--ಅರ್ಶದ್ ಹುಸೇನ್ ಎಂ.ಹೆಚ್.
ಮಿಸ್ಟರ್ ಬೀನ್ ಶೃಂಖಲೆ ನೋಡಿದ್ದಿರಲ್ಲ, ಮಗುವೊಂದು ಅಯಾಚಿತವಾಗಿ ಮಿಸ್ಟರ್ ಬೀನ್ ತೆಕ್ಕೆಗೆ ಬಿದ್ದು ಮಗುವಿನಿಂದ ಕಳಚಿಕೊಳ್ಳಲಾಗದೇ ಮನರಂಜನಾ ಕೇಂದ್ರದಲ್ಲಿ ಅನುಭವಿಸುವ ರಗಳೆಯೇ ಇಲ್ಲಿ ಹಾಸ್ಯಕ್ಕೆ ವಸ್ತು. ಕಡೆಯಲ್ಲಿ ಬೆಲೂನುಗಳನ್ನು ಮಗುವಿನ ಗಾಲಿಕುರ್ಚಿಗೆ ಕಟ್ಟಿದಾಗ ಅದು ಎತ್ತರಕ್ಕೆ ಹಾರಿ ಬಳಿಕ ಮಿಸ್ಟರ್ ಬೀನ್ ಪೆನ್ಸಿಲ್ ಒಂದನ್ನು ಬಾಣದಂತೆ ಪ್ರಯೋಗಿಸಿ ಬೆಲೂನು ಒಡೆದು ಮಗುವನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿ ಮೆರೆದಿದ್ದು ಚಿತ್ರಕ್ಕೆ ಭರ್ಜರಿ ಯಶಸ್ಸು ತಂದು ನೀಡಿತ್ತು.   ಪೂರ್ತಿ ಓದಿ... »
-ಗೋಪೀನಾಥ ರಾವ್
ನಮ್ಮ ನೆರೆಮನೆಯಲ್ಲಿ ಸರಕಾರಿ ಅಧಿಕಾರಿ
ಅಳತೆ ತೂಕದ್ದಲ್ಲ ಮಾತೂ ಅಧಿಕಾರಿ...!
ಅವರ ಮಗಳ ನಾಯಿ ಬೊಗಳು
ಹಗಲು ರಾತ್ರಿ ಶಬ್ದ ಸಂತೆಗಳು
ನೆಮ್ಮದಿಯ ನಿದ್ದೆ ಇಲ್ಲದೆ ತಲೆ ನೋವು
ನೆರೆಮನೆ ತಾನೇ.. ಸುಮ್ಮನಿದ್ದೆವು ನಾವು   ಪೂರ್ತಿ ಓದಿ... »
-ಶ್ರೀನಾಥ್ ಭಲ್ಲೆ
ಶುದ್ದ ಶುಕ್ರವಾರ ಬೆಳಿಗ್ಗೆ ತಲೆ ಸ್ನಾನ ಮಾಡಿ ತುಳಸೀಕಟ್ಟೆಯನ್ನು ನಾಲ್ಕೂವರೆ ರೌಂಡ್ ಹೊಡೆಯುವಷ್ಟರಲ್ಲಿ ನನ್ನ ಧರ್ಮಪತ್ನಿ ವಿಶಾಲೂಗೆ ಸೊಂಟ ಹಿಡಿದುಕೊಂಡುಬಿಟ್ಟಿತು. ನಿಲ್ಲೋಕ್ಕಾಗದೆ ಕುಸಿಯುವುದರಲ್ಲಿದ್ದಳು. ಹಿಡಿದುಕೊಳ್ಳೋಣ ಅಂತ ಹತ್ತಿರ ಹೋದರೆ ’ಮುಟ್ಟಬೇಡಿ’ ಅಂತ ಕಿರುಚೋದೇ ?   ಪೂರ್ತಿ ಓದಿ... »



