ
ಮಂಗಗಳಿಗಂತೂ  ಎಷ್ಟೆತ್ತರ ಬೇಲಿಯಿದ್ದರೂ ನಿರರ್ಥಕ.   ಪೂರ್ತಿ ಓದಿ... »

ತೇಜಸ್ವಿ


- ಬಿ ಆರ್ ಸತ್ಯನಾರಾಯಣ

ತೇಜಸ್ವಿ ಮಾರ್ಗಪ್ರವರ್ತಕನಲ್ಲ; ಅಭಿವ್ಯಕ್ತಿ ಮಾರ್ಗಗಳ ಅನ್ವೇಷಕ:


ಇಂದು ನಾವು ಸಾಹಿತ್ಯ ಚರಿತ್ರೆಯಲ್ಲಿ, ಸಾಹಿತಿಯ ಸ್ಥಾನ ನಿರ್ದೇಶನ ಮಾಡುವಾಗಲೆಲ್ಲಾ ಪ್ರವರ್ತಕ, ಆಚಾರ್ಯಪುರುಷ ಎನ್ನುವ ಮಾತನ್ನು ಬಳಸುತ್ತೇವೆ. ಷಟ್ಪದಿಯ ಬ್ರಹ್ಮ, ನವೋದಯ ಸಾಹಿತ್ಯದ ಆಚಾರ್ಯಪುರುಷ, ನವ್ಯಕಾವ್ಯದ ಪ್ರವರ್ತಕ ಇತ್ಯಾದಿ ಇತ್ಯಾದಿ.   ಪೂರ್ತಿ ಓದಿ... »

contest.jpg

ಖ್ಯಾತ ವಾರ್ತಾತಾಣವಾದ ಮ್ಯಾಂಗಲೋರಿಯನ್ ಡಾಟ್ ಕಾಮ್ ತನ್ನ ಮಕ್ಕಳ ಅಂಕಣದಲ್ಲಿ ಭಾಗವಹಿಸುವ ಮಕ್ಕಳ ಪ್ರತಿಭೆಗೆ ಉತ್ತೇಜನ ನೀಡಲು ವಿಶೇಷ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ.   ಪೂರ್ತಿ ಓದಿ... »

ತೇಜಸ್ವಿ

- ಬಿ ಆರ್ ಸತ್ಯನಾರಾಯಣ 

ಜ್ಞಾನದ ಅಹಂಕಾರ ಮತ್ತು ಜ್ಞಾನಮೂಲದ ನಿರಾಕರಣೆ
ಕನ್ನಡ ಪುಸ್ತಕೋದ್ಯಮದ ಬಗ್ಗೆ ತೇಜಸ್ವಿಯವರಿಗೆ ಸ್ಪಷ್ಟನಿಲುವುಗಳಿದ್ದುದ್ದು ಎಲ್ಲರಿಗೂ ತಿಳಿದ ವಿಷಯ. ಕನ್ನಡಿಗರು ಅಭಿಮಾನಶೂನ್ಯರು. ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿಯಿಲ್ಲದವರು. ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಸಾಮಾನ್ಯವಾಗಿ ಇಂತಹ ಆರೋಪ ಮಾಡುವವರು ಸಾಹಿತಿಗಳೆ ಆಗಿರುತ್ತಾರೆ.

  ಪೂರ್ತಿ ಓದಿ... »

Syndicate

Syndicate content
Syndicate content